![pm modi--](http://kannada.vartamitra.com/wp-content/uploads/2018/12/pm-modi-1-1-509x381.jpg)
ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಗಿರೀಶ್ ಕಾರ್ನಾಡ್ ಅವರು ಎಲ್ಲಾ ರಂಗದಲ್ಲು ಅದ್ಭುತ ನಟನೆ ಮೂಲಕ ನೆನಪಿನಲ್ಲಿ ಉಳಿಯುತ್ತಾರೆ. ತಮ್ಮ ಅನಿಸಿಕೆಗಳನ್ನು ನೇರವಾಗಿ ಉತ್ಕಟ ಮನೋಭಾವದಿಂದ ಅಭಿವ್ಯಕ್ತಗೊಳಿಸುತ್ತಿದ್ದರು. ಮುಂಬರುವ ವರ್ಷಗಳಲ್ಲು ಕಾರ್ನಾಡ್ ಅವರ ಕೆಲಸಗಳು ಮುಂದುವರಿಯುತ್ತವೆ. ಅವರ ಸಾವಿನಿಂದ ನೋವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
81 ವರ್ಷ ವಯಸ್ಸಾಗಿದ್ದ ಗಿರೀಶ್ ಕಾರ್ನಾಡ್ ಬೆಂಗಳೂರಿನ ಲ್ಯಾವಿಲ್ಲೆ ರಸ್ತೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರ್ನಾಡ್ ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಸಮೀಪ ಇರುವ ಕಲ್ಪಲ್ಲಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲು ಕುಟುಂಬ ನಿರ್ಧರಿಸಿದೆ. ಕಾರ್ನಾಡ್ ಕೋರಿಕೆ ಮೇರೆಗೆ ಯಾವುದೇ ಧರ್ಮದ ಸಂಪ್ರದಾಯವಿಲ್ಲದೆ ಸರಳವಾಗಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.