ಸಿಎಂ ಯೋಗಿ ಆದಿತ್ಯನಾಥ್ ಕುರಿತು ಅವಹೇಳನಕಾರಿ ಪೋಸ್ಟ್: ಮತ್ತೋರ್ವನ ಬಂಧನ

ಗೋರಖ್​ಪುರ್​: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿದ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.

ಸಿಎಂ ಯೋಗಿ ಆದಿತ್ಯನಾಥ್ ಕುರಿತು ಅವಹೇಳನಕಾರಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಕ್ಕೆ ಬಂಧಿಸಲಾಗಿದ್ದು, ಆತನ ಮೊಬೈಲ್​ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುನ್ನಾ ಖಾಸಗಿ ಮಾಧ್ಯಮವೊಂದರ ಸಂಪಾದಕ, ಮಾಲೀಕ ಪ್ರಶಾಂತ್​ ಕನೋಜ್​ ಎಂಬುವವರನ್ನು ಬಂಧಿಸಲಾಗಿತ್ತು. ಸಿಎಂ ಯೋಗಿ ಕುರಿತು ಆಕ್ಷೇಪಾರ್ಹ ವಿಷಯವನ್ನು ಬಿತ್ತರಿಸಿದ್ದಾರೆ ಎಂಬ ಆರೋಪ ಮೇಲೆ ಬಂಧನ ಮಾಡಲಾಗಿತ್ತು. ಇವರು ಕೂಡ ಸಿಎಂ ಯೋಗಿ ಕುರಿತು ಅವಹೇಳನಕಾರಿಯಾಗಿ ಟ್ವೀಟ್​ ಮಾಡಿದ್ದರು ಎನ್ನಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಖಾಸಗಿ ಸದ್ದಿ ಮಾಧ್ಯಮದ ಮಾಲೀಕ ಇಸಿಕಾ ಸಿಂಗ್​ ಮತ್ತು ಸಂಪಾದಕ ಅನುಜ್​ ಶುಕ್ಲ ಎಂಬುವವರನ್ನು ಶನಿವಾರ ನೋಯ್ಡಾದಲ್ಲಿ ಬಂಧಿಸಲಾಗಿತ್ತು.

ಪತ್ರಕರ್ತರ ಬಂಧನದಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹಾಗೂ ವಿರೋಧಕ್ಕೆ ಗ್ರಾಸವಾಗಿತ್ತು. ಹಿರಿಯ ಸಂಪಾದಕ ಸಂಘವು ಇದನ್ನು ವಿರೋಧಿಸಿ, ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದರು.

4 Arrests In 2 Days in UP Over Allegations of “Defaming” Yogi Adityanath

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ