ಸಸಿ ನೆಡುವ ಮೂಲಕ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಾಕ್ಷಿಯಾದ ವಿದ್ಯಾರ್ಥಿಗಳು

ಬೆಂಗಳೂರು, ಜೂ.9-ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಸಿ ನೆಡುವ ಸರಳ ವಿಧಾನದಿಂದ ಜಾಗೃತಿ ಮೂಡಿಸುವ ಕೈಂಕರ್ಯಕ್ಕೆ ವಿದ್ಯಾರ್ಥಿಗಳು ಸಾಕ್ಷಿಯಾದರು.

ಬಂಜರು ಭೂಮಿಯನ್ನು ಅರಣ್ಯವನ್ನಾಗಿಸುವ ಮತ್ತು ಅದಕ್ಕಾಗಿ ಅರಣ್ಯೀಕರಣವನ್ನು ಉತ್ತೇಜಿಸುವ ನಿಟ್ಟಿಯಲ್ಲಿ ಡೀಮ್ಡ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಸೀಡ್‍ಬಾಲ್ ತಯಾರಿಕೆ ಮತ್ತು ವಿತರಣೆಯಂತಹ ಕೆಲಸದ ಮೂಲಕ ಅರಿವು ಮೂಡಿಸಲಾಯಿತು.

ವಿಶ್ವ ಪರಿಸರ ದಿನದ ಅಂಗವಾಗಿ ಜೈನ (ಡೀಮ್ಸ್-ಟು-ಬಿ ಯೂನಿವರ್ಸಿಟಿ)ನ ಸ್ಕೂಲ್ ಆಫ್ ಕಾಮರ್ಸ್, ಸಮಾಜದಲ್ಲಿ ಹಸಿರು ಹೆಚ್ಚಿಸುವ ವಪನ ಅಭಿಯಾನವನ್ನು ಜಯನಗರ ಕ್ಯಾಂಪನ್‍ನಲ್ಲಿ ಆಯೋಜಿಸಲಾಗಿತ್ತು.

ಬಂಜರು ಅರಣ್ಯ ಭೂಮಿಯನ್ನು ನಗರದ ವಿವಿಧ ಟ್ರಕ್ಕಿಂಗ್ ಗ್ರೂಪ್‍ಗಳ ಸಹಯೋಗದೊಂದಿಗೆ ಎನ್‍ಸಿಸಿ ಮತ್ತು ಎನ್‍ಎಸ್‍ಎಸ್ ವಿದ್ಯಾರ್ಥಿಗಳ ಸಹಕಾರದಲ್ಲಿ ಸೀಡ್‍ಬಾಲ್‍ಗಳನ್ನು ಬಿತ್ತುವ ಮೂಲಕ ಅರಣ್ಯನಾಶವನ್ನು ತಡೆಯಲು ಉತ್ತೇಜಿಸುವುದು ಅಭಿಯಾನದ ಉದ್ದೇಶವಾಗಿದೆ. ಈ ಒಂದು ತಿಂಗಳ ಅಭಿಯಾನದ ಭಾಗವಾಗಿ, ಸ್ವಯಂ ಸೇವಾ ಸಂಸ್ಥೆ ಗ್ರೀನ್ ಲೈಫ್ ಸಹಯೋಗದಲ್ಲಿ 1ಲಕ್ಷ ಬೀಜಗಳನ್ನು ಒಳಗೊಂಡ ಸುಮಾರು 2000ಸೀಡ್ ಬಾಲ್‍ಗಳನ್ನು ತಯಾರಿಸಲಾಯಿತು ಮತ್ತು ಬಿತ್ತನೆಗೆ ವಿತರಿಸಲಾಯಿತು.

ಇದೇ ವೇಳೆ ಅದಮ್ಯ ಚೇತನ ಫೌಂಡೇಷನ್ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತ್‍ಕುಮಾರ್ ಮಾತನಾಡಿ ಹಲಸಿನಂತಹ ಮರಗಳನ್ನು ನೆಟ್ಟರೆ ಪ್ರತಿಮರದಿಂದ 700ಕೆಜಿಯಷ್ಟು ಆಮ್ಲಜನಕ ದೊರೆಯುತ್ತದೆ ಎಂದು ಹೇಳಿದರು.

ನಮ್ಮ ಫೌಂಡೇಷನ್ ನಗರದಲ್ಲಿ ಹಸಿರನ್ನು ಮರಳಿ ಪಡೆಯಲು ಆಯೋಜಿಸುತ್ತಿರುವ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಸ್ಕೂಲ್ ಆಫ್ ಕಾರ್ಮಸ್ಸ್ ಸ್ಟಡೀಸ್‍ನ ಸೆಂಟರ್ ಹೆಡ್ ಡಾ. ಬಿ.ಎ.ವಾಸು, ಜೈನ್‍ನ ಪಿಯು ಪ್ರೊ. ನಿರ್ದೇಶಕ ಡಾ.ಬಿ.ಟಿ.ವೆಂಕಟೇಶ್ ಸೇರಿದಂತೆ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ