ವಿರಾಟ್ ನೇತೃತ್ವದ ಟೀಂ ಇಂಡಿಯಾ ಈಗ ಫುಲ್ ಜೋಶ್ನಲ್ಲಿದೆ. ಮೊನ್ನೆ ಸೌಥಾಂಪ್ಟನ್ ಅಂಗಳದಲ್ಲಿ ಹರಿಣಗಳನ್ನ ಭರ್ಜರಿಯಾಗಿ ಬೇಟೆಯಾಡಿದ್ದ ಕೊಹ್ಲಿ ಸೈನ್ಯ ಇದೀಗ ಕಾಂಗರೂಗಳನ್ನ ಬೇಟೆಯಾಡಲು ಸಜ್ಜಾಗುತ್ತಿದೆ. ಮೊದಲ ವಿಶ್ವ ಯುದ್ದಲ್ಲಿ ಗೆದ್ದಿರುವ ಗೆದ್ದಿರುವ ವಿರಾಟ್ ಪಡೆ ಇದೀಗ ಗೆಲುವಿನ ನಾಗಲೋಟವನ್ನ ಮುಂದುವರೆಸಲು ತೀರ್ಮಾನಿಸಿದೆ.
ಕಾಂಗರೂಗಳ ಬೇಟೆಗೆ ಸಜ್ಜಾಗ್ತಿದೆ ಕೊಹ್ಲಿ ಸೈನ್ಯ
ಹೌದು, ಮೊದಲ ಪಂದ್ಯ ಗೆದ್ದು ಬೀಗಿರುವ ಬ್ಲೂ ಬಾಯ್ಸ್ಗೆ ಇದೀಗ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸವಾಲು ಹಾಕಿದೆ. ನಾಳೆ ಲಂಡನ್ ಒವೆಲ್ ಅಂಗಳದಲ್ಲಿ ಹಾಲಿ ಚಾಂಪಿಯನ್ನರ ವಿರುದ್ಧ ಕೊಹ್ಲಿ ಸೈನ್ಯ ದೊಡ್ಡ ಸವಾಲನ್ನ ಎದುರಿಸುತ್ತಿದೆ. ಇದಕ್ಕಾಗಿ ಟೀಂ ಇಂಡಿಯಾ ಆಟಗಾರರು ನೆಟ್ಸ್ ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಹರಿಣಗಳನ್ನ ಭರ್ಜರಿಯಾಗಿ ಬೇಟೆಯಾಡಿದ್ದ ಟೀಂ ಇಂಡಿಯಾ
ಮೊನ್ನೆ ಸಂಥಾಂಪ್ಟನ್ ಅಂಗಳದಲ್ಲಿ ವಿರಾಟ್ ಪಡೆ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಮೂರು ಡಿಪಾರ್ಟ್ಮೆಂಟ್ನಲ್ಲೂ ಶಾಂಧಾರ್ ಪರ್ಫಾಮನ್ಸ್ ಕೊಟ್ಟ ಟೀಂ ಇಂಡಿಯಾ ಗೆಲುವಿನ ನಗಾರಿ ಬಾರಿಸಿ ಶುಭಾರಂಭ ಮಾಡಿತ್ತು. ಈ ಗೆಲುವು ವಿರಾಟ್ ಸೈನ್ಯಕ್ಕೆ ಇನ್ನಿಲ್ಲದ ಕಾನ್ಫಿಡೆನ್ಸ್ ತುಂಬಿದೆ.
ಫಿಂಚ್ ಪಡೆಗೆ ಪಂಚ್ ಕೊಡಬೇಕು ಕೊಹ್ಲಿ ಸೈನ್ಯ
ವಿಶ್ವ ಯುದ್ದದ ಎರಡನೇ ಕದನದಲ್ಲಿ ಕೊಹ್ಲಿ ಪಡೆ ಫಿಂಚ್ ಪಡೆಯನ್ನ ಎದುರಿಸುತ್ತಿದೆ. ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಟೀಂಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಹಿಂದ ಮದಗಜಗಳಂತೆ ಹೋರಾಡಿವೆ. ಇದೀಗ ವಿಶ್ವ ಯುದ್ದದ್ದಲ್ಲಿ ಎರಡು ತಂಡಗಳ ಆಟಗಾರರು ವೀರಾ ಸೇನಾನಿಗಳಂತೆ ಹೋರಾಡಲು ಸಜ್ಜಾಗುತ್ತಿದ್ದಾರೆ.
ಸೇಡು ತೀರಿಸಿಕೊಳ್ಳಲು ಕಾದು ಕುಂತಿದೆ ವಿರಾಟ್ ಸೈನ್ಯ
ಆಸಿಸ್ ವಿರುದ್ಧದ ಸಮರದ ಕುರಿತು ವಿರಾಟ್ ಸೈನ್ಯ ಈ ಪಾಠಿ ತಲೆ ಕೆಡಿಸಿಕೊಳ್ಳಲು ಕಾರಣವಾಗಿರೋದು ಹಳೇ ಸೇಡು . ನಾಲ್ಕು ವರ್ಷದ ಹಿಂದೆ ನಡೆದ ವಿಶ್ವಕಪ್ ಮಹಾ ಸಮರದಲ್ಲಿ ಅಂದು ತವರಿನಲ್ಲಿ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ನಲ್ಲಿ ಧೋನಿ ಪಡೆಯನ್ನ ಸೋಲಿಸಿ ಟೀಂ ಇಂಡಿಯಾದ ವಿಶ್ವ ಕಪ್ ಕನಸನ್ನ ನುಚ್ಚು ನೂರು ಮಾಡಿತ್ತು. ಈ ಸೇಡನ್ನ ನಾಳೆ ನಡೆಯುವ ಕದನದಲ್ಲಿ ಗೆದ್ದು ಇದೀಗ ಅಂದಿನ ನೋವನ್ನ ಮರೆಯಲು ಹೋರಾಡಲಿದೆ.
ಇಷ್ಟೆ ಅಲ್ಲ ಐಪಿಎಲ್ಗೂ ಮುನ್ನ ಕೊಹ್ಲಿ ಸೈನ್ಯ ತವರಿನಲ್ಲಿ ಆಸಿಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನ ಕೈಚೆಲ್ಲಿಕೊಂಡು ಭಾರೀ ಮುಖಭಂಗ ಅನುಭವಿಸಿತ್ತು. ಇದೀಗ ವಿಶ್ವ ಯುದ್ದದ್ದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ.
ಕಾಂಗರೂಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ವಿರಾಟ್ ಪಡೆ ?
ಸದ್ಯ ವಿಶ್ವಯುದ್ದದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಆಡಿರುವ ಎರಡೂ ಪಂದ್ಯಗಳನ್ನ ಗೆದ್ದುಕೊಂಡಿದೆ. ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ಸುಲಭವಾಗಿ ಗೆದ್ದಿದ್ದ ಫಿಂಚ್ ಪಡೆ ನಂತರ ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧ ಕಠಿಣ ಸವಾಲು ಎದುರಿಸಿ 15 ರನ್ಗಳ ರೋಚಕ ಗೆಲುವು ಪಡೆದಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಕೊಹ್ಲಿ ಸೈನ್ಯವನ್ನ ಎದುರಿಸುತ್ತಿದ್ದು ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಒಟ್ಟಾರೆ ವಿಶ್ವ ಕ್ರಿಕೆಟ್ನ ಬದ್ಧ ವೈರಿಗಳೆನಿಸಿಕೊಂಡಿರುವ ಇಂಡೋ – ಆಸಿಸ್ ರಣ ರೋಚಕ ಕದನವನ್ನ ಕಣ್ತುಂಬಿಕೊಳ್ಳಲು ಇಡೀ ಜಗತ್ತೆ ಕಾತರದಿಂದ ಕಾಯುತ್ತಿದೆ.