ಮಹೇಂದ್ರನ ಬೆಂಬಲಕ್ಕೆ ನಿಂತ ಭಾರತ: ಐಸಿಸಿಗೆ ಅಭಿಮಾನಿಗಳಿಂದ ಮಂಗಳಾರತಿ

ಎಂ.ಎಸ್.ಧೋನಿ, ವಿಕೆಟ್ ಹಿಂದೆ ಟೀಮ್ ಇಂಡಿಯಾದ ತೆಡೆಗೋಡೆಯಾಗಿ ನಿಲ್ಲುವ ಕಾವಲುಗಾರ.. ತಂಡ ಸಂಕಷ್ಟದಲ್ಲಿದ್ದಾಗ ನೆರವಿಗೆ ಬರೋ ಆಪದ್ಬಾಂಧವ.

ಜೊತೆಗೆ ತಂಡವನ್ನ ಗೆಲುವಿನ ದಡ ಸೇರಿಸೋ ನಾವಿಕ.. ಹೀಗೆ ಸೇನೆಯ ಕರ್ನಲ್ ಆಗಿರುವ ಧೋನಿ ಬಗ್ಗೆ ಎಷ್ಟೇ ಹೇಳಿದ್ರು ಕಡಿಮೆಯೇ. ಇಂಥ ಮಾಹಿ ಇದೀಗ ಆಂಗ್ಲಾರ ನಾಡಲ್ಲಿ ವಿಶ್ವಕಪ್ ಆಡುತ್ತಿದ್ದಾರೆ. ತಮ್ಮ ಕೊನೆಯ ವಿಶ್ವಕಪ್ ಆಡುತ್ತಿರುವ ಮಹೇಂದ್ರ ವಿಶ್ವಕಪ್ ಗೆಲ್ಲಿಸಿಕೊಡಬೇಕೆಂದು ಪಣತೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಮಾಹಿ ಗ್ಲೌಸ್
ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಭಾರತೀಯ ಸೇನಾ ಲಾಂಛನದ ಗ್ಲೌಸ್ ಧರಿಸಿದ್ದರು. ಸೇನೆಯ ಬಲಿದಾನ ಸಂಕೇತದ ಗ್ಲೌಸ್ ಧರಿಸಿ ವಿಶ್ವಕಪ್‌ನಲ್ಲಿ ಆಡಿದರು. ಈ ಮೂಲಕ ದೇಶ ನಿವಾಸಿಗಳ ಹೃದಯ ಗೆದ್ದರು.. ಇದೇ ಗ್ಲೌಸ್‌ನಲ್ಲಿ ವಿಕೆಂಟ್ ಹಿಂದೆ ಕಾವಲುಗಾರನಾಗಿ ಆ್ಯಂಡಿಲ್ ಪೆಹ್ಲುಕಾಯೊ ಸ್ಟಂಪ್ ಮಾಡಿ ಗಮನ ಸೆಳೆದ್ರು..ಆದ್ರೆ ಧೋನಿಯ ನಡೆಗೆ ಐಸಿಸಿ ಗ್ಲೌಸ್ ಬಳಸದಂತೆ ಬಿಸಿಸಿಐಗೆ ಸೂಚನೆ ನೀಡಿತ್ತು.

ಇಂಗ್ಲೆಂಡ್ಗೆ ಬಂದಿದ್ದು ಕ್ರಿಕೆಟ್ ಆಡೋಕೆ ಎಂದ ಪಾಕ್ ಸಚಿವ
ಐಸಿಸಿ ಸೂಚನೆ ನೀಡುತ್ತಿದ್ದಂತೆ ಪಾಕಿಸ್ತಾನ ಸಚಿವ ಫಾವಾದ್ ಹುಸೇನ್, ಧೋನಿ ವಿರುದ್ಧ ಕೆಂಡಾಕಾರಿದ್ರು.. ಇಂಗ್ಲೆಂಡ್ಗೆ ಧೋನಿ ಬಂದಿರುವುದು ಕ್ರಿಕೆಟ್ ಆಡಲು, ಮಹಾಭಾರತಕ್ಕೆ ಅಲ್ಲ. ಯುದ್ಧ ಬೇಕಾದ್ರೆ, ಸಿರಿಯಾ, ಅಘ್ಘಾನಿಸ್ತಾನ, ರಾವಾಂಡಗೆ ಹೋಗಿ ಎಂದಿದ್ದಾರೆ.. ಈ ಮೂಲಕ ಇಲ್ಲೂ ತಮ್ಮ ವಕ್ರಬುದ್ದಿಯನ್ನ ಪಾಕಿಸ್ತಾನ ಜಗತ್ತಿನ ಮುಂದೆ ತೋರಿಸಿದೆ.

ಮಿಸ್ಟರ್ ಕೂಲ್ ಜೊತೆಗೆ ನಾವಿದ್ದೀವೆಂದ ಅಭಿಮಾನಿಗಳು
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಧೋನಿ ವೈಯಕ್ತಿಕ ಸಂಕೇತದ ಗ್ಲೌಸ್ ಬಳಸದಂತೆ bಛಿಛಿiಗೆ ಸೂಚನೆ ನೀಡಿತ್ತು. ಇದಕ್ಕೆ ಭಾರತೀಯರು ಬೇಸರ ವ್ಯಕ್ತಪಡಿಸಿದ್ರು. ಧೋನಿ ಜೊತೆಗೆ ನಾವಿದ್ದೇವೆ ಅನ್ನೋ ಮೂಲಕ ಇಡೀ ಭಾರತೀಯರೇ ಧೋನಿಯ ಬೆಂಬಲಕ್ಕೆ ನಿಂತರು.. ರಾಜಕೀಯ ನಾಯಕರು, ಕ್ರೀಡಾ ಪಟುಗಳು ಸೇರಿದಂತೆ ಎಲ್ಲರೂ ಟೀಮ್ ಇಂಡಿಯಾ ಚೌಕಿದಾರ ನಮ್ಮ ಹೆಮ್ಮೆಯ ಪ್ರತೀಕ ಎಂಬ ದನಿ ಸಾಮಾಜಿಕ ಜಾಲತಾಣಗಳಲ್ಲಿ ಮೊಳಗಿಸಿದರು.

ಭಾರತೀಯರ ಒಕ್ಕೊರಲ ದನಿಗೆ ಬಿಸಿಸಿಐ ಮನ್ನಣೆ..!
ಐಸಿಸಿ ನಿರ್ಧಾರ ವಿರೋಧಿಸಿದ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯರ ಹೋರಾಟ ಜೋರಾಗಿತ್ತು. ವಿಶ್ವಕಪ್ನಿಂದಲೇ ಬೇಕಾದ್ರೆ ಹೊರ ಬರ್ತೇವೆ ಎಂದು ಅಭಿಮಾನಿಗಳು ಏರು ದನಿಯಲ್ಲಿ ಕ್ಯಾಪೇನ್ ಮಾಡಿದ್ರು.. ಈ ನಡುವೆಯೇ ಬಿಸಿಸಿಐ ಮೇಲೆಯೂ ಒತ್ತಡವೇರಿದ್ರು.. ಭಾರತೀಯರ ಒತ್ತಡಕ್ಕೆ ಮಣಿದ ಬಿಸಿಸಿಐ ಗ್ಲೌಸ್ ಬಳಕೆಗೆ ಅವಕಾಶ ನೀಡುವಂತೆ ಐಸಿಸಿಗೆ ಮನವಿ ಮಾಡಿತು.

ಆನ್ ಫೀಲ್ಡ್ನಲ್ಲಿ ದೇಶ ಭಕ್ತಿ ತೋರಿಸಿದ್ರೆ ತಪ್ಪೇನು ?
ದೇಶದ ಬಲಿದಾನದ ಚಿಹ್ನೆಯನ್ನ ಗ್ಲೌಸ್ನಲ್ಲಿ ಧೋನಿ ತೊಟ್ಟಿದಕ್ಕೆ ಆಕ್ಷೇಪ ಎತ್ತಿರುವ ಐಸಿಸಿ ವಿರುದ್ಧ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಒಬ್ಬ ಆಟಗಾರ ಆನ್ ಫೀಲ್ಡ್ನಲ್ಲಿ ದೇಶ ಭಕ್ತಿ ತೋರಿಸಿದ್ರೆ ತಪ್ಪೇನು ? ಧೋನಿ ಯಾರನ್ನು ನಿಂದಿಸುವಂತ ಅಥವಾ ಅವಮಾನ ಮಾಡುವ ಕೆಲಸ ಮಾಡಿಲ್ಲ ಹೀಗಿದ್ದ ಮೇಲೆ ನಮ್ಮ ದೇಶದ ಅಭಿಮಾನವನ್ನ ಮೆರೆಯೋದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ಪುಲ್ವಾಮ ದಾಳಿಯನ್ನ ಐಸಿಸಿ ಮುಚ್ಚಿಡಲು ಪ್ರಯತ್ನಿಸುತ್ತಿದಯೇ ?
ಧೋನಿ ತನ್ನ ಗ್ಲೌಸ್ನಲ್ಲಿ ಬಲಿದಾನದ ಚಿಹ್ನೆಯನ್ನ ಧರಿಸುವುದರ ಹಿಂದೆ ಪುಲ್ವಾಮ ದಾಳಿಯನ್ನ ಐಸಿಸಿ ಮುಚ್ಚಿಡಲು ಪ್ರಯತ್ನಿಸುತ್ತಿದೆಯೇ ?ಅಥವಾ ಧೋನಿ ಸೇನಾಧಿಕಾರಿಯಾಗಿ ತರಬೇತಿಯನ್ನ ಪಡೆದಿರುವದನ್ನ ಮುಚ್ಚಿಡಲು ಪ್ರಯತ್ನಿಸುತ್ತಿದೆಯೆ ? ಅನ್ನೋದೇ ಈಗಿನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ