ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನಾಲ್ಕು ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ. ಇಂದಿನ ಮೊದಲ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್- ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗ್ತಿದ್ರೆ. 2ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಫ್ಘಾನ್ ವಿರುದ್ಧ ನ್ಯೂಜಿಲೆಂಡ್ ತಂಡ ಹ್ಯಾಟ್ರಿಕ್ ಗೆಲುವಿಗಾಗಿ ಫೈಟ್ ಮಾಡಲಿದೆ..
ಗಾಯಗೊಂಡ ಹುಲಿಯಂತಾಗಿದೆ ಇಂಗ್ಲೆಂಡ್..!
ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದ ಇಂಗ್ಲೆಂಡ್, 2ನೇ ಪಂದ್ಯದಲ್ಲಿ ಪಾಕ್ ವಿರುದ್ಧ ಹೋರಾಟದ ನಡುವೆಯೂ ಸೋತು ಗಾಯಗೊಂಡ ಹುಲಿಯಂತಾಗಿದೆ. ಇಂಗ್ಲೆಂಡ್ ಓಪನರ್ಸ್ಗಳಾದ ಜಾನಿಬೇರ್ ಸ್ಟೋ-ಅಲೆಕ್ಸ್ ಹೇಲ್ಸ್ ಡಿಸೇಂಟ್ ಒಪನಿಂಗ್ ನೀಡೋದ್ರಲ್ಲಿ ವಿಫಲರಾಗ್ತುದ್ದು, ಇಂದಿನ ಬಾಂಗ್ಲಾ ಟೈಗರ್ಸ್ ವಿರುದ್ಧ ಘರ್ಜಿಸಲು ಉತ್ಸಾಹದಲ್ಲಿದ್ದಾರೆ. ಕಳೆದ ಪಂದ್ಯದ ಶತಕ ವೀರರಾದ ಜೋ ರೂಟ್, ಜೋಸ್ ಬಟ್ಲರ್ ಅದೇ ಲಯದಲ್ಲಿ ಬ್ಯಾಟ್ ಬೀಸಿದ್ರೆ. ಬಾಂಗ್ಲಾ ಟೈಗರ್ಸ್ ಉಡೀಸ್ ಆಗೋದು ಪಕ್ಕ.. ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್ ಪಾಕ್ ವಿರುದ್ಧ ಸೈಲೆಂಟ್ ಆಗಿದ್ರು ಅಷ್ಟೇ ಡೇಂಜರ್ಸ್ ಅನ್ನೋದು ಮೊರ್ತಾಜಾ ಪಡೆ ನೆನಪಿನಲ್ಲಿಡಬೇಕಾದ ಅಂಶ.. ಇನ್ನೊಂದೆಡೆ ಮೊಹಿನ್ ಆಲಿ ಸ್ಲಾಗ್ ಓವರ್ಸ್ನಲ್ಲಿ ಅಬ್ಬರಿಸದಿರುವುದು ಇಯಾನ್ಗೆ ತಲೆನೋವು ತರಿಸಿದೆ..
ಇನ್ನೂ ಇಂಗ್ಲೆಂಡ್ ವೇಗಿಗಳಾದ ಜೋರ್ಫಾ ಆರ್ಚರ್, ಕ್ರಿಸ್ ಮೋರಿಸ್, ಮಾರ್ಕ್ಸ್ವುಡ್ ಎದುರಾಳಿಗೆ ಬಿಸಿ ಮುಟ್ಟಿಸುವಂತಾ ಬೌಲಿಂಗ್ ಪ್ರದರ್ಶನ ನೀಡ್ತಿಲ್ಲ.. ಆದ್ರೆ, ಹೊಸ ಯೋಜನೆಗಳೊಂದಿಗೆ ಕಣಕ್ಕಿಳಿಯುತ್ತಿರುವ ಇಂಗ್ಲೆಂಡ್, ಬಾಂಗ್ಲಾ ಟೈಗರ್ಸ್ಗಳನ್ನ ಬೋನಿಗೆ ಹಾಕ್ತಾರೋ ಇಲ್ಲ ಕಾದುನೋಡಬೇಕಿದೆ…
ಅತಿಥೇಯರಿಗೆ ಶಾಕ್ ನೀಡೋಕೆ ಬಾಂಗ್ಲಾದೇಶ ಪ್ಲಾನ್..!
ಟೂರ್ನಿಯಲ್ಲಿ ಸೋಲು ಗೆಲುವುಗಳ ಸಹಿ-ಕಹಿ ಸವಿದಿರುವ ಬಾಂಗ್ಲಾ, ಈಗಾಗಲೇ ಟೂರ್ನಿಯ ಮೊದಲ ಪಂದ್ಯದಲ್ಲೇ ತಾನು ಏನು ಅನ್ನೋದನ್ನ ತೋರಿಸಿ ಕೊಟ್ಟಿದೆ.. ದಕ್ಷಿಣಾ ಆಫ್ರಿಕಾ ವಿರುದ್ಧ ಗೆದ್ದ ಉತ್ಸಾಹದಲ್ಲಿ ಕಿವೀಸ್ ವಿರುದ್ಧ ಸೋತ ಬಾಂಗ್ಲಾ, ಇಂಗ್ಲೆಂಡ್ ತಂಡಕ್ಕೆ ಟಕ್ಕರ್ ನೀಡೋಕೆ ತನ್ನದೇ ಆದ ಕಾರ್ಯತಂತ್ರಗಳನ್ನ ಎಳೆದಿದೆ.. ತಮೀಮ್ ಇಕ್ಬಾಲ್, ಸೌಮ್ಯಾ ಸರ್ಕಾರ್, ಶಕೀಬ್ ಅಲ್ ಹಸನ್, ಮುಷ್ಪಿಕರ್ ರಹೀಂ ಸಂಘಟಿತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದ್ರೆ, ಸ್ಲಾಗ್ ಓವರ್ಸ್ಗಳಲ್ಲಿ ಬಿಗ್ ಸ್ಕೋರ್ ಕಲೆಹಾಕದಿರೋದು ತುಸು ತಂಡಕ್ಕೆ ಹಿನ್ನಡೆಯುಂಟು ಮಾಡಿದೆ.. ಇನ್ನೂ ಬಾಂಗ್ಲಾ ಸ್ಪೀಡ್ ಸ್ಟಾರ್ಸ್ ಮೊಹಮ್ಮದ್ ಸೈಫುದ್ದೀನ್, ಮುಸ್ತಾಫೀಜರ್ ರಹಮಾನ್ ಘರ್ಜಿಸಿದ್ರೆ. ಇಂಗ್ಲೆಂಡ್ ಗೋತಾ ಹೊಡೆಯೋದ್ರಲ್ಲಿ ಡೌಟೇ ಇಲ್ಲ…
ಸುಲಭ ಗೆಲುವಿನ ಕನಸಿನಲ್ಲಿ ನ್ಯೂಜಿಲೆಂಡ್..!
ಇಂದಿನ 2ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ಥಾನ-ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗ್ತಿವೆ.. ಇನ್ನೂ ಈಗಾಗಲೇ ಟೂರ್ನಿಯಲ್ಲಿ ಸತತ 2 ಗೆಲುವು ದಾಖಲಿಸಿರುವ ನ್ಯೂಜಿಲೆಂಡ್, ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಟ್ಟಿದೆ. ಕಿವೀಸ್ ಆಗ್ರಬ್ಯಾಟ್ಸ್ಮನ್ಗಳಾದ ಕಾಲಿನ್ ಮನ್ರೋ, ಮಾರ್ಟಿನ್ ಗುಪ್ಟಿಲ್, ಕೇನ್ ವಿಲಿಯಮ್ಸ್, ರಾಸ್ ಟೇಲರ್ ಮಿಂಚಿತ್ತಿದ್ದಾರೆ. ಆದ್ರೆ, ಮಧ್ಯಮಕ್ರಮಾಂಕದ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ಉಳಿದು ಮ್ಯಾಚ್ ಫಿನಿಷರ್ಗಳಾಗಬೇಕಿದೆ.. ಬೌಲರ್ಗಳು ಸಂಘಟಿತ ದಾಳಿ ನಡೆಸುತ್ತಿರೊದು ನ್ಯೂಜಿಲೆಂಡ್ಗೆ ಪ್ಲಸ್ ಪಾಯಿಂಟ್. ಜೇಮ್ಸ್ ಹೆನ್ರಿ, ಟ್ರೆಂಟ್ ಬೌಲ್ಟ್, ಲೂಕಿ ಫರ್ಗೂಸನ್ ದಾಳಿಗೆ ಕ್ರಿಕೆಟ್ ಶಿಶುಗಳು ಕಕ್ಕಾಬಿಕ್ಕಿಯಾಗೋದು ಗ್ಯಾರಂಟಿ..
ಬ್ಲಾಕ್ ಹಾರ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಅಫ್ಘಾನ್
ಆಫ್ಘಾನ್ ಕ್ರಿಕೆಟ್ ಶಿಶುವಾಗಿದ್ರು, ಬಲಿಷ್ಠ ತಂಡಗಳಿಗೆ ಶಾಕ್ ಕೊಟ್ಟು ಅಚ್ಚರಿ ಫಲಿತಾಂಶ ನೀಡಬಲ್ಲ ತಾಕತ್ತು ಹೊಂದಿದೆ. ಸತತ 2 ಪಂದ್ಯಗಳಲ್ಲಿ ಆಫ್ಘಾನ್ ಸೋತಿದ್ರು. ತನ್ನ ಎದುರಾಳಿ ವಿರುದ್ಧ ಹೋರಾಟದ ಮನೋಭಾವ ತೋರಿಸಿದೆ. ಹರ್ಜತುಲ್ಲಾ, ಗುಲ್ಬುದ್ದೀನ್ ನೈಬ್, ನಜೀಬುಲ್ಲಾ ಜರ್ದಾನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇವ್ರ ಜೊತೆಗೆ ಮೊಹಮ್ಮದ್ ನಬೀ, ರಶೀದ್ ಖಾನ್ ಮಿಂಚಿದ್ರೆ. ಕ್ರಿಕೆಟ್ ಶಿಶು ಬಿಗ್ ಸ್ಕೋರ್ ಕಲೆಹಾಕೋದ್ರಲ್ಲಿ ಅನುಮಾನವೇ ಇಲ್ಲ… ವಿಕೆಟ್ ಕೀಪರ್ ಅಂಡ್ ಬ್ಯಾಟ್ಸ್ಮನ್ ಶಹಜಾದ್ ಟೂರ್ನಿಯಿಂದ ಔಟ್ ಆಗಿರೋದು ಅಫ್ಘಾನಿಸ್ತಾನಕ್ಕೆ ಹಿನ್ನಡೆಯಾಗಿದೆ.
ಇನ್ನೂ ಅಫ್ಗಾನ್ ಬೌಲಿಂಗ್ ಪಡೆ ಎಂಥಹದ್ದೂ ಅನ್ನೊದು ಶ್ರೀಲಂಕಾ ವಿರುದ್ಧ ತೋರಿಸಿಕೊಟ್ಟಿದೆ. ಮುಜೀಬ್ ರಹಮಾನ್. ರಶೀದ್ ಖಾನ್, ಮೊಹಮ್ಮದ್ ನಬೀ ಮ್ಯಾಜಿಕ್ ವರ್ಕೌಟ್ ಆದರೆ, ಕಿವೀಸ್ಗಳ ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪರೇಡ್ ನಡೆಸೋದ್ರಲ್ಲಿ ಡೌಟೇ ಇಲ್ಲ..
ಒಟ್ನಲ್ಲಿ ಬಲಿಷ್ಠ ತಂಡಗಳ ವಿರುದ್ಧ ಸೆಣಸುತ್ತಿರುವ ಬಾಂಗ್ಲಾ, ಅಫ್ಘಾನ್ ಅಚ್ಚರಿ ಫಲಿತಾಂಶ ನೀಡುತ್ವಾ, ಇಲ್ಲ ಬಲಿಷ್ಠ ತಂಡಗಳಿಗೆ ಮುಂದಿನ ಹಂತಕ್ಕೇರಲು ಆಹಾರವಾಗುತ್ತಾ ಕಾದು ನೋಡಬೇಕಿದೆ…