ವಿದೇಶಾಂಗ ಸಚಿವರಿಂದ ಭೂತಾನ್ ಪ್ರಮುಖ ನಾಯಕರ ಜೊತೆ ಚರ್ಚೆ

ಥಿಂಪು,ಜೂ.08- ವಿದೇಶಾಂಗ ಸಚಿವ ಎಸ್.ಜೈಶಂಕರ್ ಇಂದು ತಿಂಪುವಿನಲ್ಲಿ ಭೂತಾನೀಸ್‍ನ ರಾಜ ಜಿಗ್ಮೆ ಖೇಸರ್ ನಂಗ್ಯಾಲ್ ವಾಂಗ್ಚಕ್ ಅವರನ್ನು ಭೇಟಿಯಾದರು. ಹಿಮಾಲಯನ್ ರಾಷ್ಟ್ರದ ಮುಖ್ಯಸ್ಥರ ಪ್ರಬುದ್ಧ ಮಾರ್ಗದರ್ಶನದಿಂದ ಯಾವಾಗಲೂ ಭಾರತ ಮತ್ತು ಭೂತಾನ್ ನಡುವಿನ ವಿಶೇಷ ಸ್ನೇಹಕ್ಕೆ ಪ್ರಯೋಜನವಾಗಿದೆ ಎಂದು ವಿದೇಶಾಂಗ ಸಚಿವರು ಟ್ವೀಟ್‍ನಲ್ಲಿ ಹೇಳಿದ್ದಾರೆ.

ಇದಕ್ಕೂ ಮೊದಲು ಸಚಿವರು ಭೂತಾನ್ ಪ್ರಧಾನಿ ಲೊಟೆ ಟ್ಸ್ಚರಿಂಗ್ ಅವರನ್ನು ಭೇಟಿಯಾಗಿ ಎರಡು ದೇಶಗಳ ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಿದರು. ಹಾಗೂ ಭೂತಾನ್ ವಿದೇಶಾಂಗ ಸಚಿವ ತಂಡಿ ದೋರ್ಜಿಯವರನ್ನು ಭೆಟಿಯಾಗಿ ಪರಸ್ಪರ ಆಸಕ್ತಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಿದರು ಮತ್ತು ಅಭಿವೃದ್ಧಿಯ ಪಾಲುದಾರಿಕೆ ಮತ್ತು ಜಲಕೃಷಿಗೆ ಒತ್ತು ನೀಡುವುದಾಗಿ ಹೇಳಿದರು.

ಭೂತಾನ್ ರಾಜಧಾನಿ ತಿಂಪುವಿಗೆ ನಿನ್ನೆ ವಿದೇಶಾಂಗ ಸಚಿವರು ಆಗಮಿಸಿದರು. ವಿದೇಶಾಂಗ ಸಚಿವರಾದ ನಂತರ ಇದು ಅವರ ಮೊದಲ ವಿದೇಶಿ ಪ್ರವಾಸವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ