ಒತ್ತುವರಿ ಜಾಗ ತೆರವುಗೊಳಿಸಿ ಹೊಸ ಕೆರೆ ನಿರ್ಮಿಸಿದ ಯುವಕರು

ಬೆಂಗಳೂರು, ಜೂ.5- ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ಹೆಸರಘಟ್ಟ ಹೋಬಳಿ, ಚಲ್ಲಹಳ್ಳಿ ಗ್ರಾಮದ ಸರ್ವೆ ನಂ :105ರ ಸರ್ಕಾರಿ ಕೆರೆಯ ಸುಮಾರು ಆರು ಎಕರೆ ಜಾಗ ಒತ್ತುವರಿನ್ನು ತೆರೆವುಗೊಳಿಸಿ ಗ್ರಾಮಸ್ಥರು ಮತ್ತು ದಾನಿಗಳ ಸಹಾಯದಿಂದ ಹೊಸ ಕೆರೆ ನಿರ್ಮಿಸಿದ ಯುವಕರನ್ನು ಕುಣಿಗಲ್‍ನ ಅರೇ ಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯಸ್ವಾಮಿಗಳು ಸನ್ಮಾನಿಸಿದರು.

ಈ ವೇಳೆ ಸ್ವಾಮಿಜಿಯವರು ಮತನಾಡಿ, ಬೆಂಗಳೂರು ನಗರದಲ್ಲಿ ಇಂತಹ ಯುವಕರು ಸಾಕಷ್ಟು ಕೆರೆ ಹಾಗೂ ಕುಂಟೆಗಳನ್ನು ಇದೇ ರೀತಿ ನಿರ್ಮಿಸಿ ಮರಗಿಡಗಳನ್ನು ಬೆಳಸಿ ಪರಿಸರದ ಅಸತೊಮಕ ಅಭಿವೃದ್ದಿಗೆ ಸಹಕಾರಿಸಬೇಕೆಂದು ಸ್ವಾಮಿಜಿಗಳು ಆಶಿರ್ವದಿಸಿದರು.

ಸರ್ಕಾರಿ ಕೆರೆಯು ಸುಮಾರು 50-60ವರ್ಷಗಳ ಹಿಂದೆಯೇ ಮುಚ್ಚಿ ಹೋಗಿ ಗ್ರಾಮಸ್ಥರ ಅರಿವು ಮತ್ತು ಬೇಜವಾಬ್ದಾರಿಯಿಂದ ಒತ್ತುವರಿಯಾಗಿ ನಶಿಸಿಹೋಗಿತ್ತು ತದನಂತರ ಗ್ರಾಮದ ಕೆಲ ಉತ್ಸಾಹಿ ಯುವಕರು ಗ್ರಾಮಸ್ಥರಲ್ಲಿ ನೀರಿನ ಅರಿವು ಮತ್ತು ಕೆರೆಯ ಅವಶ್ಯಕತೆಯನ್ನು ತಿಳಿಸಿ ಒತ್ತುವರಿ ತೆರವುಗೋಳಿಸಲು ಗ್ರಾಮಸ್ಥರನ್ನು ಪ್ರೇರೆಪಿಸಿ ಹೊಸ ಕೆರೆ ನಿರ್ಮಿಸಿದರು. ಸಂಪೂರ್ಣ ಕೆರೆ ಭರ್ತಿಯಾಗಿದ್ದು, ಕೆರೆ ಕೊಡಿಯೋಗಿ ಹನಿಯೂರು ಕೆರೆ ತಲುಪಿತ್ತು ಆಗ ಅಕ್ಕ-ಪಕ್ಕದ ಗ್ರಾಮಸ್ಥರು ಸಹಾ ಈ ಕೆರೆಯನ್ನು ನೋಡಿ ಉತ್ಸುಕದಿಂದ ಸಂತೋಷಪಟ್ಟರು.

ಈ ಸಂದರ್ಭದಲ್ಲಿ ಹನಿಯೂರು ಸಂತೋಷ್ ಸೋಣ್ಣೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ