ನವದೆಹಲಿ, ಜೂ.5-ವಿಶ್ವ ಯೋಗ ದಿನ (ಜೂ.21)ಕ್ಕೂ ಮುನ್ನ ಜನತೆಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಯೋಗ ನಿಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಲಿ ಎಂದು ಸಲಹೆ ಮಾಡಿದ್ದಾರೆ.
ಯೋಗಾಸನಗಳ ಕುರಿತು ಟ್ವೀಟರ್ನಲ್ಲಿ ಒಂದು ಕಿರು ವಿಡಿಯೋವನ್ನು ಸಹ ಪೋಸ್ಟ್ ಮಾಡಿರುವ ಮೋದಿ, ಯೋಗದ ಪ್ರಯೋಜನಗಳು ಅಮೂಲ್ಯ ಎಂದಿದ್ದಾರೆ.
ಜೂನ್ 21 ವಿಶ್ವ ಯೋಗ ದಿನ. ಯೋಗ ನಿಮ್ಮ ಜೀವನ ಪ್ರಮುಖ ಭಾಗಗಳಲ್ಲಿ ಒಂದಾಗಿರಲಿ. ಅದು ಇತರರಿಗೂ ಪ್ರೇರಣೆಯಾಗಲಿ ಎಂದು ಮೋದಿ ಟ್ವೀಟಿಸಿದ್ದಾರೆ.
ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿನದಂದು ದೆಹಲಿ, ಶಿಮ್ಲಾ, ಮೈಸೂರು, ಅಹಮದಾಬಾದ್ ಮತ್ತು ರಾಂಚಿ ರಾಷ್ಟ್ರೀಯ ಯೋಗ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದಿಂದ ಆಯ್ಕೆಯಾಗಿದೆ.