ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವಕಪ್ ಮಹಾ ಸಂಗ್ರಾಮ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಟೂರ್ನಿಯ ಆರಂಭದ ಐದು ಪಂದ್ಯಗಳಲ್ಲಿ ಪೇಸರ್ಸ್ಗಳು ದರ್ಬಾರ್ ನಡೆಸಿದ್ರು. ಈ ಎಲ್ಲ ಪಂದ್ಯಗಳಲ್ಲಿ ಏಷ್ಯಾ ತಂಡಗಳ ಹೆಚ್ಚು ಹೆಚ್ಚು ಬಲಿಯಾದ್ವು.
ವಿಶ್ವಕಪ್ ಆರಂಭಕ್ಕೂ ಮುನ್ನ ಬ್ಯಾಟ್ಸ್ಮನ್ಗಳ ವಿಶ್ವಕಪ್ ಎಂದೇ ಹೇಳಲಾಗುತ್ತಿತ್ತು. ಆದರೆ ಟೂರ್ನಿ ಆರಂಭವಾದ ಮೇಲೆ ಪೇಸರ್ಸ್ಗಳು ಬ್ಯಾಟ್ಸ್ಮನ್ಗಳ ಮೇಲೆ ಸವಾರಿ ಮಾಡಿ ಮೆರೆದಾಡಿದ್ರು. ದುರಾದೃಷ್ಟವಶತ್ ಏಷ್ಯಾ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಬನ್ನಿ ಹಾಗಾದ್ರೆ ಎಲ್ಲ ತಂಡಗಳ ಪೇಸರ್ಸ್ ಗಳು ಹೇಗೆಲ್ಲಾ ದರ್ಬಾರ್ ಮಾಡಿದ್ದಾರೆ. ಯಾವ ತಂಡಗಳು ಹೇಗೆಲ್ಲ ಬಳಲಿವೆ ಅನ್ನೋ ಕಂಪ್ಲೀಟ್ ಡಿಟೇಲ್ಸ್ನ್ನ ನೋಡೋಣ….
ಇಂಗ್ಲೆಂಡ್- ದಕ್ಷಿಣ ಆಫ್ರಿಕಾ ಫೈಟ್
ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 311 ರನ್ ಕಲೆ ಹಾಕಿತು. ದ.ಆಫ್ರಿಕಾ ತಂಡ 207 ರನ್ಗಳಿಗೆ ಆಲೌಟ್ ಆಯಿತು. ಮಾರ್ಗನ್ ಪಡೆ ಒಟ್ಟು 104 ರನ್ಗಳ ಗೆಲುವು ಪಡೆಯಿತು.
ಪಾಕ್, ವೆಸ್ಟ್ಇಂಡೀಸ್ ಫೈಟ್
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ವಿಂಡೀಸ್ ದೈತ್ಯ ಪೇಸರ್ಸ್ಗಳ ದಾಳಿಗೆ ತತ್ತರಿಸಿ 105 ರನ್ಗಳಿಗೆ ಆಲೌಟ್ ಆಯಿತು.
ಶ್ರೀಲಂಕಾ, ನ್ಯೂಜಿಲೆಂಡ್ ಫೈಟ್
ಕಿವೀಸ್ ವಿರುದ್ಧ ಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಿ 136 ರನ್ ಕಲೆ ಹಾಕಿತು. ನ್ಯೂಜಿಲೆಂಡ್ ತಂಡ ನೋ ಲಾಸ್ನಲ್ಲಿ 137 ರನ್ ಕಲೆ ಹಾಕಿ ಗೆಲುವು ಪಡೆಯಿತು.
ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಫೈಟ್
ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ 207 ರನ್ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ತಂಡ 3 ವಿಕೆಟ್ಗೆ 209 ರನ್ ಕಲೆ ಹಾಕಿತು.
ಬಾಂಗ್ಲಾದೇಶ- ದ.ಆಫ್ರಿಕಾ ಫೈಟ್
ಟೂರ್ನಿ ಆರಂಭದ ಈ ಐದು ಪಂದ್ಯಗಳ ಪೈಕಿ ಮೂರರಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡಗಳು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿ ಎದುರಾಳಿಗಳ ಮೇಲೆ ಸವಾರಿ ಮಾಡಿದೆ.
ವಿಶ್ವ ಯುದ್ದದಲ್ಲಿ ಪೇಸರ್ಸ್ಗಳ ದರ್ಬಾರ್
ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗೆ ಕಾದಿತ್ತು ಶಾಕ್
ಪವರ್ ಪ್ಲೇ ಒಂದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 1 ವಿಕೆಟ್ಗೆ 60 ರನ್ ಗಳಿಸಿದೆ. ಪಾಕಿಸ್ತಾನ ತಂಡ 3 ವಿಕೆಟ್ಗೆ 45 ರನ್ ಗಳಿಸಿದೆ. ಶ್ರೀಲಂಕಾ ತಂಡ 3 ವಿಕೆಟ್ಗೆ 51 ರನ್, ಅಫ್ಘಾನಿಸ್ತಾನ 2 ವಿಕೆಟ್ಗೆ 37 ರನ್, ಬಾಮಗ್ಲಾದೇಶ 1 ವಿಕೆಟ್ಗೆ 65 ರನ್ ಕಲೆ ಹಾಕಿದೆ.
ಪವರ್ ಪ್ಲೇಯಲ್ಲಿ ತಂಡಗಳ ಸಾಧನೆ
ಪವರ್ ಪ್ಲೇ ಒಂದರಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ ತಂಡ 2 ವಿಕೆಟ್ಗೆ 44 ರನ್ ಗಳಿಸಿದೆ. ವೆಸ್ಟ್ ಇಂಡೀಸ್ 2 ವಿಕೆಟ್ಗೆ 71 ರನ್ ಗಳಿಸಿದೆ.
ನ್ಯೂಜಿಲೆಂಡ್ ತಂಡ ಮತ್ತು ಆಸ್ಟ್ರೇಲಿಯಾ ತಂಡಗಳು ಯಾವುದೇ ವಿಕೆಟ್ ಕಳೆದುಕೊಂಡಿಲ್ಲ. ದಕ್ಷಿಣ ಆಫ್ರಿಕಾ 51 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.
ನಿಜಾ ಆಯ್ತು ಕೋಚ್ ಶಾಸ್ತ್ರಿ ಹೇಳಿದ ಮಾತು
ವಿಶ್ವಕಪ್ ಸಮರಕ್ಕೂ ಮುನ್ನ ಕೋಚ್ ರವಿ ಶಾಸ್ತ್ರಿ , ಏಷ್ಯಾ ತಂಡಗಳು ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಕಡಿಮೆ ಮೊತ್ತ ದಾಖಲಿಸುತ್ತವೆ ಎಂದು ಭವಿಷ್ಯಾ ನುಡಿದಿದ್ರು. ಈ ಮಾತು ಇದೀಗ ನಿಜ ಆಗಿದೆ.
ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳು ಪೇಸರ್ಸ್ಗಳಿಗೆ ನೆರವು ನೀಡಿದ ನಿಜ. ಆದರೆ ಈ ಕಂಡೀಶನ್ ಹೀಗೆ ಇರೊದಿಲ್ಲ ಅನ್ನೋದೇ ಆಂಗ್ಲರ ನಾಡಿನ ವಿಶೆಷ ಆಗಿದೆ. ಮುಂದಿನ ದಿನಗಳಲ್ಲಿ ಪಂದ್ಯ ಹೇಗೆ ಟರ್ನ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.