ಸಿಂಹಳೀಯರ ಘರ್ಜನೆಗೆ ಅಫ್ಘಾನ್ ಸೈಲೆಂಟ್

ಅದ್ಬುತ ಬೌಲಿಂಗ್ ದಾಳಿ ನಡೆಸಿದ ಮಿಂಚಿದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್‌ನಲ್ಲಿ ಎಡವಿದ ಕಾರಣ ಸೋಲಿಗೆ ಶರಣಾಗಿದೆ. ವಿಶ್ವಕಪ್ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 201 ರನ್‌ಗೆ ಆಲೌಟ್ ಮಾಡಿದ್ದ ಅಫ್ಘಾನಿಸ್ತಾನ 152 ರನ್‌ಗೆ ಆಲೌಟ್ ಆಗೋ ಮೂಲಕ ಸೋಲು ಅನುಭವಿಸಿದೆ. ಈ ಮೂಲಕ ಲಂಕಾ ತಂಡಕ್ಕೆ ಶಾಕ್ ನೀಡೋ ಅಫ್ಘಾನ್ ಕನಸು ನನಸಾಗಲಿಲ್ಲ.

ಮಳೆಯಿಂದಾಗಿ ಪಂದ್ಯವನ್ನು 41 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಡಕ್‌ವರ್ತ್ ನಿಯಮದ ಪ್ರಕಾರ 187 ರನ್ ಟಾರ್ಗೆಟ್ ಪಡೆದ ಅಫ್ಘಾನ್ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಆರಂಭದಲ್ಲೇ ಮೊಹಮ್ಮದ್ ಶೆಹಝಾದ್ 7 ರನ್ ಸಿಡಿಸಿ ಔಟಾದರು. ರಹಮತ್ ಶಾ 2, ಹಶ್ಮತುಲ್ಹಾ ಶಾಹಿದಿ 4 ರನ್ ಸಿಡಿಸಿ ಔಟಾದರು.

ಹಜ್ರತುಲ್ಹಾ ಜಝೈ 30 ರನ್ ಕಾಣಿಕೆ ನೀಡಿದರು. ಮೊಹಮ್ಮದ್ ನಬಿ 11 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ಗುಲ್ಬಾದಿನ್ ನಬಿ 23 ರನ್ ಸಿಡಿಸಿ ಔಟಾದರು.

ರಶೀದ್ ಖಾನ್ 2 ರನ್ ಸಿಡಿಸಿ ಔಟಾದರು. ನಜೀಬುಲ್ಲಾ ಜರ್ದಾನ್ ಹೋರಾಟ ಮುಂದುವರಿಸಿದರು. ಆದರೆ ದಲ್ವತ್ ಜರ್ದಾನ್ 6 ರನ್ ಸಿಡಿಸಿ ಔಟಾದರು.

ನಜೀಬುಲ್ಲಾ ಜರ್ದಾನ್ 43 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಹಮಿದ್ ಹಸನ್ ವಿಕೆಟ್ ಪತನದೊಂದಿಗೆ ಅಫ್ಘಾನಿಸ್ತಾನ 32.4 ಓವರ್‌ಗಳಲ್ಲಿ 152 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಲಂಕಾ 34 ರನ್ ಗೆಲವು ಸಾಧಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ