
ವೇದಿಕೆಯ ಮುಂಭಾಗದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪುಷ್ಪ ವೃಷ್ಟಿ ಮೂಲಕ ಅಭಿನಂದಿಸುವ ಮೂಲಕ ಅರಮನೆ ಮೈದಾನದಲ್ಲಿ ಸಂಸತ್ ಸದಸ್ಯರ ಸನ್ಮಾನ ಸಮಾರಂಭಕ್ಕೆ ಚಾಲನೆ ದೊರೆಯಿತು.
ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಮುರಳೀಧರ ರಾವ್, ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡ,ಶ್ರೀ ಸುರೇಶ್ ಅಂಗಡಿ, ಮುಖಂಡರಾದ ಶ್ರೀ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಆರ್.ಅಶೋಕ್,ಶ್ರೀ ಸಿ.ಎಂ.ಉದಾಸಿ, ಶ್ರೀ ಗೋವಿಂದ ಕಾರಜೋಳ್,ಶ್ರೀ ವಿ.ಸೋಮಣ್ಣ,ಶ್ರೀ ಬಿ.ಶ್ರೀರಾಮುಲು, ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಅರವಿಂದ ಲಿಂಬಾವಳಿ,ಶ್ರೀ ಸಿ.ಟಿ.ರವಿ, ಶ್ರೀ ಎನ್.ರವಿಕುಮಾರ್, ನೂತನ ಸಂಸದರು , ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನೂತನ ಬಿಜೆಪಿ ಸಂಸತ್ ಸದಸ್ಯರಿಗೆ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಆರಂಭದಲ್ಲಿ ಸಸ್ಯಕ್ಕೆ ನೀರೆರೆಯುವ ಮೂಲಕ ಪರಿಸರ ಜಾಗೃತಿಯನ್ನು ಸಾರಲಾಯಿತು.
ಶ್ರೀ ಅರವಿಂದ ಲಿಂಬಾವಳಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.ಶ್ರೀ ಆರ್.ಅಶೋಕ್, ಶ್ರೀ ಗೋವಿಂದ ಕಾರಜೋಳ,ಶ್ರೀ ಕೆ.ಎಸ್.ಈಶ್ವರಪ್ಪ, ಶ್ರೀ ಜಗದೀಶ ಶೆಟ್ಟರ್ ಮತ್ತು ಇತರ ಮುಖಂಡರು ಮಾತನಾಡಿ ಅಭೂತಪೂರ್ವ ವಿಜಯ ದಾಖಲಿಸಿದ ಸಂಸದರನ್ನು ಅಭಿನಂದಿಸಿದರು.
ವಿಜೇತ ಸಂಸದರು ಮತ್ತು ಮುಖಂಡರಿಗೆ ಸಸಿ ಮತ್ತು ಸಂವಿಧಾನದ ಪ್ರತಿಯನ್ನು ನೀಡಿ ಸನ್ಮಾನಿಸಲಾಯಿತು.