ಬೆಂಗಳೂರು, ಜೂ.3- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್ಆರ್ಟಿಸಿ) ವೆಬ್ಸೈಟ್ WWW.KSRTC.INಅತಿ ಹೆಚ್ಚು ಸಂದರ್ಶಿತ ವೆಬ್ಸೈಟ್ಗಳಲ್ಲಿ ಒಂದಾಗಿದ್ದು, ಸಾರ್ವಜನಿಕರು ವಿಚಾರಣೆ, ಮುಂಗಡ ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗಿದೆ.
ದಕ್ಷಿಣ ಭಾರತದಲ್ಲಿ ಕೆಎಸ್ಆರ್ಟಿಸಿಯು ಅತ್ಯಂತ ಹೆಚ್ಚು ಬಳಸುವ ಮತ್ತು ವಿಶ್ವಾಸಾರ್ಹ ರಸ್ತೆ ಜಾಲಗಳಲ್ಲಿ ಒಂದಾಗಿದ್ದು, ಭಾರತದ ದೊಡ್ಡ ಬಸ್ ಆಯೋಜಕರಾಗಿರುವುದರಿಂದ, ನಿಗಮವು ಸಾರ್ವಜನಿಕರಿಗೆ ಪ್ರಯಾಣ ಸಂಬಂಧಿತ ಪ್ರಶ್ನೆಗಳಿಗೆ ವೆಬ್ಸೈಟ್ ಮೂಲಕ ಉತ್ತರ ಒದಗಿಸಲು ಅನುವಾಗುವಂತೆ ಕೆಎಸ್ಆರ್ಟಿಸಿಯು ಕೃತಕ ಬುದ್ಧಿ ಮತ್ತೆ ಚಾಲಿತಕೋರೋವರ್ನ ಚಾಟ್ಬೊಟ್ ಸಹಾಯವಾಣಿಯನ್ನು ಒದಗಿಸಲಾಗಿರುತ್ತದೆ.
ಚಾಟ್ಬೊಟ್ ಸಹಾಯವಾಣಿಯು ಕೃತಕ ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ಮೂಲದ ಆರಂಭಿಕ ಪ್ರಶಸ್ತಿ ವಿಜೇತ ಕೋರೋವರ್ನಿಂದ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಲಾಗಿದೆ.
ಚಾಟ್ಬೊಟ್ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಹಾಗೂ ನೈಸರ್ಗಿಕ ಭಾಷಾ ಸಂಸ್ಕರಣೆಯಲ್ಲಿ ನಿರ್ಮಿಸಲಾದ ವೇದಿಕೆಯಾಗಿದ್ದು, ಸಾರ್ವಜನಿಕರಿಗೆ ಕೇಂದ್ರೀಕೃತ ಚಾಟ್ ಸೇವೆಯ ಮೂಲಕ ಸಂಪರ್ಕ ಒದಗಿಸುತ್ತದೆ.
ಸಹಾಯವಾಣಿಯು ಸಾರ್ವಜನಿಕರ ತೃಪ್ತಿಯನ್ನು ಸುಧಾರಿಸಲು ಮತ್ತು ವ್ಯವಹಾರ ಮಟ್ಟಕ್ಕೆ ಸಹಾಯ ಮಾಡಲು ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ಆಧಾರಿತ ಸೇವೆ ಆಗಿರುತ್ತದೆ.
ಚಾಟ್ಬೊಟ್ ಸಹಾಯವಾಣಿಯು ಮುಂಗಡ ಬುಕಿಂಗ್, ವಿಚಾರಣೆ ಮತ್ತು ನಿಗಮದ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಪ್ರಶ್ನೆಗಳಿಗೆ ಅರ್ಥಗರ್ಭಿತ ಉತ್ತರಗಳನ್ನು ಒದಗಿಸುವ ಮೂಲಕ ಬೆಂಬಲವನ್ನು ನೀಡುವ ನಿರೀಕ್ಷೆಯಿರುತ್ತದೆ.
ಚಾಟ್ಬೊಟ್ ಸಹಾಯವಾಣಿಯು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವ, 24×7 ಸೇವೆಯ, ಸ್ವಯಂ-ಪ್ರತ್ಯುತ್ತರ ಸೌಲಭ್ಯ, ಬಹುಕಾರ್ಯಕ ಸಾಮಥ್ರ್ಯ, ಹೆಚ್ಚಿನ ನಿಖರತೆ ಮತ್ತು ವೇಗದೊಂದಿಗೆ ಶೂನ್ಯಕಾಯುವ ಸಮಯದ ವೈಶಿಷ್ಟ್ಯದೊಂದಿಗೆ ಕೂಡಿರುತ್ತದೆ.