ಶ್ರೀನಗರ: ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ರಾಜನಾಥ್ ಸಿಂಗ್ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ಗೆ ಭೇಟಿ ನೀಡಿದ್ದಾರೆ. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಯೋಧರೊಂದಿಗೆ ಮಾತುಕತೆ ನಡೆಸಿದರು..
ಭೇಟಿ ವೇಳೆ ರಾಜನಾಥ್ ಸಿಂಗ್ ಯೋಧರೊಂದಿಗೆ ಬೆಳಗಿನ ಉಪಹಾರವನ್ನು ಸೇವಿಸಿದರು. ಬಳಿಕ ಸಿಯಾಚಿನ್ನ ಮೂಲ ಶಿಬಿರದಲ್ಲಿರುವ ಸೈನಿಕ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದರು. ಸಿಯಾಚಿನ್ನಲ್ಲಿ ಕಾರ್ಯನಿರ್ವಹಿಸುವಾಗ ದೇಶ ರಕ್ಷಣೆಗಾಗಿ ಬಲಿದಾನ ನೀಡಿರುವ 1,100 ಯೋಧರ ಸ್ಮರಣಾರ್ಥ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.
ಈ ವೇಳೆ ಮಾತನಾಡಿದ ಅವರು ಸಿಯಾಚಿನ್ನಂಥ ದುರ್ಗಮ ಮತ್ತು ಸದಾ ತೀವ್ರ ಶೀತ ವಾತಾವರಣ ಇರುವ ಪ್ರದೇಶದಲ್ಲಿ ಕೆಲಸ ಮಾಡುವ ಯೋಧರ ಧೈರ್ಯವನ್ನು ಮೆಚ್ಚಲೇಬೇಕು ಎಂದರು. ಈ ವೇಳೆ ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಉಪಸ್ಥಿತರಿದ್ದರು.
Defence Minister Rajnath Singh Bonds With Soldiers At Siachen