ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್​ ದೋವಲ್ ಮುಂದುವರಿಕೆ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್​ ದೋವಲ್​ ಅವರನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ಗೌರವಿಸಲಾಗಿದೆ.

2014ರಲ್ಲಿ ದೋವೆಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದ್ದರು. ದೋವೆಲ್ ಇನ್ನು 5 ವರ್ಷ ಈ ಹುದ್ದೆಯಲ್ಲಿಯೇ ಮುಮ್ದುವರೆಯಲಿದ್ದಾರೆ. 2016ರಲ್ಲಿ ಉರಿ ಉಗ್ರರ ದಾಳಿಯ ಬಳಿಕ ನಡೆದ ಸರ್ಜಿಕಲ್​ ಸ್ಟ್ರೈಕ್​ ಮತ್ತು 2019ರ ಬಾಲಾಕೋಟ್​ ಸರ್ಜಿಕಲ್​ ಸ್ಟ್ರೈಕ್​ಗಳು ಇವರ ನಿಗಾವಣೆಯಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು.

1968ರ ತಂಡದ ಐಪಿಎಸ್​ ಅಧಿಕಾರಿಯಾಗಿರುವ ಇವರು ಇಂಟೆಲಿಜೆನ್ಸ್​ ಬ್ಯೂರೋದಲ್ಲಿ ಹೆಚ್ಚು ಕೆಲಸ ಮಾಡಿದ್ದರು. ಇವರು ಐಬಿಯ ಮುಖ್ಯಸ್ಥರೂ ಆಗಿದ್ದರು.

1988ರಲ್ಲಿ ಇವರಿಗೆ ಕೀರ್ತಿ ಚಕ್ರ ಪದಕ ನೀಡಲಾಗಿದೆ. ಈ ಪದಕ ಪಡೆದ ಮೊಟ್ಟಮೊದಲ ಪೊಲೀಸ್​ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Ajit Doval Stays As NSA, Gets Cabinet Rank With 5-Year Term

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ