ಬೆಂಗಳೂರು, ಜೂ.2- ಸಮತಾ ಸೈನಿಕ ದಳದ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135ನೇ ಜಯಂತಿ ಹಾಗೂ ನಾಡಿನ ಹೋರಾಟ ನೇತಾರ ಡಾ.ಎಂ.ವೆಂಕಟಸ್ವಾಮಿ ಅವರ 65ನೇ ಜನ್ಮದಿನದ ಪ್ರಯುಕ್ತ ಇದೇ 4ರಂದು ಪರಿವರ್ತನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಪರಿವರ್ತನಾ ಸಮಾವೇಶ ಏರ್ಪಡಿಸಿದ್ದು, ಬೆಳಗ್ಗೆ 9.30ಕ್ಕೆ ಫ್ರೀಡಂಪಾರ್ಕ್ನಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಜಾನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿದೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಡಾ.ಆರ್.ಚಂದ್ರಶೇಖರ್ ತಿಳಿಸಿದ್ದಾರೆ.