ರೋಗಿಗಳಿಗೆ ನೀಡುವ ತುರ್ತು ಚಿಕಿತ್ಸೆಯಲ್ಲಿ ನರ್ಸಿಂಗ್ ಪಾತ್ರ ಮುಖ್ಯ

ಬೆಂಗಳೂರು, ಜೂ.2- ರೋಗಿಗಳಿಗೆ ನೀಡುವ ತುರ್ತು ಚಿಕಿತ್ಸೆಯನ್ನು ಉತ್ತಮ ಪಡಿಸಿಕೊಳ್ಳುವುದು ಅತಿ ಮುಖ್ಯ ಎಂದು ಕರ್ನಾಟಕ ನರ್ಸಿಂಗ್ ಕೌನ್ಸಿಲ್‍ನ ಕುಲಸಚಿವರಾದ ಉಷಾ ಬಂಢಾರಿ ತಿಳಿಸಿದ್ದಾರೆ.

ನಗರದ ಯಲಹಂಕದ ಆದಿತ್ಯ ನರ್ಸಿಂಗ್ ಕಾಲೇಜಿನಲ್ಲಿ ನಡೆದ ತುರ್ತು ಚಿಕಿತ್ಸಾ ರೀತಿ ನೀತಿಯನ್ನು ಉತ್ತಮ ಪಡಿಸಿಕೊಳ್ಳುವ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೋಗಿಗಳಿಗೆ ನೀಡುವ ತುರ್ತು ಚಿಕಿತ್ಸೆಯಲ್ಲಿ ನರ್ಸಿಂಗ್ ಪಾತ್ರ ಅತಿಮುಖ್ಯವಾಗಿದೆ ಎಂದರು.

ತುರ್ತು ಸಂದಂರ್ಭಗಳಲ್ಲಿ ರೋಗಿಗಳಿಗೆ ನೀಡುವ ಚಿಕಿತ್ಸೆ, ಔಷಧಿ ಹಾಗೂ ಶಶ್ರೂಷೆಯು ಪರಿಣಾಮಕಾರಿಯಾಗಿದ್ದರೆ ಅದಷ್ಟು ಶೀಘ್ರ ರೋಗಿಗಳು ಗುಣಮುಖರಾಗಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಶೋಭಾ ರಾಮಕೃಷ್ಣ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರೋಗಿಗಳಿಗೆ ನೀಡಬೇಕಾದ ಆರೈಕೆ ಚಿಕಿತ್ಸೆಯ ಬಗ್ಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳ ಜ್ಞಾನದ ಬೆಳವಣಿಗೆಗೂ ಆದ್ಯತೆ ನೀಡಲಾಗುತ್ತದೆ ಎಂದರು.

ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಆಸ್ಪತ್ರೆಗಳಿಂದ ಉದ್ಯೋಗಾವಕಾಶ ದೊರೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಉತ್ತಮ ಸೌಲಭ್ಯಗಳ ಮೂಲಕ ಕಲಿಕೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಕರ್ನಾಟಕ ಕಾಲೇಜ್ ಆಫ್ ನರ್ಸಿಂಗ್‍ನ ಪ್ರಿನ್ಸಿಪಾಲï ಭಾರತಿ, ಸಂಪನ್ಮೂಲ ವ್ಯಕ್ತಿಗಳಾಗಿ ಸೇಂಟ್‍ಜಾನ್ ಆಸ್ಪತ್ರೆಯ ಡಾ.ಬಿಂದು ಮ್ಯಾಥ್ಯೂ, ಆಸ್ಟರ್ ಆಸ್ಪತ್ರೆಯ ಮುಖ್ಯ ಶುಶ್ರೂಷಾಧಿಕಾರಿ ಸುನೀತಾ ಡೋಮಿಂಗೋ, ಬಾಪ್ಟಿಸ್ಟ್ ಆಸ್ಪತ್ರೆಯ ಡಾ.ಅಣ್ಣೀಯಮ್ಮ ಜೋಸೆಫ್, ಡಾ.ಮೆಥಿಲ್ ದಾ ವಿನ್ಸೆಂಟ್ ಮಕ್ಕಳ ಆರೋಗ್ಯ ಸೇವೆಗಳ ಮುಖ್ಯಾಧಿಕಾರಿ ಮೋನಿಕಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ