ಬೀದರ್ ಇಲ್ಲಿಯ ಕಾಂಗ್ರೆಸ್ ಮುಖಂಡ ಅಯಾಜ್ ಖಾನ್ ಅವರನ್ನು ಭಾರತೀಯ ಆರ್ಥಿಕ ವಾಣಿಜ್ಯ ಸಂಸ್ಥೆ (ಐಇಟಿಓ) ಕುರಿತಾದ ಶೈಕ್ಷಣಿಕ ಬಾಂಧವ್ಯಗಳ ಸಮಿತಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ನವ ದೆಹಲಿಯಲ್ಲಿರುವ ಐಇಟಿಓನ ಡಾ.ಕೃಷ್ಣ ಕುಮಾರ್ ಅವರು ಈ ನೇಮಕ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶೈಕ್ಷಣಿಕ ಬಾಂಧವ್ಯಗಳಲ್ಲಿ, ಶೈಕ್ಷಣಿಕ ವ್ಯವಹಾರಗಳಲ್ಲಿ ಹೊಂದಿರುವ ಅನುಭವ ಮತ್ತು ರಾಜಕೀಯ ನಂಟನ್ನು ಪರಿಗಣಿಸಿ ಮತ್ತು ಸಮುದಾಯದಲ್ಲಿ ಹೊಂದಿರುವ ಜನಮನ್ನಣೆಯನ್ನು ಪರಿಗಣಿಸಿ ಅಯಾಜ್ ಖಾನ್ ಅವರನ್ನು ಈ ಮಹತ್ವದ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
ಐಇಟಿಓ ವಿವಿಧ 52 ರಾಷ್ಟ್ರಗಳಲ್ಲಿನ ವಾಣಿಜ್ಯ ಮತ್ತು ಕಂಪನಿಗಳಲ್ಲಿನ ಪ್ರಮುಖ ಸಂಸ್ಥೆಯಾಗಿದೆ. ಐಎಸ್ಓ 9001 ಪ್ರಮಾಣ ಪತ್ರ ಪಡೆದಿರುವ ಸಂಸ್ಥೆ ಜಾಗತಿಕವಾಗಿ ಹಿರಿಯ ಅಧಿಕಾರಿಗಳ, ವೃತ್ತಿಪರರ ಮತ್ತು ಕೈಗಾರಿಕೋದದ್ಯಮಿಗಳ ಸಲಹೆ ಮತ್ತು ಮಾಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಲಿದೆ. ಮಹತ್ವದ ತಾಂತ್ರಿಕ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ವೇದಿಕೆ ಕಲ್ಪಿಸುವ ಮಹತ್ವದ ಸಂಸ್ಥೆ ಸಹ ಇದು ಹೌದು.
ಸಣ್ಣ ಮತ್ತು ದೊಡ್ದ ವರ್ತಕರ ಪ್ರಗತಿ, ತಂತ್ರಜ್ಞಾನವನ್ನು ಕಲೆ ಹಾಕುವಿಕೆ, ಬಂಡವಾಳ ಆಕರ್ಷಿಸುವ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಳ್ಳುವುದರ ಜೊತೆಗೆ ಶಿಕ್ಷಣ, ಆರೋಗ್ಯ ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸಾಂಸ್ಕøತಿಕ ವಿನಿಮಯದಂಥ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸುವುದಕ್ಕು ಕೂಡ ಸಂಸ್ಥೆ ವೇದಿಕೆ ಕಲ್ಪಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.