ವಿಶ್ವಕಪ್ನ ಮಹಾ ಯುದ್ದದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನ ವಿರುದ್ಧ ಭರ್ಜರಿ ಸುಲಭ ಗೆಲುವು ದಾಖಲಿಸಿದೆ. ಹಾಗಾದ್ರೆ ಬನ್ನಿ ಪಾಕ್ ವಿಂಡೀಸ್ ಕದನ ಹೇಗಿತ್ತು ಅನ್ನೋದನ್ನ ನೋಡೋಣ ಬನ್ನಿ.
ಪಾಕ್ಗೆ ಮೊದಲ ಶಾಕ್ ಕೊಟ್ಟ ವೇಗಿ ಕೊಟ್ರೆಲ್
ನಾಟಿಂಗ್ಯಾಮ್ ಅಂಗಳದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ಪಾಕ್ ಪರ ಓಪನರ್ಸ್ಗಳಾಗಿ ಕಣಕ್ಕಿಳಿದ ಇಮಾಮ್ ಉಲ್ ಹಕ್ ಮತ್ತು ಫಕರ್ ಜಮಾನ್ ಆeಛಿeಟಿಣ ಓಪನಿಂಗ್ ಕೊಡುವಲ್ಲಿ ಎಡವಿದ್ರು. ಮೂರನೇ ಓವರ್ನಲ್ಲಿ ದಾಳಿಗಿಳಿದ ವೇಗಿ ಕೊಟ್ರೆಲ್ ಓಪನರ್ ಓಪನರ್ ಇಮಾಮ್ ಉಲ್ ಹಕ್ಗೆ ಪೆವಿಲಿಯನ್ ದಾರಿ ತೋರಿಸಿ ಶಾಕ್ ಕೊಟ್ರು.
ದೈತ್ಯರ ವೇಗಕ್ಕೆ ಪಾಕ್ ಪೆವಿಲಿಯನ ಪರೇಡ್
ಮೊದಲ ಆಘಾತದಿಂದ ಸರ್ಫಾರಾಜ್ ಪಡೆ ನಂತರ ಚೇತಿರಿಸಿಕೊಳ್ಳದೇ ಪೆವಿಲಿಯನ್ ಪರೇಡ್ ನಡೆಸಿತು. 6ನೇ ಓವರ್ನಲ್ಲಿ ದಾಳಿಗಿಳಿದ ಆಲ್ರೌಂಡರ್ ರಸ್ಸೆಲ್ ಓಪನರ್ ಫಕಾರ್ ಜಮಾನ್ ಮತ್ತು ಹ್ಯಾರಿಸ್ ಸೋಹೇಲ್ ಅವರುಗಳ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ್ರು.
ನಂತರ ಮಿಡ್ಲ್ ಓವರ್ನಲ್ಲಿ ದಾಳಿಗಿಳಿದ ಓಶಾನೆ ಥಾಮಸ್ ಮತ್ತು ಕ್ಯಾಪ್ಟನ್ ಜೆಸನ್ ಹೋಲ್ಡರ್ ಪಾಕ್ನ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಲೈನ್ ಅಪ್ನ್ನ ಛಿoಟಟಚಿಠಿse ಮಾಡಿದ್ರು. ಕ್ಯಾಪ್ಟನ್ ಸರ್ಫಾರಾಜ್ ಅಹ್ಮದ್ 8, ಮೊಹ್ಮದ್ ಹಫೀಜ್ 16 ಮತ್ತು ಇಮಾದ್ ವಾಸೀಮ್ 1 ರನ್ ಗಳಿಸಿ ಅಲ್ಪ ಮೊತ್ತಕ್ಕೆ ಆಲೌಟ್ ಆಗುವುದನ್ನ ಖಚಿತ ಪಡಿಸಿದ್ರು.
ಪಾಕಿಸ್ತಾನ 21.4 ಓವರ್ಗಳಲ್ಲಿ 105 ರನ್ಗಳಿಗೆ ಆಲೌಟ್
ಕೊನೆಗೆ ಬಾಲಂಗೋಚಿಗಳ ನೆರವಿನಿಂದ ಸರ್ಫಾರಾಜ್ ಪಡೆ 21.4 ಓವರ್ಗಳಲ್ಲಿ 105 ರನ್ಗಳಿಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಒಶಾನೆ ಥಾಮಸ್ ನಾಲ್ಕು ವಿಕೆಟ್ ಪಡೆದ್ರೆ , ಕ್ಯಾಪ್ಟನ್ ಜೆಸನ್ ಹೋಲ್ಡರ್ 3 , ರಸ್ಸೆಲ್ 2 ವಿಕೆಟ್ ಪಡೆದು ಮಿಂಚಿದ್ರು.
ಆರಂಭದಲ್ಲಿ ಎಡವಿದ ವೆಸ್ಟ್ ಇಂಡೀಸ್
ಸುಲಭ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಓಪನರ್ಸ್ಗಳಾದ ಕ್ರಿಸ್ ಗೇಲ್ ಮತ್ತು ಶಾಯಿ ಹೋಪ್ ಒಳ್ಳೆಯ ಓಪನಿಂಗ್ ಕೊಟ್ರು. ಆದರೆ 11 ರನ್ ಗಳಿಸಿದ್ದ ಶಾಯ್ ಹೋಪ್ ಮೊಹ್ಮದ್ ಅಮೀರ್ಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಡೆರೆನ್ ಬ್ರಾವೋ ಕೂಡ ಹೆಚ್ಚು ಹೊತ್ತು ನಿಲ್ಲದೇ ಅಮೀರ್ಗೆ ಬಲಿಯಾದ್ರು. ಗೇಲ್ ಜೊತೆಗೂಡಿದ ನಿಕೊಲೊಸ್ ಪೂರನ್ ಎಚ್ಚರಿಕೆಯ ಆಟವಾಡಿ ತಂಡದ ಗೆಲುವನ್ನ ಖಚಿತ ಪಡಿಸಿದ್ರು.
ಅರ್ಧ ಶತಕ ಬಾರಿಸಿದ ಕ್ರಿಸ್ ಗೇಲ್
ಕಠಿಣ ಪಿಚ್ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಕ್ರಿಸ್ ಗೇಲ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಅರ್ಧ ಶತಕ ಬಾರಿಸಿದ್ರು. ಬೌಂಡರಿಯ ಮೂಲೆ ಮೂಲೆಗೂ ಚೆಂಡಿನ ಪರಿಚೆಯ ಮಾಡಿಕೊಟ್ಟ ಗೇಲ್ 4 ಬೌಂಡರಿ 3 ಸಿಕ್ಸರ್ ಬಾರಿಸಿ ಭರ್ತಿ 50 ರನ್ ಗಳಿಸಿಮೊಹ್ಮದ್ ಅಮೀರ್ಗೆ ಬಲಿಯಾದ್ರು.
ವೆಸ್ಟ್ಇಂಡೀಸ್ 3 ವಿಕೆಟ್ಗೆ 108 ರನ್
ಕೊನೆಯಲ್ಲಿ ಶಿಮ್ರಾನ್ ಹೇಟ್ಮರ್ ಅಜೇಯ 7, ನಿಕೊಲೊಸ್ ಪೂರಾನ್ ಅಜೇಯ 34 ರನ್ ಗಳಿಸಿ ತಂಡಕ್ಕೆ 7 ವಿಕೆಟ್ ಭರ್ಜರಿ ಜಯ ತಂದುಕೊಟ್ರು. ಜೊತೆಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿತು. 4 ವಿಕೆಟ್ ಪಡೆದ ಒಶಾನೆ ಥಾಮಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.