ಬೆಂಗಳೂರು, ಮೇ 31- ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಮಹಾಸಮರವೆಂದೇ ಹೇಳಲಾಗಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ಗೆ ಹಿನ್ನಡೆಯಾಗಿದೆ.
ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ 61 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಮತ ಎಣಿಕೆ ಇಂದು ನಡೆದಿದ್ದು, ಇತ್ತೀಚೆಗಷ್ಟೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರೂ ಜೆಡಿಎಸ್ಗೆ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ.
ನಗರಸಭೆಯ 248, ಪಟ್ಟಣ ಪಂಚಾಯ್ತಿಯ 330, ಪುರಸಭೆಯ 783 ಸೇರಿದಂತೆ ಒಟ್ಟು 1,361 ಸ್ಥಾನಗಳಿಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ನ ಕೈ ಹಿಡಿದಿದ್ದಾನೆ.
ಈವರೆಗೂ ಪ್ರಕಟಗೊಂಡ ಫಲಿತಾಂಶದಲ್ಲಿ ಕಾಂಗ್ರೆಸ್ ಒಟ್ಟು ಸ್ಥಾನಗಳ ಪೈಕಿ 500ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮೊದಲ ಸ್ಥಾನ ಪಡೆದಿದೆ. ಕೈಗೆ ಟಕ್ಕರ್ ಕೊಡುತ್ತಿರುವ ಬಿಜೆಪಿ 375, ಜೆಡಿಎಸ್ 160 ಹಾಗೂ ಪಕ್ಷೇತರರು 160 ಹಾಗೂ ಇತರರು 7 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಕೆಲವು ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಕಡೆ ಮೈತ್ರಿ ಮಾಡಿಕೊಳ್ಳುವುದು, ಇಲ್ಲವೇ ಪಕ್ಷೇತರರ ಬೆಂಬಲ ಪಡೆದು ಅಧಿಕಾರ ರಚಿಸಬೇಕಾದ ಪರಿಸ್ಥಿತಿ ಇದೆ.
ನಗರಸಭೆಯ ಒಟ್ಟು 248 ಸ್ಥಾನಗಳ ಪೈಕಿ ಈವರೆಗೂ ಫಲಿತಾಂಶ ಪ್ರಕಟಗೊಂಡ 178 ಸ್ಥಾನಗಳಲ್ಲಿ ಕಾಂಗ್ರೆಸ್ 74, ಬಿಜೆಪಿ 54, ಜೆಡಿಎಸ್ 23 , ಪಕ್ಷೇತರರು 21 ಮತ್ತು ಇತರರು 6 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಪುರಸಭೆಯ 783 ಸ್ಥಾನಗಳ ಪೈಕಿ ಪ್ರಕಟಗೊಂಡ 713 ವಾರ್ಡ್ಗಳ ಫಲಿತಾಂಶದಲ್ಲಿ ಕಾಂಗ್ರೆಸ್ 321, ಬಿಜೆಪಿ 184, ಜೆಡಿಎಸ್ 102, ಬಿಎಸ್ಪಿ 1, ಸಿಪಿಐಎಂ 2, ಪಕ್ಷೇತರರು 102 ಹಾಗೂ ಇತರರು 1 ವಾರ್ಡ್ಗಳಲ್ಲಿ ವಿಜೇತರಾಗಿದ್ದಾರೆ.
ಪಟ್ಟಣ ಪಂಚಾಯ್ತಿಯ 330 ವಾರ್ಡ್ಗಳ ಪೈಕಿ ಫಲಿತಾಂಶ ಪ್ರಕಟಗೊಂಡ 290 ವಾರ್ಡ್ಗಳಲ್ಲಿ ಬಿಜೆಪಿ 126, ಕಾಂಗ್ರೆಸ್ 97, ಜೆಡಿಎಸ್ 34 ಹಾಗೂ ಪಕ್ಷೇತರರು 33 ವಾರ್ಡ್ಗಳಲ್ಲಿ ಜಯಭೇರಿ ಭಾರಿಸಿದ್ದಾರೆ.
ಅತಂತ್ರ ಪರಿಸ್ಥಿತಿ:
ನಗರ ಪಾಲಿಕೆ ಚುನಾವಣೆಯಲ್ಲಿ ಕೆಲವು ಕಡೆ ಮತದಾರರು ಒಂದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡಿದ್ದರೆ. ಇನ್ನೂ ಕೆಲವು ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಜಯಪುರ ಜಿಲ್ಲೆ ಬಸವಕಲ್ಯಾಣ ನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿದಿದೆ. ಒಟ್ಟು 31 ವಾರ್ಡ್ಗಳ ಪೈಕಿ ಕಾಂಗ್ರೆಸ್ 19, ಬಿಜೆಪಿ 5, ಜೆಡಿಎಸ್ 3 ಹಾಗೂ ಇತರರು 4 ವಾರ್ಡ್ಗಳಲ್ಲಿ ಗೆದ್ದಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಒಟ್ಟು 31 ವಾರ್ಡ್ಗಳಲ್ಲಿ 11ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಕಾಂಗ್ರೆಸ್ 9, ಜೆಡಿಎಸ್ 5 ಹಾಗೂ ಪಕ್ಷೇತರರು 6 ವಾರ್ಡ್ಗಳಲ್ಲಿ ಜಯ ಸಾಧಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಶಹಪುರ, ದಾವಣಗೆರೆಯ ಹರಿಹರ, ಚಿತ್ರದುರ್ಗದ ಹಿರಿಯೂರು, ಮೈಸೂರಿನ ನಂಜನಗೂಡು ನಗರ ಪಾಲಿಕೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.
ಪುರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ:
ಪುರಸಭೆಯ ಒಟ್ಟು 783 ವಾರ್ಡ್ಗಳ ಪೈಕಿ ಕಾಂಗ್ರೆಸ್ ಪಕ್ಷ ಬಿಜೆಪಿ ಮತ್ತು ಜೆಡಿಎಸ್ಅನ್ನು ಹಿಂದಿಕ್ಕಿ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ 290, ಬಿಜೆಪಿ 171, ಜೆಡಿಎಸ್ 95, ಪಕ್ಷೇತರರು 95 ಹಾಗೂ ಇತರರು ಐದು ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಆನೇಕಲ್, ಹರಪನಹಳ್ಳಿ, ಹೂವಿನಹಡಗಲಿ, ಚಿಟಗುಪ್ಪ, ಹುಮ್ನಾಬಾದ್, ಬಾಲ್ಕಿ, ಬಸವನಬಾಗೇವಾಡಿ, ತಾಳಿಕೋಟೆ, ಕೆ.ಆರ್.ನಗರ, ಕುಣಿಗಲ್, ಪಾವಗಡ ಪುರಸಭೆಗಳು ಕಾಂಗ್ರೆಸ್ ಪಾಲಾಗಿವೆ.
ಮೂಡಬಿದ್ರೆ, ಗುಡ್ಲುಪೇಟೆ, ಇಂಡಿ, ಮುಂಡರಗಿ, ನರಗುಂದ, ಬ್ಯಾಡಗಿ ಪುರಸಭೆಗಳು ಕಮಲ ತೆಕ್ಕೆಗೆ ಬಂದರೆ, ಬನ್ನೂರು, ಶ್ರೀರಂಗಪಟ್ಟಣ ಪಟ್ಟಣ ಪಂಚಾಯ್ತಿಯಲ್ಲಿ ತೆನೆಹೊತ್ತ ಮಹಿಳೆ ಗೆಲುವಿನ ನಗೆ ಬೀರಿದ್ದಾಳೆ.
ಒಟ್ಟು ಸ್ಥಾನ- 1361
ಕಾಂಗ್ರೆಸ್- 498
ಬಿಜೆಪಿ- 364
ಜೆಡಿಎಸ್-168
ಪಕ್ಷೇತರರು- 156
ಇತರರು-7
ಒಟ್ಟು ಸ್ಥಾನಗಳು – 1361
ಕಾಂಗ್ರೆಸ್ ನಗರಸಭೆ 75- ಪುರಸಭೆ- 322- ಪಟ್ಟಣ ಪಂಚಾಯಿ- 97
ಬಿಜೆಪಿ ನಗರಸಭೆ -54-ಪುರಸಭೆ- 154 – ಪಟ್ಟಣ ಪಂಚಾಯಿ- 126
ಜೆಡಿಎಸ್ ನಗರಸಭೆ- 28 ಪುರಸಭೆ- 102 – ಪಟ್ಟಣ ಪಂಚಾಯಿ- 34
ಪಕ್ಷೇತರರು ನಗರಸಭೆ- 21, ಪುರಸಭೆ- 102, ಪಟ್ಟಣ ಪಂಚಾಯಿ-33
ಇತರರು ನಗರಸಭೆ- 6, ಪುರಸಭೆ-1.
ಪಟ್ಟಣ ಪಂಚಾಯ್ತಿ
ಒಟ್ಟು ಸ್ಥಾನಗಳು -330
ಮೊಳಲ್ಮೂರು ಒಟ್ಟು ಸ್ಥಾನ -16
ಬಿಜೆಪಿ – 8, ಕಾಂಗ್ರೆಸ್ -6, ಪಕ್ಷೇತರ -2
ಫಲಿತಾಂಶ-ಅತಂತ್ರ
ಹೊಳ್ಕೆರೆ ಒಟ್ಟು ಸ್ಥಾನ -16
ಬಿಜೆಪಿ – 6, ಕಾಂಗ್ರೆಸ್ -3, ಪಕ್ಷೇತರ -7
ಫಲಿತಾಂಶ-ಅತಂತ್ರ
ತುರವೇಕರೆ ಒಟ್ಟು ಸ್ಥಾನ -14
ಬಿಜೆಪಿ – 6, ಕಾಂಗ್ರೆಸ್ -2, ಜೆಡಿಎಸ್- 5, ಪಕ್ಷೇತರ -1
ಫಲಿತಾಂಶ-ಅತಂತ್ರ
ಕೊಪ್ಪ ಒಟ್ಟು ಸ್ಥಾನ -11
ಬಿಜೆಪಿ – 6, ಕಾಂಗ್ರೆಸ್ -4, ಪಕ್ಷೇತರ -1
ಫಲಿತಾಂಶ-ಬಿಜೆಪ
ಶೃಂಗೇರಿಒಟ್ಟು ಸ್ಥಾನ -11
ಬಿಜೆಪಿ – 7, ಕಾಂಗ್ರೆಸ್ -3, ಪಕ್ಷೇತರ -1
ಫಲಿತಾಂಶ-ಬಿಜೆಪಿ
ಮೂಡಿಗೆರೆ ಒಟ್ಟು ಸ್ಥಾನ -11
ಬಿಜೆಪಿ – 6, ಕಾಂಗ್ರೆಸ್ -4, ಜೆಡಿಎಸ್ -1
ಫಲಿತಾಂಶ-ಬಿಜೆಪಿ
ನರಸಿಂಹರಾಜಪುರ ಒಟ್ಟು ಸ್ಥಾನ -11
ಬಿಜೆಪಿ – 2, ಕಾಂಗ್ರೆಸ್ -9, ಪಕ್ಷೇತರ -1
ಫಲಿತಾಂಶ-ಕಾಂಗ್ರೆಸ್
ಮೂಲ್ಕಿ ಒಟ್ಟು ಸ್ಥಾನ -18
ಬಿಜೆಪಿ – 8 ಕಾಂಗ್ರೆಸ್ -9, ಪಕ್ಷೇತರ -1
ಫಲಿತಾಂಶ-ಕಾಂಗ್ರೆಸ್
ಸುಳ್ಯ ಒಟ್ಟು ಸ್ಥಾನ -20
ಬಿಜೆಪಿ – 14, ಕಾಂಗ್ರೆಸ್ -4, ಪಕ್ಷೇತರ -2
ಫಲಿತಾಂಶ-ಬಿಜೆಪಿ
ಆಲೂರು ಒಟ್ಟು ಸ್ಥಾನ -11
ಬಿಜೆಪಿ – 2, ಕಾಂಗ್ರೆಸ್ -1, ಜೆಡಿಎಸ್-5, ಪಕ್ಷೇತರ -1
ಫಲಿತಾಂಶ-ಅತಂತ್ರ
ಅರಕಲಗೂಡು ಒಟ್ಟು ಸ್ಥಾನ -17
ಬಿಜೆಪಿ – 6, ಕಾಂಗ್ರೆಸ್ -5, ಜೆಡಿಎಸ್ -6
ಫಲಿತಾಂಶ-ಅತಂತ್ರ
ಯಳಂದೂರು ಒಟ್ಟು ಸ್ಥಾನ -11
ಬಿಜೆಪಿ – 1, ಕಾಂಗ್ರೆಸ್ -10, ಪಕ್ಷೇತರ -0
ಫಲಿತಾಂಶ-ಕಾಂಗ್ರೆಸ್.
ಹನೂರು ಒಟ್ಟು ಸ್ಥಾನ -13
ಬಿಜೆಪಿ – 3, ಕಾಂಗ್ರೆಸ್ -4, ಜೆಡಿಎಸ್-6
ಫಲಿತಾಂಶ-ಅತಂತ್ರ
ಕಲಘಟಗಿ ಒಟ್ಟು ಸ್ಥಾನ -17
ಬಿಜೆಪಿ – 9, ಕಾಂಗ್ರೆಸ್ -3, ಜೆಡಿಎಸ್-2, ಪಕ್ಷೇತರ-3
ಫಲಿತಾಂಶ-ಬಿಜೆಪಿ
ಅಳ್ಳಾವರ ಒಟ್ಟು ಸ್ಥಾನ -18
ಬಿಜೆಪಿ – 3, ಕಾಂಗ್ರೆಸ್ -8, ಜೆಡಿಎಸ್-6, ಪಕ್ಷೇತರ-1
ಫಲಿತಾಂಶ-ಅತಂತ್ರ
ಹೊನ್ನಾವರ ಒಟ್ಟು ಸ್ಥಾನ- 20
ಬಿಜೆಪಿ – 12, ಕಾಂಗ್ರೆಸ್ -1, ಜೆಡಿಎಸ್-2, ಪಕ್ಷೇತರ-5
ಫಲಿತಾಂಶ-ಬಿಜೆಪಿ
ಸಿದ್ದಾಪುರ ಒಟ್ಟು ಸ್ಥಾನ -15
ಬಿಜೆಪಿ -14, ಕಾಂಗ್ರೆಸ್ -1,
ಫಲಿತಾಂಶ-ಬಿಜೆಪಿ
ಔರತ್ ಒಟ್ಟು ಸ್ಥಾನ -20
ಬಿಜೆಪಿ -12, ಕಾಂಗ್ರೆಸ್ -6, ಪಕ್ಷೇತರ-2
ಫಲಿತಾಂಶ-ಬಿಜೆಪಿ
ಕಮಲಾಪುರ ಒಟ್ಟು ಸ್ಥಾನ -20
ಬಿಜೆಪಿ – 1, ಕಾಂಗ್ರೆಸ್ -15, ಪಕ್ಷೇತರ-5
ಫಲಿತಾಂಶ-ಕಾಂಗ್ರೆಸ್
ನಗರಸಭೆ ಫಲಿತಾಂಶ
ತಿಪಟೂರು ಒಟ್ಟು ಸ್ಥಾನ -31
ಬಿಜೆಪಿ – 11, ಕಾಂಗ್ರೆಸ್ -9, ಜೆಡಿಎಸ್- 5. ಪಕ್ಷೇತರ-6
ಫಲಿತಾಂಶ-ಅತಂತ್ರ
ನಂಜನಗೂಡು ಒಟ್ಟು ಸ್ಥಾನ -31
ಬಿಜೆಪಿ – 15, ಕಾಂಗ್ರೆಸ್ -10 ಜೆಡಿಎಸ್- 3, ಪಕ್ಷೇತರ-3
ಫಲಿತಾಂಶ-ಅತಂತ್ರ
ಬಸವಕಲ್ಯಾಣ ಒಟ್ಟು ಸ್ಥಾನ -31
ಬಿಜೆಪಿ – 5, ಕಾಂಗ್ರೆಸ್ -19, ಜೆಡಿಎಸ್- 3, ಪಕ್ಷೇತರ-4
ಫಲಿತಾಂಶ-ಕಾಂಗ್ರೆಸ್
ಶಹಾಪುರ ಒಟ್ಟು ಸ್ಥಾನ -31
ಬಿಜೆಪಿ -12, ಕಾಂಗ್ರೆಸ್ -6, ಇತರರ-2, ಪಕ್ಷೇತರ-1
ಫಲಿತಾಂಶ-ಕಾಂಗ್ರೆಸ್
ಹಿರಿಯೂರು ಒಟ್ಟು ಸ್ಥಾನ -31
ಬಿಜೆಪಿ -6, ಕಾಂಗ್ರೆಸ್ -13, ಜೆಡಿಎಸ್-3, ಪಕ್ಷೇತರ-9
ಫಲಿತಾಂಶ-ಅತಂತ್ರ
ಹರಿಹರ ಒಟ್ಟು ಸ್ಥಾನ -31
ಬಿಜೆಪಿ -5, ಕಾಂಗ್ರೆಸ್ -10, ಜೆಡಿಎಸ್-14, ಪಕ್ಷೇತರ-2
ಫಲಿತಾಂಶ-ಅತಂತ್ರ
ಪುರಸಭೆ
ಆನೇಕಲ್ ಒಟ್ಟು ಸ್ಥಾನ -27
ಬಿಜೆಪಿ -10, ಕಾಂಗ್ರೆಸ್ -17,
ಫಲಿತಾಂಶ-ಕಾಂಗ್ರೆಸ್
ಬಂಗಾರಪೇಟೆ ಒಟ್ಟು ಸ್ಥಾನ -27
ಬಿಜೆಪಿ -1, ಕಾಂಗ್ರೆಸ್ -20, ಜೆಡಿಎಸ್-2
ಫಲಿತಾಂಶ-ಕಾಂಗ್ರೆಸ್
ಶ್ರೀನಿವಾಸಪುರ ಒಟ್ಟು ಸ್ಥಾನ -23
ಬಿಜೆಪಿ -0, ಕಾಂಗ್ರೆಸ್ -8, ಜೆಡಿಎಸ್-11, ಪಕ್ಷೇತರರು -4
ಫಲಿತಾಂಶ-ಅತಂತ್ರ
ಮಾಲೂರು ಒಟ್ಟು ಸ್ಥಾನ -27
ಬಿಜೆಪಿ -10, ಕಾಂಗ್ರೆಸ್ -11, ಜೆಡಿಎಸ್-1, ಪಕ್ಷೇತರರು -5
ಫಲಿತಾಂಶ-ಅತಂತ್ರ
ಬಾಗೇಪಲ್ಲಿ ಒಟ್ಟು ಸ್ಥಾನ -23
ಬಿಜೆಪಿ -0, ಕಾಂಗ್ರೆಸ್ -13, ಜೆಡಿಎಸ್-2, ಪಕ್ಷೇತರರು -7
ಫಲಿತಾಂಶ-ಕಾಂಗ್ರೆಸ್
ಪಾವಗಡ ಒಟ್ಟು ಸ್ಥಾನ -23
ಬಿಜೆಪಿ -0, ಕಾಂಗ್ರೆಸ್ -20, ಜೆಡಿಎಸ್-2, ಪಕ್ಷೇತರರು -1
ಫಲಿತಾಂಶ-ಕಾಂಗ್ರೆಸ್
ಕುಣಿಗಲ್ ಒಟ್ಟು ಸ್ಥಾನ -23
ಬಿಜೆಪಿ -4, ಕಾಂಗ್ರೆಸ್ -14, ಜೆಡಿಎಸ್-3, ಪಕ್ಷೇತರರು-2
ಫಲಿತಾಂಶ-ಕಾಂಗ್ರೆಸ್
ಕೆ.ಆರ್.ನಗರ ಒಟ್ಟು ಸ್ಥಾನ -23
ಬಿಜೆಪಿ -1, ಕಾಂಗ್ರೆಸ್ -14, ಜೆಡಿಎಸ್-8
ಫಲಿತಾಂಶ-ಕಾಂಗ್ರೆಸ್
ಬನ್ನೂರು ಒಟ್ಟು ಸ್ಥಾನ -23
ಬಿಜೆಪಿ -2, ಕಾಂಗ್ರೆಸ್ -7, ಜೆಡಿಎಸ್-12, ಪಕ್ಷೇತರರು-2
ಫಲಿತಾಂಶ-ಜೆಡಿಎಸ್
ಕಡೂರು ಒಟ್ಟು ಸ್ಥಾನ -23
ಬಿಜೆಪಿ -6, ಕಾಂಗ್ರೆಸ್ -7, ಜೆಡಿಎಸ್-6, ಪಕ್ಷೇತರರು-4
ಫಲಿತಾಂಶ-ಅತಂತ್ರ
ಮೂಡಬಿದರೆಒಟ್ಟು ಸ್ಥಾನ -23
ಬಿಜೆಪಿ -12, ಕಾಂಗ್ರೆಸ್ -11
ಫಲಿತಾಂಶ-ಬಿಜೆಪಿ
ಮಳವಳ್ಳಿ ಒಟ್ಟು ಸ್ಥಾನ -23
ಬಿಜೆಪಿ -2, ಕಾಂಗ್ರೆಸ್ -5, ಜೆಡಿಎಸ್-9, ಪಕ್ಷೇತರರು-7
ಫಲಿತಾಂಶ-ಅತಂತ್ರ
ಕೆ.ಆರ್.ಪೇಟೆ ಒಟ್ಟು ಸ್ಥಾನ -23
ಬಿಜೆಪಿ -1, ಕಾಂಗ್ರೆಸ್ -10, ಜೆಡಿಎಸ್-11, ಪಕ್ಷೇತರರು-1
ಫಲಿತಾಂಶ-ಅತಂತ್ರ
ಶ್ರೀರಂಗಪಟ್ಟಣ ಒಟ್ಟು ಸ್ಥಾನ -23
ಬಿಜೆಪಿ -1, ಕಾಂಗ್ರೆಸ್ -8, ಜೆಡಿಎಸ್-12, ಪಕ್ಷೇತರರು-2
ಫಲಿತಾಂಶ-ಜೆಡಿಎಸ್
ಗುಂಡ್ಲಪೇಟೆ ಒಟ್ಟು ಸ್ಥಾನ -23
ಬಿಜೆಪಿ -13, ಕಾಂಗ್ರೆಸ್ -8, ಪಕ್ಷೇತರರು-1, ಇತರರು-1
ಫಲಿತಾಂಶ-ಬಿಜೆಪಿ
ತಾಳಿಕೋಟೆ ಒಟ್ಟು ಸ್ಥಾನ -23
ಬಿಜೆಪಿ -3, ಕಾಂಗ್ರೆಸ್ -3, ಪಕ್ಷೇತರರು-16
ಫಲಿತಾಂಶ-ಪಕ್ಷೇತರರ ಪಾಲು
ಬಸವನಬಾಗೇವಾಡಿ ಒಟ್ಟು ಸ್ಥಾನ -23
ಬಿಜೆಪಿ -6, ಕಾಂಗ್ರೆಸ್ -13, ಇತರರು -4
ಫಲಿತಾಂಶ-ಕಾಂಗ್ರೆಸ್
ಇಂಡಿ ಒಟ್ಟು ಸ್ಥಾನ -23
ಬಿಜೆಪಿ -11, ಕಾಂಗ್ರೆಸ್ -8, ಜೆಡಿಎಸ್-2 ಪಕ್ಷೇತರರು-2
ಫಲಿತಾಂಶ-ಅತಂತ್ರ
ನವಲಗುಂದ ಒಟ್ಟು ಸ್ಥಾನ -23
ಬಿಜೆಪಿ -6, ಕಾಂಗ್ರೆಸ್ -7, ಜೆಡಿಎಸ್-9, ಪಕ್ಷೇತರರು-1
ಫಲಿತಾಂಶ-ಅತಂತ್ರ
ಮುಂಡರಗಿ ಒಟ್ಟು ಸ್ಥಾನ -23
ಬಿಜೆಪಿ -12, ಕಾಂಗ್ರೆಸ್ -6, ಜೆಡಿಎಸ್-1, ಪಕ್ಷೇತರರು-4
ಫಲಿತಾಂಶ-ಬಿಜೆಪಿ
ನರಗುಂದ ಒಟ್ಟು ಸ್ಥಾನ -23
ಬಿಜೆಪಿ -17, ಕಾಂಗ್ರೆಸ್ -6,
ಫಲಿತಾಂಶ-ಬಿಜೆಪಿ
ಬ್ಯಾಡಗಿ ಒಟ್ಟು ಸ್ಥಾನ -23
ಬಿಜೆಪಿ -13, ಕಾಂಗ್ರೆಸ್ -6, ಪಕ್ಷೇತರರು-4
ಫಲಿತಾಂಶ-ಬಿಜೆಪಿ
ಶಿಗ್ಗಾವಿ ಒಟ್ಟು ಸ್ಥಾನ -23
ಬಿಜೆಪಿ -9, ಕಾಂಗ್ರೆಸ್ -6, ಪಕ್ಷೇತರರು-8
ಫಲಿತಾಂಶ-ಅತಂತ್ರ
ಭಟ್ಕಳ ಒಟ್ಟು ಸ್ಥಾನ -23
ಬಿಜೆಪಿ -1, ಕಾಂಗ್ರೆಸ್ -4, ಪಕ್ಷೇತರರು-16
ಫಲಿತಾಂಶ-ಪಕ್ಷೇತರರ ಪಾಲು
ಬಾಲ್ಕಿ ಒಟ್ಟು ಸ್ಥಾನ -27
ಬಿಜೆಪಿ -4, ಕಾಂಗ್ರೆಸ್ -8, ಜೆಡಿಎಸ್-4 ಪಕ್ಷೇತರರು-1
ಫಲಿತಾಂಶ-ಕಾಂಗ್ರೆಸ್
ಹುಮನಾಬಾದ್ ಒಟ್ಟು ಸ್ಥಾನ -27
ಬಿಜೆಪಿ -4, ಕಾಂಗ್ರೆಸ್ -19, ಜೆಡಿಎಸ್-3 ಪಕ್ಷೇತರರು-1
ಫಲಿತಾಂಶ-ಕಾಂಗ್ರೆಸ್
ಚಿಟಗುಪ್ಪ ಒಟ್ಟು ಸ್ಥಾನ -23
ಬಿಜೆಪಿ -6, ಕಾಂಗ್ರೆಸ್ -13, ಜೆಡಿಎಸ್-3 ಪಕ್ಷೇತರರು-1
ಫಲಿತಾಂಶ-ಕಾಂಗ್ರೆಸ್
ಸಂಡೂರು ಒಟ್ಟು ಸ್ಥಾನ -23
ಬಿಜೆಪಿ -10, ಕಾಂಗ್ರೆಸ್ -12, ಪಕ್ಷೇತರರು-1
ಫಲಿತಾಂಶ-ಕಾಂಗ್ರೆಸ್
ಹೂವಿನಹಡಗಲಿ ಒಟ್ಟು ಸ್ಥಾನ -23
ಬಿಜೆಪಿ -9, ಕಾಂಗ್ರೆಸ್ -141
ಫಲಿತಾಂಶ-ಕಾಂಗ್ರೆಸ್
ಹರಪ್ಪನಹಳ್ಳಿ ಒಟ್ಟು ಸ್ಥಾನ -27
ಬಿಜೆಪಿ -10, ಕಾಂಗ್ರೆಸ್ -14, ಜೆಡಿಎಸ್-1 ಪಕ್ಷೇತರರು-2
ಫಲಿತಾಂಶ-ಕಾಂಗ್ರೆಸ್