ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂಎಸ್ ಧೋನಿ ಕಮಾಲ್ ಮಾಡಿದ್ದಾರೆ. ವಿಶ್ವಕಪ್ಗೂ ಮುನ್ನ ಕೆಲವರ ಕೆಂಗಣ್ನೀಗೆ ಗುರಿಯಾಗಿದ್ದ ಧೋನಿ ನಿನ್ನೆ ಕಾರ್ಡಿಯಫ್ನಲ್ಲಿ ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಜಬರ್ದಸ್ತ್ ಬ್ಯಾಟಿಂಗ್ ಮಾಡಿ ಟೀಕಾಕಾರಾರರಿಗೆ ಬ್ಯಾಟ್ನಲ್ಲೆ ಉತ್ತರ ಕೊಟ್ಟಿದ್ದಾರೆ.
ಹೌದು ನಿನ್ನೆ ಕಾರ್ಡಿಫ್ ಅಂಗಳದಲ್ಲಿ ಬಾಂಗ್ಲಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಧೋನಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ತಮ್ಮ ಸಾಮರ್ಥ್ಯ ಏನೆಂಬುದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ರು. ಟಾಸ್ ಗೆದ್ದ ಬಾಂಗ್ಲಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮಳೆಯ ಕಣ್ಣಾಮುಚ್ಚಾಲೆಯಲ್ಲಿ ಆರರಂಭವಾದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ತಂಡದ ಓನರ್ಸ್ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಆeಛಿeಟಿಣ ಓಪನಿಂಗ್ ಒಡುವಲ್ಲಿ ಎಡವಿದ್ರು.
ಕ್ಯಾಪ್ಟನ್ ಕೊಹ್ಲಿ 47, ವಿಜಯ್ ಶಂಕರ್ 2 ರನ್ ಗಳಿಸಿ ಪೆವಿಲಿಯನ್ ಸೇರಿದ್ರು.
ತಂಡಕ್ಕೆ ಆಪತ್ಬಾಂಧವನಾದ ಮಿಸ್ಟರ್ ಕೂಲ್ ಧೋನಿ
102 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಾಂಚಿ ಱಂಬೊ ಧೋನಿ ಕನ್ನಡಿಗ ರಾಹುಲ್ ಜೊತೆ slow and Steady ಇನ್ನಿಂಗ್ಸ್ ಕಟ್ಟಿದ್ರು. ಆರಂಭದಲ್ಲಿ ನೀಧಾನಗತಿಯ ಬೌಲಿಂಗ್ ಮಾಡಿದ ಮಾಹಿ ನಂತರ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದ್ರು.
ಬೌಂಡರಿಯ ಮೂಲೆ ಮೂಲೆಗೂ ಚೆಂಡಿನ ಪರಿಚೆಯ ಮಾಡಿಕೊಟ್ಟ ಧೋನಿ 47 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು. ಇದಾದ ನಂತರ ಬಿರುಸಿನ ಬ್ಯಾಟಿಂಗ್ ಮಾಡಿದ ಮಾಹಿ 73ನೇ ಎಸತೆದಲ್ಲಿ ಶತಕ ಬಾರಿಸಿದ್ರು. ಇದರೊಂದಿಗೆ ಸುದೀರ್ಘ ಎರಡು ವರ್ಷದ ನಂತರ ಏಕದಿನ ಕ್ರಿಕೆಟ್ನಲ್ಲಿ ಶತಕ ಬಾರಿಸಿದ್ರು. ಈ ಮೂಲಕ ವಿಶ್ವಕಪ್ನಲ್ಲಿ ಅಬ್ಬರಿಸೋದಾಗಿ ಎಲ್ಲ ತಂಡಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಶತಕ ಬಾರಿಸಿದ ಧೋನಿ
78 ಎದುರಿಸಿದ ಧೋನಿ ಒಟ್ಟು 113 ರನ್ ಗಳಿಸಿದ್ರು. ಇದರಲ್ಲಿ 8 ಬೌಂಡರಿ 7 ಸಿಕ್ಸರ್ ಬಾರಿಸಿ 109.09 ಸ್ಟ್ರೈಕ್ ರೇಟ್ ಪಡೆದ್ರು.
ಎರಡು ವರ್ಷದ ಹಿಂದೆ ಶತಕ ಬಾರಿಸಿದ್ದ ಮಹೇಂದ್ರ
ಹೌದು ಧೋನಿ ಎರಡು ವರ್ಷದ ಹಿಂದೆ ಧೋನಿ ಕೊನೆಯ ಶತಕ ಬಾರಿಸಿದ್ರು. ಅಂದು ಕಟಕ್ನ ಬಾಬರ್ಮತಿ ಅಂಗಳದಲ್ಲಿ ಧೋನಿ ಆಂಗ್ಲರ ವಿರುದ್ಧ 132 ರನ್ ಬಾರಿಸಿದ್ದು ಕೊನೆಯ ಏಕದಿನ ಶತವಾಗಿತ್ತು. ಇದಾದ ನಂತರ ಧೋನಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು.
ಒಟ್ಟಾರೆ ಧೋನಿ ಇದೀಗ ಶತಕ ಬಾರಿಸಿದ್ದು ಧೋನಿ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ಕೊಟ್ಟಿದೆ. ಧೋನಿ ವಿಶ್ವಕಪ್ನಲ್ಲೂ ಹೀಗೆ ಅಬ್ಬರಿಸಲಿ ಕೋಟಿ ಕೋಟಿ ಭಾರತೀಯರ ಆಶಯವಾಗಿದೆ.