ಬೆಂಗಳೂರು,ಮೇ 28- ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರ ಮಾಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಜೂ. 10ರಂದು ನಗರದ ಟೌನ್ಹಾಲ್ ಮುಂಭಾಗ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಂಡಳಿ ಪ್ರತಿಭಟನೆ ನಡೆಸಲಿದೆ.
ಈ ಬಗ್ಗೆ ಮಾತನಾಡಿದ ಮಹಾಂಡಳಿಯ ಅಧ್ಯಕ್ಷ ಜಿ.ಆರ್.ಶಿವಶಂಕರ್..ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಅಂಗನವಾಡಿಯಲ್ಲಿ ಮಾಡಲಿ.ನಮ್ಮ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಆಯ್ಕೆ ಮಾಡಲಿ ಎಂದು ಒತ್ತಾಯಿಸಿದರು.
ಸರ್ಕಾರಿ ಶಾಲೆಯಲ್ಲಿ ಶಿಶುಕೇಂದ್ರ ಸ್ಥಾಪನೆಯಿಂದ ಅಂಗನವಾಡಿಗೆ ಮಕ್ಕಳು ಬರುವ ಸಂಖ್ಯೆ ಕ್ಷಿಣಿಸುತ್ತದೆ..ಇದರಿಂದ ಮುಂದಿನ ದಿನಗಳಲ್ಲಿ ಅಂಗನವಾಡಿಗಳನ್ನು ಮುಂಚುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಸರ್ಕಾರ ಕೂಡಲೇ ಈ ಶಿಫಾರಸ್ಸುನ್ನು ಕೂಡಲೇ ಪರಿಷ್ಕರಿಸಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸರ್ಕಾರ ಸ್ಪಂದಿಸದಿದ್ದಾರೆ ಜುಲೈ 1ರಿಂದ ರಾಜ್ಯಾದಾದ್ಯಂತ ಅಂಗನವಾಡಿ ಬಂದ್ ಮಾಡಲು ತೀರ್ಮಾನಿಸಿದ್ದೇವೆ ಎಂದು ಎಚ್ಚರಿಸಿದರು.
ಪ್ರಸ್ತುತ ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಪಾಲನಾ ಕೇಂದ್ರವಾಗಿಸಲು ಬೇಕಾದ ಮೂಲಭೂತ ಅನುಕೂಲನೆಗಳಿಂದ ವ್ಯವಸ್ಥಿತಗೊಳಿಸಬೇಕು, ಪ್ರತಿ ಗ್ರಾಮಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಬೇಕು, ಇಲ್ಲಿ ಮೂರು ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ನೀಡಿ, ತರಬೇತಿ ಪಡೆದ ಶಿಕ್ಷಕಿ ಹಾಗೂ ಓರ್ವ ಸಹಾಯಕರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಕಾರ್ಯಕರ್ತೆಯರ ಸೇವೆ ಸಂದರ್ಭಾನುಸಾರ ನಿಯಮಿತವಾಗಿ ದೊರಕುವಂತಿರಬೇಕು ಮತ್ತು ಸೌಲಭ್ಯ ಒದಗಿಸಬೇಕು ಎಂದು ಸರ್ಕಾರದ ಮುಂದೆ ಬೇಡಿಕೆಯಿಟ್ಟರು.
ಸುದ್ದಿಗೋಷ್ಠಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾ, ಯಶೋಧರ ಸೇರಿ ಅನೇಕ ಕಾರ್ಯಕರ್ತೆಯರು ಹಾಜರಿದ್ದರು.