ಮಳೆ ಕಡಿಮೆಯಾದ ಹಿನ್ನಲೆ ಕಡಿಮೆಯಾದ ಮಾವು ಬೆಳೆ ಇಳುವರಿ

ಬೆಂಗಳೂರು,ಮೇ 28- ನಿರೀಕ್ಷಿಸಿದ ಮಟ್ಟದಲ್ಲಿ ಈ ಬಾರಿ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಮಾವು ಬೆಳೆ ಇಳುವರಿಯಲ್ಲಿ ಕಡಿಮೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ ತಿಳಿಸಿದರು.

ತೋಟಗಾರಿಕೆ ಸಂಶೋಧನೆ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಮಾವು ಮತ್ತು ಹಲಸು ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ 1.8 ಲಕ್ಷ ಹೆಕ್ಟೇರ್‍ನಲ್ಲಿ 8 ಲಕ್ಷ ಮೆಟ್ರಿಕ್ ಬೆಳೆ ಅಂದಾಜು ಇಳುವರಿ ಕಂಡುಬಂದಿದೆ ಎಂದರು.

ರೈತರು ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಭಾರತಿಯ ಅನುಸಂಧಾನ ಪರಿಷತನ ಹೆಸರು ಘಟ್ಟ ತೋಟಗಾರಿಕೆ ಸಂಶೋಧನೆ ಸಂಸ್ಥೆ ಆವರಣದಲ್ಲಿ ಇಂದು ಮತ್ತು ನಾಳೆ ಮಾವು ಮತ್ತು ಹಲಸು ಮೇಳವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಈ ಮೇಳದಲ್ಲಿ 725 ಕ್ಕೂ ಹೆಚ್ಚು ವೈವಿಧ್ಯಮಯ ಮಾವಿನ ತಳಿಗಳು ಹಾಗೂ 120ಕ್ಕೊ ಹೆಚ್ಚು ಹಲಸು ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ ಎಂದು ತಿಳಿಸಿದರು.

ಮೇಳದಲ್ಲಿ ಆರ್ಕಾ ಅರ್ಬನ್ ಕಿಟ್‍ನ್ನು ಪ್ರದರ್ಶಿಸಲಾಗಿದ್ದು, ಈ ಕಿಟ್‍ನಲ್ಲಿ 2 ರೀತಿಯ ಹೂವಿನ ಬೀಜ 7 ರೀತಿಯ ತರಕಾರಿ ಬೀಜಗಳು ಹಾಗು ಕಾಂಫೆÇಸ್ಟ್ ಗೊಬ್ಬರ ಒಳಗೊಂಡಿರುವ ಕಿಟ್‍ನ್ನು ಪ್ರದರ್ಶನಕ್ಕಿಡಲಾಗಿದೆ ಎಂದರು.

ಈ ಮೇಳದಲ್ಲಿ 20ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು ಹಣ್ಣು ಹಾಗೂ ಬೀಜಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.ಒಂದೇ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಮಾಗಿದ ಹಣ್ಣಗಳನ್ನು ಪ್ರದರ್ಶನಕ್ಕಿಡಲಾಗಿದೆ ಎಂದರು.

ರೈತರಿಗೆ ಹಾಗೂ ಗ್ರಾಹಕರಿಗೆ ನೇರ ಮಾರುಕಟ್ಟೆ ಒದಗಿಸುವುದಾಗಿ ಧಾರವಾಡ ಕೋಲಾರದಲ್ಲಿ ಮಾವು ಸಂಸ್ಕರಣ ಘಟಕ ಹಾಗೊ ವಿವಿಧೆಡೆ ಮೇಳಗಳನ್ನ ಏರ್ಪಡಿಸಲಾಗುವುದಾಗಿ ತಿಳಿಸಿದರು.

ಈ ಎರಡು ದಿನಗಳ ಕಾಲ ನಡೆಯುವ ಮೇಳದಲ್ಲಿ ರೈತರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಗಮನಸೆಳೆದ ಹಲಸು: ಮೇಳದಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಬೆಳೆದ ಮೆನೇರಿಕಲ್ ಎಂಬ ತಳಿಯ ಹಲಸು ಗ್ರಾಹಕರ ಹಾಗೂ ರೈತರ ಗಮನ ಸೆಳೆಯಿತು.

ಈ ತಳಿಯ ಹಲಸು ಸುಮಾರು 80 ಕೆಜಿ ತೂಕ ಬರಲಿದೆ. ಪ್ರಸುತ ಪ್ರದರ್ಶನಿಕ್ಕಿಟ್ಟಿರುವ ಹಲಸು ಸುಮಾರು 40 ಕೆಜಿ ತೂಕ ಹೊಂದಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿವಿಯ ಕುಲಪತಿ ರಾಜೇಂದ್ರ ಪ್ರಸಾದ್, ಐಐಎಚ್‍ಆರ್ ನಿರ್ದೇಶಕ ಡಾ.ದಿನೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ