ಬೀದರ್: ರಮಜಾನ್ ನಿಮಿತ್ತ ಬೀದರ್ನ ಮೋಗಲ್ ಗಾರ್ಡನ್ ಫಂಕ್ಸನ್ ಹಾಲ್ನಲ್ಲಿ ಭಾನುವಾರ ರಾತ್ರಿ ಕಾಂಗ್ರೆಸ್ ಯುವ ಮುಖಂಡ ಅಯಾಜ್ ಖಾನ್ ಇಪ್ತಾರ್ ಕೂಡ ಆಯೋಜಿಸಿದರು. ಎಸ್ಪಿ ಟಿ.ಶ್ರೀಧರ್, ಮುಖಂಡರಾದ ಇರ್ಷಾದ್ ಪೈಲ್ವಾನ್, ನವಾಜ್ ಖಾನ್, ಅಯಾಮ್ ಖಾನ್, ಎಂಡಿ ಯುಸೂಫ್ ಖಾನ್ ಸೇರಿದಂತೆ ಹಲವು ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಅಯಾಜ್ ಖಾನ್, ಮುಸ್ಲಿಂ ಬಾಂಧವರಿಗೆ ರಮಜಾನ್ ಪವಿತ್ರ ಹಬ್ಬವಾಗಿದ್ದು, ಒಂದು ತಿಂಗಳು ಕಾಲ ಉಪವಾಸ, ದಾನ ಸೇರಿದಂತೆ ಹಲವು ಧಾರ್ಮಿಕ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಎಲ್ಲಕ್ಕಿಂತ ಮುಖ್ಯವಾಗಿ ದಾನ ಬಹಳ ಶ್ರೇಷ್ಠ ಕಾರ್ಯ. ನಾವು ಗಳಿಸಿದ ಪೈಕಿ ಸ್ವಲ್ಪವಾದರೂ ದಾನ ಮಾಡಬೇಕು ಎಂದು ಮಹ್ಮದ್ ಪೈಗಂಬರ್ ಅವರು ಹೇಳಿದ್ದಾರೆ. ಹೀಗಾಗಿ ದಾನ ಮಾಡುವ ಮೂಲಕ ಸಮಾಜದ ಬಡವರಿಗೆ ಮೇಲೆತ್ತುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ಹೇಳಿದರು.