ಬೆಂಗಳೂರು,ಮೇ 28- ಇಬ್ಬರು ಸದಸ್ಯರ ಅಕಾಲಿಕ ನಿಧನದಿಂದ ತೆರವಾಗಿರುವ ಬಿಬಿಎಂಪಿಯ ಎರಡು ವಾರ್ಡ್ಗಳಿಗೆ ನಾಳೆ ನಡೆಯುತ್ತಿರುವ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ.
ಉಪಮೇಯರ್ ರಮೀಳಾ ಉಮಾಶಂಕರ್ ನಿಧನದಿಂದ ತೆರವಾಗಿರುವ ಕಾವೇರಿಪುರ ಹಾಗೂ ಸದಸ್ಯ ಏಳುಮಲೈ ನಿಧನದಿಂದ ತೆರವಾಗಿರುವ ಸಗಾಯಿಪುರಂ ವಾರ್ಡ್ಗಳಿಗೆ ನಾಳೆ ಚುನಾವಣೆ ನಡೆಯುತ್ತಿದೆ.
ಕಾವೇರಿಪುರದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಪೈಪೆÇೀಟಿ ಏರ್ಪಟಿದ್ದು, ಗೆಲುವಿಗಾಗಿ ಎರಡೂ ಪಕ್ಷದವರು ಮತದಾರರ ಮನ ಗೆಲ್ಲಲು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ.
ಬಿಜೆಪಿಯಿಂದ ಪಾಲಿಕೆ ಮಾಜಿ ಸದಸ್ಯ ಚನ್ನಪ್ಪ ಅವರ ಪುತ್ರಿ ಸಿ.ಪಲ್ಲವಿ ಅಭ್ಯರ್ಥಿಯಾಗಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸುಶೀಲ ಸುರೇಶ್ ಕಣದಲ್ಲಿದ್ದಾರೆ.
ಕಾವೇರಿಪುರ ಉಪಚುನಾವಣೆಯನ್ನು ಶಾಸಕ ವಿ.ಸೋಮಣ್ಣ ಮತ್ತು ಮಾಜಿ ಶಾಸಕ ಪ್ರಿಯಾಕೃಷ್ಣ ನಡುವಿನ ಪೈಪೆÇೀಟಿಯೆಂದೇ ಬಿಂಬಿಸಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸೋಮಣ್ಣ ಅವರ ಹಿಂಬಾಲಕ ಪಡೆ ಹರಸಾಹಸ ಪಡುತ್ತಿದ್ದರೆ, ಮತ್ತೆ ವಾರ್ಡ್ನಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಪ್ರಿಯಾಕೃಷ್ಣ ಅವರಿಗೆ ವರ್ಚಸ್ಸು ತಂದುಕೊಡಲು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಸಿ.ಪಲ್ಲವಿ ಪರ ಗೋವಿಂದರಾಜನಗರ ವಾರ್ಡ್ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ನಿಂತಿದ್ದರೆ ಸುಶೀಲ ಅವರಿಗೆ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಸಾಥ್ ನೀಡಿದ್ದಾರೆ.
ಈಗಾಗಲೇ ಬಿಜೆಪಿ ಮತ್ತು ಮೈತ್ರಿ ಪಕ್ಷದ ಕಾರ್ಯಕರ್ತರ ನಡುವೆ ಹೊಡೆದಾಟ ಕೂಡ ನಡೆದಿರುವುದರಿಂದ ನಾಳಿನ ಮತದಾನ ಗಮನಸೆಳೆದಿದೆ.
ಇನ್ನು ಸಗಾಯಿಪುರಂ ವಾರ್ಡ್ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮೈತ್ರಿ ಅಭ್ಯರ್ಥಿಯಾಗಿ ಏಳುಮಲೈ ಸಹೋದರಿ ಪಳನಿಯಮ್ಮ ಸ್ಪರ್ಧಿಸಿದ್ದರೆ ಬಿಜೆಪಿಯಿಂದ ಪೌರಕಾರ್ಮಿಕ ಮುಖಂಡ ಜೈರಿಮ್ ಕಣದಲ್ಲಿದ್ದಾರೆ.
ಗೆಲುವಿಗಾಗಿ ಇವರಿಬ್ಬರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾರಿಮುತ್ತು ಅವರನ್ನು ಕಡೆಗಣಿಸುವಂತಿಲ್ಲ.
ಮತ್ತೆ ವಾರ್ಡ್ನಲ್ಲಿ ತನ್ನ ಸಾಮಥ್ರ್ಯ ಏನೆಂಬುದನ್ನು ಸಾಬೀತುಪಡಿಸುವ ಉದ್ದೇಶದಿಂದ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೂ ಸೆಡ್ಡು ಹೊಡೆಯುವಂತೆ ಮಾರಿಮುತ್ತು ಪ್ರಚಾರ ನಡೆಸಿದ್ದರು. ಹೀಗಾಗಿ ಸಗಾಯಿಪುರಂನಲ್ಲಿ ತ್ರಿಕೋನ ಸ್ಫರ್ಧೆ ಏರ್ಪಟ್ಟಿದೆ.