ಈ ಬಾರಿಯ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಅಂತ ಕರೆಸಿಕೊಂಡಿರುವ ಟೀಂ ಇಂಡಿಯಾದ ಅಸಲಿ ತಾಕತ್ತು ಅಭ್ಯಾಸ ಪಂದ್ಯದಲ್ಲೆ ಗೊತ್ತಾಗಿದೆ. ನಿನ್ನೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮಕಾಡೆ ಮಲಗಿದೆ.
ಐಪಿಎಲ್ನಲ್ಲಿ ಆಡಿ ದಣಿದಿದ್ದ ಟೀಮ್ ಇಂಡಿಯಾ ಆಟಗಾರರು ಫಿಟ್ ಆಗಿದ್ದಾರಾ.. ಇಲ್ವಾ ಎಂಬ ಅನುಮಾನಗಳಿಗೆ ಮೊದಲ ಅಭ್ಯಾಸ ಪಂದ್ಯದಲ್ಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿ ಉತ್ತರ ಸಿಕ್ಕಿದೆ.. ಐಪಿಎಲ್ ಮುಗಿಯುತ್ತಿದ್ದಂತೆ ರಿಲ್ಯಾಕ್ಸ್ ಮೂಡ್ಗೆ ಮರಳಿದ್ದ ಆಟಗಾರರು ಸೀದಾ ವಿಶ್ವಕಪ್ ಗೆಲ್ತೀವಿ ಅನ್ನೋ ರೇಂಜ್ಗೆ ಪ್ಲೇಟ್ ಹತ್ತಿ ಆಂಗ್ಲರ ನಾಡಿಗೆ ಬಂದಿಳಿದ್ರು. ಆದ್ರೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಸ್ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.
ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಕೇವಲ ಅಭ್ಯಾಸ ಪಂದ್ಯವಾಗಿರಲಿಲ್ಲ, ಬದಲಿಗೆ ಟೀಮ್ ಇಂಡಿಯಾ ಆಟಗಾರರ ಫಿಟ್ನೆಟ್ ಟೆಸ್ಟ್ ಮ್ಯಾಚ್ ಆಗಿತ್ತು.. ಆದ್ರೆ, ಇಲ್ಲಿ ಟೀಮ್ ಇಂಡಿಯಾ ಆಟಗಾರರು ಬ್ಯಾಟ್ ಬೀಸಿದ ಪರಿ ನೋಡಿದ್ರೆ. ಇದೇನಾ ಟೀಂ ಇಂಡಿಯಾ ? ವಿಶ್ವಕಪ್ಗೆ ಹೀಗೇನಾ ಸಜ್ಜಾಗಿರೋದು ಟೀಂ ಇಂಡಿಯಾ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಒಳ್ಳೆಯ ಓಪನಿಂಗ್ ಕೊಡುವಲ್ಲಿ ರೋಹಿತ್ , ಧವನ್ ಫೇಲ್
ಸದ್ಯ ಏಕದಿನ ಕ್ರಿಕೆಟ್ನ ಬೆಸ್ಟ್ ಓಪನರ್ಸ್ ಜೋಡಿ ಎಂದ್ರೆ, ಟೀಮ್ ಇಂಡಿಯಾದ ಹಿಟ್ಮ್ಯಾನ್ ರೋಹಿತ್ ಶರ್ಮಾ-ಶಿಖರ್ ಧವನ್, ಆದರೆ ಅಭ್ಯಾಸ ಪಂದ್ಯದಲ್ಲಿ ಒಳ್ಳೆಯ ಓಪನಿಂಗ್ ಕೊಡದೇ ಫ್ಲಾಪ್ ಆಗಿದ್ದಾರೆ.
6 ಎಸೆತ ಎದುರಿಸಿದ ರೋಹಿತ್ ಶರ್ಮಾ 2 ರನ್ ಬಾರಿಸಿ ಬೌಲ್ಟ್ ಬೌಲಿಂಗ್ನಲ್ಲಿ ಟbತಿ ಬಲೆಗೆ ಬಿದ್ದು ನಿರಾಸೆಯಿಂದ ಹೊರ ನಡೆದ್ರೆ, ಇನ್ನು ಗಾಯದ ಸಮಸ್ಯೆಗೆ ಗುರಿಯಾಗಿರುವ ಧವನ್ ಬೌಲ್ಟ್ಗೆ ಬಲಿಯಾದ್ರು..
ಕ್ಯಾಪ್ಟನ್ ವಿರಾಟ್ ಕೊಹ್ಲಿ ಫ್ಲಾಪ್
ಟೀಂ ಇಂಡಿಯಾದ ಬ್ಯಾಟಿಂಗ್ ಲೈನ್ಅಪ್ನ ಟ್ರಂಪ್ ಕಾರ್ಡ್ ಆಗಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಟ್ಟ ನಿರೀಕ್ಷೆಯನ್ನ ಹುಸಿಗೊಳಿಸಿದ್ರು. ಸ್ಲೊ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 24 ಎಸೆತಗಳಲ್ಲಿ 18 ರನ್ ಬಾರಿಸಿ ಗ್ರಾಂಡ್ ಹೋಮ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ನತ್ತ ಹೆಜ್ಜೆಹಾಕಿದ್ರು.
ನಾಲ್ಕನೆ ಸ್ಲಾಟ್ನಲ್ಲಿ ರಾಹುಲ್ ಫ್ಲಾಪ್
ಐಪಿಎಲ್ ಟೂರ್ನಿಯಲ್ಲಿ ರನ್ ಮಳೆಯನ್ನೇ ಹರಿಸಿದ ಕೆ.ಎಲ್.ರಾಹುಲ್, ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಅಂತೂ ಎದುರಾಳಿ ಬೌಲರ್ಗಳ ಬೌಲಿಂಗ್ಗೆ ತಡಬಡಾಯಿಸಿದ್ದೆ ಹೆಚ್ಚು.. 1 ಬೌಂಡರಿ ಸಹಿತ 6 ರನ್ ಬಾರಿಸಿದ ಕೆ.ಎಲ್.ರಾಹುಲ್ ಬೌಲ್ಟ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದ್ರು. ಇದರೊಂದಿಗೆ ನಾಲ್ಕನೆ ಸ್ಲಾಟ್ನಲ್ಲಿ ರಾಹುಲ್ ಕೂಡ ಫ್ಲಾಪ್ ಆಗಿದ್ದಾರೆ.
ನಂತರ ಮಿಡ್ಲ್ ಆರ್ಡರನಲ್ಲಿ ಧೋನಿ ಜೊತೆಗೂಡಿ ಸ್ಪೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿ ಕೆಲವೊತ್ತು ಕಿವೀಸ್ ಬೌಲರ್ಸ್ಗಳ ಕಾಡಿದ್ರು, ಆದ್ರೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ, ನಿಶಾನ್ಗೆ ವಿಕೆಟ್ ಒಪ್ಪಿಸಿ ಹೊರನಡೆದ್ರು… ತಂಡ ಸಂಕಷ್ಟದಲ್ಲಿದ್ದಾಗ ಆಸರೆಯಾಗಬೇಕಿದ್ದ ದಿನೇಶ್ ಕಾರ್ತಿಕ್, ನಿಶಾನ್ ಗೆ ಬಲಿಯಾದ್ರು.
ಏಕಾಂಗಿ ಹೋರಾಟ ಮಾಡಿ ಅರ್ಧ ಶತಕ ಬಾರಿಸಿದ ಜಡ್ಡು
ಇಡೀ ತಂಡದ ಬ್ಯಾಟಿಂಗ್ ಲೈನ್ಅಪ್ ಪೆವಿಲಿಯನ್ ಪರೇಡ್ ನಡೆಸಿದ್ರೆ ಆಲ್ರೌಂಡರ್ ರವಿಂದ್ರ ಜಡೇಜಾ ಏಕಾಂಗಿ ಹೋರಾಟ ನಡೆಸಿ ತಂಡವನ್ನ ಅಲ್ಪಮೊತ್ತದಿಂದ ಕುಸಿಯುವ ಭೀತಿಯಿಂದ ಪಾರು ಮಾಡಿ ಅರ್ಧ ಶತಕ ದಾಖಲಿಸಿದ್ರು.
ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾದ ಅಸಲಿ ತಾಕತ್ತು ಏನೆಂಬುದು ಗೊತ್ತಾಗಿದೆ. ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಂಡು ಮುಂದೆ ಕೊಹ್ಲಿ ಸೈನ್ಯ ಎಚ್ಚರಿಕೆಯ ಹೆಜ್ಜೆ ಇಡೇಕಿದೆ.