ವಿಶ್ವಕಪ್ನಲ್ಲಿ ಹೇಗಿರುತ್ತೆ ಟೀಂ ಇಂಡಿಯಾ ಪ್ಲೇಯಿಂಗ್ಇಲೆವೆನ್ ? ಕೊಹ್ಲಿ ಸೈನ್ಯದಲ್ಲಿ ಯಾರಿಗೆ ಸಿಗುತ್ತೆ ಚಾನ್ಸ್ ?

ಕ್ರಿಕೆಟ್ ಅಭಿಮಾನಿಗಳೆಲ್ಲ ಕುತೂಹಲದಿಂದ ಕಾಯುತ್ತಿರುವ ವಿಶ್ಕಕಪ್ ಜಾತ್ರಗೆ ಇನ್ನೂ ಹೆಚ್ಚು ಸಮಯ ಇಲ್ಲ. ಅಭ್ಯಾಸ ಪಂದ್ಯಗಳು ಆರಂಭವಾದರೂ ಕೂಡ ಎಲ್ಲಾ ತಂಡಗಳು ವಿಶ್ವ ಮಹಾಸಮರವನ್ನ ಗೆಲ್ಲಲು ರಣತಂತ್ರ ಎಣಿಯುತ್ತಿವೆ. ಸದ್ಯ ಅಭ್ಯಾಸ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಏನು ? ಎದುರಳಿಗಳ ತಾಕತ್ತು ಏನುಂಬುದನ್ನ ತಿಳಿದು ಕೊಳ್ಳುತ್ತಿವೆ. ಕೊಹ್ಲಿ ಸೈನ್ಯ ಕೂಡ ಕಿವಿಸ್ ವಿರುದ್ಧ ಅಭ್ಯಾಸ ಪಂದ್ಯ ಆಡುವ ಮೂಲಕ ಮಹಾ ಸಂಗ್ರಾಮಕ್ಕೆ ಸಜ್ಜಾಗ್ತಿದೆ. ವಿಶ್ವಕಪ್ ಗೆಲ್ಲುವ ರೇಸ್ನಲ್ಲಿರುವ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲ ಆಡ್ತಾರೆ ಅನ್ನೋ ಕುತೂಹಲ ಇದೆ. ಬನ್ನಿ ಹಾಗಾದ್ರೆ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರುತ್ತೆ ಅನ್ನೊದನ್ನ ನೋಡೋಣ.

ನಾಲ್ಕನೇ ಕ್ರಮಾಂಕಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಫಿಕ್ಸ್..!
ಟೀಂ ಇಂಡಿಯಾವನ್ನ ಕಳೆದ ಮೂರು ವರ್ಷದಿಂದ ಕಾಡಿದ ಅತಿ ದೊಡ್ಡ ಸಮಸ್ಯೆ ಎಂದ್ರೆ ಅದು ನಾಲ್ಕನೆ ಸ್ಲಾಟ್. ಕ್ಯಾಪ್ಟನ್ ಕೊಹ್ಲಿಯ ನಿದ್ದೆಗೆಡಿಸಿದ ಈ ಸ್ಲಾಟ್ ಇಡೀ ತಂಡದ ಮ್ಯಾನೇಜ್ಮೆಂಟ್ಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿತು. ಕಳೆದ ಮೂರು ವರ್ಷಗಳಿಂದ ಈ ಸ್ಲಾಟ್ನಲ್ಲಿ ಬರೋಬ್ಬರಿ ಹನ್ನೊಂದು ಬ್ಯಾಟ್ಸ್ಮನ್ಗಳು ಆಡಿದ್ದಾರೆ. ಆದರೆ ಒಬ್ಬ ಬ್ಯಾಟ್ಸ್ಮನ್ ಕೂಡ ಗಟ್ಟಿಯಾಗಿ ನಿಲ್ಲಲಿಲ್ಲ. ಇದೀಗ ವಿಶ್ವಕಪ್ನಲ್ಲಿ ಈ ಸ್ಲಾಟ್ ನಲ್ಲಿ ಆಡಲು ಕನ್ನಡಿಗ ಕೆ,ಎಲ್. ರಾಹುಲ್ ಮತ್ತು ಆಲ್ರೌಂಡರ್ ವಿಜಯ್ ಶಂಕರ್ ರೇಸ್ನಲ್ಲಿದ್ರು. ಇದೀಗ ಅಭ್ಯಾಸ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ರಾಹುಲ್ಗೆ ಅವಕಾಶ ಕೊಡುವ ಮೂಲಕ ವಿಶ್ವಕಪ್ನಲ್ಲಿ ರಾಹುಲ್ ನಂ.4ಗೆ ರಾಹುಲ್ ಫಿಕ್ಸ್ ಅನ್ನೊ ಸುಳಿವು ನೀಡಿದ್ದಾರೆ.

ಯಾವ ಸ್ಲಾಟ್ನಲ್ಲಿ ಆಡ್ತಾರೆ ಮಿಸ್ಟರ್ ಕೂಲ್..?
ಐಪಿಎಲ್ನಲ್ಲಿ ಧೋನಿ ಸೂಪರ್ ಫಾರ್ಮ್ಗೆ ಬಂದಿರೋದು ಟೀಮ್ ಇಂಡಿಯಾಕ್ಕೆ ಸಂತಸದ ಸುದ್ದಿ. ಅದ್ರೆ, ವರ್ಲ್ಡ್ ಕಪ್ನಲ್ಲಿ ಧೋನಿಗೆ ಯಾವ ಸ್ಥಾನದಲ್ಲಿ ಬ್ಯಾಟ್ ಬೀಸುತ್ತಾರೆ ಅನ್ನೋದೆ ಇಲ್ಲಿ ಚರ್ಚಿತಾ ವಿಚಾರವಾಗಿದೆ. ಇತ್ತಿಚೆಗೆ 5ನೇ ಸ್ಲಾಟ್ನಲ್ಲಿ ಧೋನಿ ಆಡುತ್ತಿದ್ದಾರೆ. ಆದ್ರೆ, ತನ್ನ ಕೆರಿಯರ್ ಆರಂಭದಿಂದಲೂ ಹೆಚ್ಚು ಧೋನಿ 6ನೇ ಕ್ರಮಾಂಕದಲ್ಲಿ ಆಡಿ ತಂಡದ ಮ್ಯಾಚ್ ಫಿನಿಷರ್ ಆಗಿದ್ದಾರೆ. ಇನ್ನೂ ಕೆಲ ದಿಗ್ಗಜರು ಧೋನಿಗೆ 4ನೇ ಸ್ಥಾನ ಬೆಸ್ಟ್ ಎಂದ್ರೆ, ಮತ್ತೊಬ್ಬರು 5ನೇ ಸ್ಥಾನದಲ್ಲಿ ಆಡಿದರೆ ತಂಡಕ್ಕೆ ಹೆಚ್ಚಿನ ಭದ್ರತೆ ಇರುತ್ತೆ. ಸ್ಲಾಗ್ ಓವರ್ಸ್ನಲ್ಲಿ ಹಾರ್ದಿಕ್ ಪಾಂಡ್ಯಾ- ಧೋನಿ ಸ್ಪೋಟಕ ಬ್ಯಾಟಿಂಗ್ ನಡೆಸಬಹುದೆಂಬುವುದು ಹಲವರ ಸಲಹೆ ಆಗಿದೆ.

ಆಲ್ರೌಂಡರ್ ಕೋಟಾದಡಿ ಯಾರಿಗೆ ಸಿಗುತ್ತಾ ಚಾನ್ಸ್..?
ವೇಗದ ಬೌಲರ್ ಆಲ್ರೌಂಡರ್ ಕೋಟಾದಡಿ ಹಾರ್ದಿಕ್ ಪಾಂಡ್ಯಾಗೆ ಸ್ಥಾನ ನೀಡೋದು ಪಕ್ಕ.. ಆದ್ರೆ, ಸ್ಪಿನ್ ಆಲ್ರೌಂಡರ್ಗಳಾದ ಕೇದಾರ್ ಜಾಧವ್, ರವೀಂದ್ರ ಜಡೇಜಾ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಐಪಿಎಲ್ನಲ್ಲಿ ಅಬ್ಬರಿಸಿರುವ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಸ್ಲಾಟ್ನಲ್ಲಿ ಆಡುವ ಫೇವರಿಟ್ ಆಟಗಾರರಾಗಿದ್ದಾರೆ.

ಮೂವರು ಪೇಸರ್ಸ್, ಒಬ್ಬ ಸ್ಪಿನ್ನರ್ ಪ್ರಯೋಗ..!
ಟೀಮ್ ಇಂಡಿಯಾ ಹೆಚ್ಚು ಇಬ್ಬರು ಸ್ಪಿನ್ನರ್ಸ್, ಇಬ್ಬರು ಪೇಸರ್ಗಳ ಆಯ್ಕೆ ಜಾಸ್ತಿ. ಆದ್ರೆ, ಇಂಗ್ಲೆಂಡ್ ಪಿಚ್ಗಳು ಫಾಸ್ಟ್ ಬೌಲರ್ಗಳಿಗೆ ಹೆಚ್ಚು ಸಹಕಸುವ ಕಾರಣ ಚಹಲ್ ಬದಲಿಗೆ ಏಕೈಕ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಆಗಿರ್ತಾರೆ. ಹಾರ್ದಿಕ್ ಪಾಂಡ್ಯಾ ಐದನೇ ಬೌಲರ್ ಆಗಿದ್ರೆ, ಬೂಮ್ರಾ, ಭುವನೇಶ್ವರ್, ಮೊಹಮ್ಮದ್ ಶಮಿ ಪ್ರಮುಖ ಬೌಲರ್ಗಳಾಗಿರುತ್ತಾರೆ. ಇನ್ನು ಇಂಗ್ಲೆಂಡ್ ಕಂಡೀಷನ್ನಲ್ಲಿ ಈ ಹಿಂದೆ ಮ್ಯಾಜಿಕ್ ಮಾಡಿದ್ದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಚಾನ್ಸ್ ಪಡೆಯುವ ಪೇವರಿಟ್ ಪ್ಲೇಯರ್ಸ್ ಆಗಿದ್ದಾರೆ.

ಇನ್ನೂ ಇಬ್ಬರು ಫೇಸರ್ಗಳನ್ನು ಮಾತ್ರ ಆಯ್ಕೆ ಮಾಡಿದ್ರೆ, 3ನೇ ಬೌಲರ್ ಆಗಿ ಹಾರ್ದಿಕ್ ಜವಾಬ್ದಾರಿ ನಿರ್ವಹಿಸಬೇಕು. ವಿಶ್ವಕಪ್ನಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಆಡುವ 11ರ ಬಳಗವನ್ನು ಆಯ್ಕೆ ಮಾಡುವುದು ಕೊಹ್ಲಿ ಮೇಲಿದೆ. ಹೀಗಾಗಿ ಬಲಿಷ್ಠ ಬೌಲಿಂಗ್ ಪಡೆಯನ್ನು ಆಯ್ಕೆ ಮಾಡುವುದು ವಿರಾಟ್ ಮೇಲಿದ್ದು ಯಾರಿಗೆ ಮಣೆಹಾಕ್ತಾರೆ ಕಾದು ನೋಡಬೇಕಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ