ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ-ಯುಕೆಜಿಗೆ ವಿರೋಧ: ಮೇ 30ರಿಂದ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ

ಬೆಂಗಳೂರು, ಮೇ 25- ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ-ಯುಕೆಜಿಯನ್ನ ತೆರೆಯುವುದನ್ನು ರದ್ದು ಮಾಡಿ ಅಂಗನವಾಡಿಯಲ್ಲೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಇದೇ 30 ರಂದು ಹೋರಾಟ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಪ್ರಧಾನಕಾರ್ಯದರ್ಶಿ ಎಂ. ಜಯಮ್ಮ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನೆಪದಲ್ಲಿ ಅಂಗನವಾಡಿಗಳನ್ನು ಮುಚ್ಚುವ ಹುನ್ನಾರ ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ- ಯುಕೆಜಿ ತೆರೆಯುವ ಬದಲು ಅಂಗನವಾಡಿ ಯಲ್ಲಿಯೇ ಇವುಗಳನ್ನು ಪ್ರಾರಂಭಿಸಿ ಇದರಿಂದ ಅಂಗನವಾಡಿ ಮುಚ್ಚುವ ಪರಿಸ್ಥಿತಿ ಬರಲ್ಲ ಹಾಗೂ ಅಂಗನವಾಡಿ ಕಾರ್ಯ ಕರ್ತರು ಮತ್ತು ಸಹಾಯಕರು ಕೆಲಸ ಕಳೆದುಕೋಳ್ಳತ್ತಾರೆ.

ಅದರಿಂದ ಇದನ್ನ ಮುಖ್ಯ ಮಂತ್ತಿಗಳು ಕೈಬಿಟ್ಟು ಅಂಗನವಾಡಿ ಯಲ್ಲೆ ಪ್ರಾರಂಬಿಸಿ ಅ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ಗಳನ್ನ ನಿಡಬೇಕು 1995 ರಿಂದ ಆಯ್ಕೆಯಾಗಿರುವ ಕಾರ್ಯಕರ್ತೆಯರು … ಪಾಸಗಿರುವವರು ಇರುವುದರಿಂದ ಅವರಿಗೆ ಎಲ.ಕೆ.ಜಿ, ಯುಕೆಜಿ ತರಭೇತಿಯನ್ನ ಕೊಟ್ಟರೆ ಅನುಭವದೊಂದಿಗೆ ಪಾಲನೆ ಮತ್ತು ಕಲಿಕೆ ನಡಯತ್ತದೆ ಎಂದು ತಿಳಿಸಿದರು.

ಖಾಸಗಿ ಕಾನ್ವೆಂಟ ಮತ್ತು ಶಾಲೆಗಳಿಗೆ ಕೊಡುವ ಅನುಮತಿ ಮತ್ತು ಅನುದಾನ ವನ್ನ ರದ್ದು ಮಾಡಿ ಅಂಗನವಾಡಿ ಕೇಂದ್ರಗಳನ್ನ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದರು.

ಅಂದು ನಮ್ಮ ಹೊರಟವನ್ನ ರೈಲ್ವೆ ನಿಲ್ದಾಣದಿಂದ ಆರಂಭಗೊಂಡು ಫ್ರೀಡಂ ಪಾರ್ಕï ಗೆ ತಲುಪಿ ಅಲ್ಲಿ ಹೊರಟ ನಡೆಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ