ಪುಲ್ವಾಮ: ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ ಝಾಕಿರ್ ಮೂಸಾ ಎಂಬಾತನನ್ನು ಪುಲ್ವಾಮಾದಲ್ಲಿನ ಟ್ರಾಲ್ನಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ಮಾಡಿ ಹತ್ಯೆ ಮಾಡಿವೆ.
ಅನ್ಸಾರ್ ಘಝ್ವಾತ್-ಉಲ್ ಹಿಂದ್ಗೆ ಸೇರಿದ ಅಲ್ ಖೈದಾದ ಕಮಾಂಡರ್ ಆಗಿದ್ದ ಝಾಕಿರ್ ಮೂಸಾನನ್ನು ಭದ್ರತಾಪಡೆಗಳು ಬಲಿಪಡೆದಿವೆ.
ಉಗ್ರ ಅಡಗಿರುವ ಖಚಿತ ಮಾಹಿತಿ ಮೇರೆಗೆ ಟ್ರಾಲ್ನ ದಾದ್ಸರ ಗ್ರಾಮದಲ್ಲಿ ಭದ್ರತಾಪಡೆ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹೊಡೆದುರುಳಿಸಿ, ಎಕೆ – 47 ರೈಫಲ್ ಮತ್ತು ರಾಕೆಟ್ ಲಾಂಚರ್ನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 18ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಪೊಲೀಸರು ಹತ್ಯೆ ಮಾಡಿದ ಬಳಿಕ ಆ ಪ್ರದೇಶದಲ್ಲಿ ಆತಂಕ ಮನೆಮಾಡಿತ್ತು.
ಇನ್ನು ಮಂಗಳವಾರವಷ್ಟೇ ಉಗ್ರರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಎಸ್ಬಿಐ ಬಳಿಯಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಪೋಸ್ಟ್ ಬಳಿ ಗ್ರೇನೇಡ್ ದಾಳಿ ನಡೆಸಿದ್ದರು. ದಾಳಿಯಲ್ಲಿ ಯಾವುದೇ ಸಾವು, ನೋವು ಸಂಭವಿಸಿರಲಿಲ್ಲ.
Zakir Musa, Kashmir’s Most Wanted Terrorist, Killed In Encounter