ಏಕದಿನ ಫಾರ್ಮೆಟ್​ನಲ್ಲಿ  ಕಿಂಗ್ ಯಾರು ? ನಾಲ್ಕು  ವರ್ಷದಲ್ಲಿ ಸಾಲಿಡ್  ಪರ್ಫಾಮನ್ಸ್ ಕೊಟ್ಟ ತಂಡ ಯಾವುದು ?

ಏಕದಿನ ವಿಶ್ವಕಪ್​ ಮಹಾಸಮರಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು  ವಿಶ್ವಕಪ್ ಮಹಾ ಸಂಗ್ರಾಮಕ್ಕೆ ಭರ್ಜರಿ ತಾಲೀಮು ನಡೆಸುತ್ತಿವೆ. ಎಲ್ಲರ ಕಣ್ಣು ವಿಶ್ವಕಪ್​ ಮೇಲೆಯೇ ಬಿದ್ದಿದೆ. ಆದ್ರೆ, 2015ರ ವಿಶ್ವಕಪ್​ ಬಳಿಕ ಏಕದಿನ ಫಾರ್ಮೆಟ್​ನಲ್ಲಿ  ಚೆನ್ನಾಗಿ ಆಡಿದವರ್ಯಾರು ? ಅತಿ ಹೆಚ್ಚು ಪಂದ್ಯಗಳನ್ನ ಗೆದ್ದಿರೋದು ಯಾರು ಅನ್ನೋದನ್ನ  ನೋಡೋಣ  ಬನ್ನಿ.

ಹಾಲಿ ಚಾಂಪಿಯನ್  ಆಸಿಸ್​ ಫ್ಲಾಪ್ ಶೋ..!

ಕ್ರಿಕೆಟ್​ ಅಂದ್ರೇನೇ ಹಾಗೇ ಇಂದಿನ ತಂಡ ನಾಳೆ ಜಿರೋ ಆಗುತ್ತೆ. ಜಿರೋ ಆಗಿದ್ದ ತಂಡ ಹೀರೋ ಆಗುತ್ತೆ ಅನ್ನೋದಕ್ಕೆ ಕ್ರಿಕೆಟ್​ ಇಸ್​ ದಿ ಬೆಸ್ಟ್​ ಎಕ್ಸಾಮ್​ಪಲ್.

ಒಂದು  ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್​​​ನಲ್ಲಿ ನಾನೆ ಎಂದು ಮೆರೆದಾಡಿದ್ದ ಮಂಡಿಯೂರಿದ್ದು ನೋಡಿದ್ದೇವೆ. ಕ್ರಿಕೆಟ್​ ಶಿಶು ಆಗಿದ್ದ ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳು ಇಂದು ಬಲಿಷ್ಠ ತಂಡಗಳಾಗಿ ಶಾಕ್  ಕೊಟ್ಟಿವೆ . ಬಲಿಷ್ಠವಾಗಿದ್ದ ಶ್ರೀಲಂಕಾ  ಮತ್ತು ವೆಸ್ಟ್ ಇಂಡೀಸ್  ಇಲಿಗಳಾಗಿದ್ದು ಕಣ್ಣ ಮುಂದಿಯೇ ಇದೆ.

ಟೀಮ್ ಇಂಡಿಯಾ, ಇಂಗ್ಲೆಂಡ್​ ನಡುವೆ ಭಾರೀ ಫೈಟ್

2015ರ ವಿಶ್ವಕಪ್​ ಬಳಿಕ ಇಂಗ್ಲೆಂಡ್​ ಹಾಗೂ ಟೀಮ್ ಇಂಡಿಯಾ ಪರಿಸ್ಥಿತಿ ಆಸಿಸ್​ನಂತೆ ಆಗಲಿಲ್ಲ.. 2015ರಲ್ಲಿ ಸೆಮಿ ಫೈನಲ್ಸ್​ನಿಂದ ಟೀಮ್ ಇಂಡಿಯಾ ಹೊರಬಿದ್ರು, ಟೀಮ್ ಇಂಡಿಯಾ ಮೇಲೆದ್ದು ನಿಂತಿದೆ. ವಿಶ್ವಕಪ್ ಬಳಿಕ ಹೆಚ್ಚು ಏಕದಿನ ಪಂದ್ಯಗಳನ್ನ ಗೆದ್ದ ಹಿರಿಮೆ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ಪಾಲಿಗೆ ಇದೆ.  ಟೀಂ  ಇಂಡಿಯಾ  ಅತಿ  ಹೆಚ್ಚು  ಪಂದ್ಯಗಳನ್ನ  ಗೆದ್ದ  ಸಾಧನೆ ಮಾಡಿದ್ರೆ  ಇಂಗ್ಲೆಂಡ್  ತಂಡ  ರನ್  ಹೊಳೆಯನ್ನ  ಹರಿಸಿದೆ. ಅದರಲ್ಲೂ  ಆಸ್ಟ್ರೇಲಿಯಾ  ವಿರುದ್ಧ  ತವರಿನಲ್ಲಿ  ನಡೆದ ಏಕದಿನ ಸರಣಿಯಲ್ಲಿ  481  ರನ್ ಬಾರಿಸಿ  ವಿಶ್ವ ದಾಖಲೆ  ಬರೆದಿತ್ತು. ಈ  ಎರಡು ತಂಡಗಳು  ಏಕದಿನ ಱಂಕಿಂಗ್ನಲ್ಲಿ  ಒಂದು  ಮತ್ತು  ಎರಡನೇ ಕ್ರಮಾಂಕವನ್ನ ಹಂಚಿಕೊಂಡಿವೆ.

2015ರ ವಿಶ್ವಕಪ್​ ಬಳಿಕ ಏಕದಿನದಲ್ಲಿ ತಂಡಗಳ ಸಾಧನೆ

2015ರ ವಿಶ್ವಕಪ್​ ಬಳಿಕ 87 ಪಂದ್ಯಗಳನ್ನು ಆಡಿದ ಇಂಗ್ಲೆಂಡ್​​ 57 ಪಂದ್ಯಗಳಲ್ಲಿ ಗೆಲುವನ ನಗೆ ಬೀರಿದ್ರೆ, 86 ಪಂದ್ಯಗಳನ್ನಾಡಿದ ಟೀಮ್ ಇಂಡಿಯಾ 56ರಲ್ಲಿ ಜಯ ಸಾಧಿಸಿದೆ. ಇನ್ನೂ3ನೇ ಸ್ಥಾನದಲ್ಲಿರುವ ಸೌತ್​ ಆಫ್ರಿಕಾ 74 ಪಂದ್ಯಗಳಲ್ಲಿ 47 ಪಂದ್ಯಗಳಲ್ಲಿ ವಿಜಯದ ಪತಾಕೆ ಹಾರಿಸಿದ್ರೆ, 76 ಪಂದ್ಯಗಳನ್ನಾಡಿದ ನ್ಯೂಜಿಲೆಂಡ್​, ಆಸ್ಟ್ರೇಲಿಯಾ ಕ್ರಮವಾಗಿ 43, 37 ಪಂದ್ಯಗಳನ್ನು ಗೆದ್ದು ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿವೆ.

2015ರ ವಿಶ್ವಕಪ್​ ಬಳಿಕ ತಂಡಗಳ ಸಾಧನೆ

ಇನ್ನೂ 6ನೇ ಸ್ಥಾನದಲ್ಲಿರುವ ಪಾಕಿಸ್ತಾನ 79 ಪಂದ್ಯಗಳ ಪೈಕಿ 35 ಪಂದ್ಯ ಗೆದ್ರೆ, 62 ಪೈಕಿ 34 ಪಂದ್ಯ ಗೆದ್ದ ಬಾಂಗ್ಲಾದೇಶ 7ನೇ ಸ್ಥಾನದಲ್ಲಿದೆ. ಕ್ರಿಕೆಟ್​ ಶಿಶಿ ಅಫ್ಘಾನಿಸ್ತಾನ 61 ಪೈಕಿ 33 ಪಂದ್ಯಗಳನ್ನು ಜಯಿಸಿದೆ. ಆದ್ರೆ, ಎರಡು ಬಾರಿ ವಿಶ್ವಕಪ್ ಗೆದ್ದ ಶ್ರೀಲಂಕಾ 84 ಪಂದ್ಯಗಳ ಪೈಕಿ ಗೆದ್ದಿದ್ದು ಕೇವಲ 23 ಪಂದ್ಯಗಳು ಮಾತ್ರ. ಇನ್ನು ವೆಸ್ಟ್​ ವಿಂಡೀಸ್​ 67 ಪಂದ್ಯಗಳ ಪೈಕಿ 19 ಪಂದ್ಯಗಳಲ್ಲಿ ಮಾತ್ರ ಜಯಿಸಿದೆ…

2015ರ ವಿಶ್ವಕಪ್​ ಬಳಿಕ ರನ್ ಮಳೆ ಹರಿಸಿದ ತಂಡಗಳು

ಕಳೆದ ನಾಲ್ಕು ವರ್ಷಗಳಿಂದ 87 ಪಂದ್ಯಗಳನ್ನು ಆಡಿದ ಇಂಗ್ಲೆಂಡ್  21,951 ರನ್​ಗಳನ್ನು ಹರಿಸಿದ್ರೆ,  86 ಪಂದ್ಯಗಳನ್ನಾಡಿದ ಟೀಮ್ ಇಂಡಿಯಾ 21,043 ರನ್ ಕಲೆಹಾಕುತ್ತೆ. ಸೌತ್​ ಆಫ್ರಿಕಾ 74 ಪಂದ್ಯಗಳಲ್ಲಿ 17,273 ರನ್ ಬಾರಿಸಿದ್ರೆ. ಪಾಕಿಸ್ತಾನ  18,620 ರನ್ ಕಲೆಹಾಕಿದೆ. 76 ಪಂದ್ಯಗಳನ್ನಾಡಿದ ನ್ಯೂಜಿಲೆಂಡ್​, ಆಸ್ಟ್ರೇಲಿಯಾ ಕ್ರಮವಾಗಿ 18,082, 18,343  ರನ್​ಗಳನ್ನ ಕಲೆಹಾಕಿದೆ. 62 ಪಂದ್ಯಗಳನ್ನಾಡಿದ ಬಾಂಗ್ಲಾದೇಶ 13,554 ರನ್, 67 ಪಂದ್ಯಗಳನ್ನಾಡಿದ ವೆಸ್ಟ್​ ವಿಂಡೀಸ್ 13,738  ರನ್, 84 ಪಂದ್ಯ ಆಡಿದ  ಶ್ರೀಲಂಕಾ 17,498 ದಾಖಲಿಸಿದ್ರೆ, 61 ಪಂದ್ಯಗಳನ್ನಾಡಿದ ಅಫ್ಘಾನಿಸ್ತಾನ  ಕೆಲೆಹಾಕಿದ್ದು 12,253 ರನ್ಗಳು ಮಾತ್ರ..

ವಿಕೆಟ್​ ಬೇಟೆ ಆಡೋದ್ರಲ್ಲಿ ಭಾರತೀಯ ಬೌಲರ್​ಗಳೇ ಮುಂದು..!

ಏಕದಿನ ಕ್ರಿಕೆಟ್​ನಲ್ಲಿ ಭಾರತೀಯ ಬೌಲರ್​​ಗಳ ಅಬ್ಬರಕ್ಕೆ ಎದುರಾಳಿ ಕಕ್ಕಬಿಕ್ಕಿಯಾಗಿದ್ದೆ ಹೆಚ್ಚು, ಏಕದಿನ ಕ್ರಿಕೆಟ್​ನಲ್ಲಿ ಯಾವ ತಂಡದ ಬೌಲರ್​ಗಳು ಮಾಡದ ಸಾಧನೆಯನ್ನ ಟೀಮ್ ಇಂಡಿಯಾ ಬೌಲರ್​ಗಳು ಮಾಡಿದ್ದಾರೆ. ಇನ್ನು ನಂತರದ ಸ್ಥಾನದಲ್ಲಿ ಕ್ರಿಕೆಟ್​ ಜನಕರು ಸ್ಥಾನ ಪಡೆದಿದ್ದಾರೆ..

ವಿಕೆಟ್​​ ಬೇಟೆಯಾಡಿದ ತಂಡಗಳು :86 ಪಂದ್ಯಗಳಿಂದ ಟೀಮ್ ಇಂಡಿಯಾ  629 ಬ್ಯಾಟ್ಸ್​​ಮನ್​​ಗಳನ್ನ ಬಲಿ ಪಡೆದಿದೆ.  87 ಪಂದ್ಯಗಳನ್ನಾಡಿದ ಇಂಗ್ಲೆಂಡ್  ಬೇಟೆಯಾಡಿದ್ದು 588 ಬ್ಯಾಟ್ಸ್​ಮನ್ಸ್​​ಗಳನ್ನಾ, . 76 ಪಂದ್ಯಗಳಿಂದ ಆಸ್ಟ್ರೇಲಿಯಾ, ನ್ಯೂಜಿಲೆಂಡ್​ ಕ್ರಮವಾಗಿ 558, 545 ವಿಕೆಟ್​​ಗಳನ್ನ ಉರುಳಿಸಿದೆ.  ಸೌತ್​ ಆಫ್ರಿಕಾ ಬೌಲರ್ಸ್​ ದಾಳಿಗೆ ವಿಕೆಟ್​  ಒಪ್ಪಿಸಿದ್ದು 533 ಬ್ಯಾಟ್ಸ್​​ಮನ್ಸ್​ಗಳನ್ನು, 79 ಪಂದ್ಯಗಳಿಂದ ಪಾಕಿಸ್ತಾನ ಬೌಲರ್ಸ್ 480 ವಿಕೆಟ್​ ಪಡೆದ್ರೆ, ಶ್ರೀಲಂಕಾ ಬೌಲರ್ಸ್​ 470 ವಿಕೆಟ್​ ಪಡಿದಿದ್ದಾರೆ. ಅಫ್ಘಾನಿಸ್ತಾನ 451, ಬಾಂಗ್ಲಾ ಟೈಗರ್ಸ್ 411 ವಿಕೆಟ್​ ಪಡೆದ್ರೆ. 67 ಪಂದ್ಯಗಳಳಿಂದ  ವೆಸ್ಟ್ ವಿಂಡೀಸ್​ ಬೌಲರ್ಸ್ ಕಬಳಿಸಿದ್ದು ಕೇವಲ 372 ವಿಕೆಟ್​ಗಳನ್ನು ಮಾತ್ರ..

2015ರ ವಿಶ್ವಕಪ್ ಬಳಿಕ ಕ್ರಿಕೆಟ್​ ಶಿಶುಗಳು ಎನಿಸಿಕೊಂಡ ತಂಡಗಳು ಬಲಿಷ್ಠ ತಂಡಗಳಿಗೆ ಸವಾಲೊಡ್ಡಬಲ್ಲ ಹಂತಕ್ಕೆ ಬೆಳೆದುನಿಂತಿವೆ. ಇನ್ನೂ ಕಳೆದ ವಿಶ್ವಕಪ್ ಬಳಿಕ  ನಾಕೌಟ್​ ಹಂತದಲ್ಲೇ ಹೊರ ಬಂದಿದ್ದ ಇಂಗ್ಲೆಂಡ್​​ ಮಾತ್ರ ಈ ಬಾರಿ ವಿಶ್ವ ಕ್ರಿಕೆಟ್​ ಆಳಬೇಕೆಂಬ ಛಲದೊಂದಿಗೆ ಕಣಕ್ಕಿಳಿಯುತ್ತಿದೆ. ಇದಕ್ಕೆ ಟೀಮ್ ಇಂಡಿಯಾ ಸಹ ಹೊರತಾಗಿಲ್ಲ.. ಈ ಅಂಕಿಅಂಶಗಳ ಲೆಕ್ಕಾಚಾರನೋಡಿದ್ರೆ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್​ ತಂಡಗಳೇ ವಿಶ್ವಕಪ್​ ಗೆಲ್ಲುವ ತಂಡಗಳಾಗಿವೆ.

ಆದ್ರೆ, ಇನ್ನು ಕೆಲ ತಂಡಗಳು ಪ್ರಬಲ ಪೈಪೋಟಿ ನೀಡುವ ತಂಡಗಳಾಗಿದ್ದು, ವಿಶ್ವಕಪ್​ ಎಂಬ ಚಂಚಲೆ ಯಾರಿಗೆ ಹೊಲಿಯುತ್ತಾಳೆ ಅನ್ನೊದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ