ವಿಶ್ವಕಪ್ ಮಹಾ ಯುದ್ದ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳ ಕಣ್ಣು ಈಗ ಆಂಗ್ಲರ ನಾಡಿನತ್ತ ನೆಟ್ಟಿದೆ. ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಜನಕರ ನಾಡು ಆಂಗ್ಲರನಾಡಲ್ಲಿ ನಡೆಯೊತ್ತಿರುವುದರಿಂದ ಆಂಗ್ಲರ ಪಾಲಿಗೆ ಪ್ರತಿಷ್ಠೆಯ ಟೂರ್ನಿಯಾಗಿದೆ.
ಚೊಚ್ಚಲ ವಿಶ್ವಕಪ್ ಗೆಲ್ಲಲು ಟೊಂಕ ಕಟ್ಟಿ ನಿಂತ ಆಂಗ್ಲರು
ಕ್ರಿಕೆಟ್ ಅನ್ನೋ ಮೂರಕ್ಷರ ಆಟವನ್ನ ಇಡೀ ವಿಶ್ವಕ್ಕೆ ಪರಿಚೆಯಿಸಿದ್ದು ಆಂಗ್ಲರು. ಆದರೆ ದುರಾದೃಷ್ಟವೋ ಅಥವ ಹಣೆಬರವೋ ಎನ್ನುವಂತೆ ಆಂಗ್ಲರು ಇದುವರೆಗೂ ಒಂದೇ ಒಂದು ಏಕದಿನ ವಿಶ್ವಕಪ್ ಗೆದ್ದಿಲ್ಲ. ಪ್ರತಿ ವಿಶ್ವಕಪ್ನಲ್ಲೂ ಇಂಗ್ಲೆಂಡ್ ತಂಡ ಟೂರ್ನಿಯಲ್ಲಿ ಚೋಕರ್ಸ್ಗಳಾಗಿ ಹಣೆಪಟ್ಟಿ ಪಡೆಯುತ್ತಾ ಬಂದಿದ್ದಾರೆ. ಈ ಬಾರಿ ವಿಶ್ವಕಪ್ ತವರಿನಲ್ಲಿ ನಡೆಯುತ್ತಿರೋದ್ರಿಂದ ಈಯಾನ್ ಮಾರ್ಗನ್ ಪಡೆ ಚೊಚ್ಚಲ ವಿಶ್ವಕಪ್ ಗೆಲ್ಲಲ್ಲೇಬೇಕೆಂದು ಟೊಂಕ ಕಟ್ಟಿ ನಿಂತಿದೆ.
ಜೊತೆಗೆ ಇತ್ತಿಚಿನ ವರ್ಷಗಳಲ್ಲಿ ನೀಡಿರುವ ಪರ್ಫಾಮನ್ಸ್ ಮತ್ತು ಱಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದಿರೋದು ಆಂಗ್ಲರಿಗೆ ಈ ವಿಶ್ವಕಪ್ ಗೆಲ್ಲಲು ಸ್ಪೂರ್ತಿಯಾಗಲಿದೆ.
ಹೊಸ ಜೆರ್ಸಿಯಲ್ಲಿ ಲಕ್ ಹುಡುಕಲು ಹೊರಟ ಆಂಗ್ಲರು
ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಪ್ರಭಲ ಸ್ಪರ್ಧಿಯಾಗಿರುವ ಇಂಗ್ಲೆಂಡ್ ತಂಡ 30 ವರ್ಷಗಳ ಹಿಂದೆ ತೊಟ್ಟಿದ್ದ ಜರ್ಸಿಯನ್ನು ಪುನರ್ ಆಯ್ಕೆ ಮಾಡಿಕೊಂಡು ವಿಶ್ವಯುದ್ದಕ್ಕೆ ಕಣಕ್ಕಿಯಲಿದೆ. ಈಗಾಗಲೇ ಜೆಸಿರ್ಯನ್ನ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ವಿಶ್ವಕಪ್ನ ಕಿಟ್ ಹೇಗಿದೆ ಎಂದು ಪ್ರಮುಖ ಆಟಗಾರರಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.
ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಮಾರ್ಗನ್ ಪಡೆ
ಇಂಗ್ಲೆಂಡ್ ತಂಡ 1992 ರಲ್ಲಿ ವಿಶ್ವಕಪ್ನಲ್ಲಿ ತೊಟ್ಟಿದ್ದ ಆಕಾಶ ನೀಲಿ ಬಣ್ಣದ ಜರ್ಸಿಯನ್ನು 2019 ವಿಶ್ವಕಪ್ನಲ್ಲಿ ತೊಟ್ಟು ಆಡಲು ನಿರ್ಧರಿಸಿದ್ದಾರೆ, ಏಕೆಂದರೆ 1992 ವಿಶ್ವಕಪ್ನಲ್ಲಿ ಆಂಗ್ಲಪಡೆ ಫೈನಲ್ ಪ್ರವೇಶಿಸಿತ್ತು. ಆಂದು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿತ್ತು. ಆದರೆ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿ ರನ್ನರ್ ಆಪ್ಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಹಳೆ ಜೆರ್ಸಿಯಲ್ಲಿ ಆಂಗ್ಲರು ಮತ್ತೆ ಲಕ್ ಹುಡುಕಿಕೊಂಡು ಹೊರಟಿದ್ದಾರೆ. ಕೆಲವು ತಿಂಗಳ ಹಿಂದೆ ಆಸ್ಟ್ರೇಲಿಯಾ ತಂಡ ಕೂಡ ತನ್ನ ಹಳೆ ಜೆರ್ಸಿಯ ಮೊರೆ ಹೋಗಿ ಅದೃಷ್ಟವನ್ನ ಪರೀಕ್ಷೆ ಮಾಡಿಕೊಳ್ಳುತ್ತಿದೆ. ಇದೀಗ ಈ ಸಾಲಿಗೆ ಇಂಗ್ಲೆಂಡ್ ಕೂಡ ಸೇರಿದೆ. ಇಂಗ್ಲೆಂಡ್ ಮೇ 30ರಂದು 2019ರ ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ದ. ಆಫ್ರಿಕಾವನ್ನ ಎದುರಿಸಲಿದೆ.
ಒಟ್ಟಾರೆ ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ಆಂಗ್ಲರಿಗೆ ಹೊಸ ಜೆರ್ಸಿ ಲಕ್ ತಂದುಕೊಡುತ್ತಾ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.