ಬೆಂಗಳೂರು, ಮೇ 24-ದೇಶಾದ್ಯಂತ ಬೀಸಿದ ಮೋದಿ ಅಲೆಯಲ್ಲಿಎಲ್ಲಾ ಪಕ್ಷಗಳು ಕೊಚ್ಚಿ ಹೋಗಿದ್ದು, ಕರ್ನಾಟಕದಲ್ಲಿಇತಿಹಾಸದಲ್ಲೇ ಬಿಜೆಪಿ ದಾಖಲಾರ್ಹವಾದಷ್ಟು ಮತ ಗಳಿಕೆಯನ್ನು ಮಾಡಿದೆ.
ಕಳೆದ 2014ರ ಲೋಕಸಭಾಚುನಾವಣೆಯಲ್ಲಿ ಮೋದಿ ಅಲೆಯಿಂದಾಗಿ 2009ರ ಚುನಾವಣೆಗಿಂತಲೂ ಶೇ.2.2ರಷ್ಟು ಹೆಚ್ಚು ಮತ ಗಳಿಸಿದ್ದ ಬಿಜೆಪಿ ಈ ಬಾರಿ ಮೋದಿ ಸುನಾಮಿಯಿಂದಾಗಿ ಈ ಹಿಂದಿನ ವರ್ಷಕ್ಕಿಂತಲೂ ಶೇ.8.01ರಷ್ಟು ಹೆಚ್ಚು ಮತ ಗಳಿಸಿ ಕರ್ನಾಟಕದಲ್ಲಿತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ.
ಚುನಾವಣಾ ಪೂರ್ವ ಮೈತ್ರಿಮಾಡಿಕೊಂಡುಇನ್ನಿಲ್ಲದಕಸರತ್ತು ನಡೆಸಿದ ದೋಸ್ತಿಗಳು ಸ್ಥಾನ ಗಳಿಕೆಯಲ್ಲಷ್ಟೇ ಅಲ್ಲ, ಮತ ಗಳಿಕೆಯಲ್ಲೂ ನೆಲಕಚ್ಚಿದ್ದಾರೆ.
ರಾಜಕೀಯ ಲೆಕ್ಕಾಚಾರದಲ್ಲಿಕಾಂಗ್ರೆಸ್-ಜೆಡಿಎಸ್ಎರಡೂ ಪಕ್ಷಗಳು ಒಂದಾಗಿದ್ದರಿಂದ ಹಿಂದಿನ ಲೆಕ್ಕಾಚಾರದ ಪ್ರಕಾರ ಈ ಬಾರಿಚುನಾವಣೆಯಲ್ಲಿ ಸರಾಸರಿ ಶೇ.52ರಷ್ಟು ಮತ ಗಳಿಸಬೇಕಿತ್ತು. ಆದರೆ ದೋಸ್ತಿ ಪಕ್ಷಗಳು ಒಟ್ಟು ಶೇ.41.52ರಷ್ಟು ಮತ ಗಳಿಸಿವೆ. ಬಿಜೆಪಿಯೊಂದೇ ಶೇ.51.38ರಷ್ಟು ಮತ ಗಳಿಸಿದೆ.
ಪ್ರಸಕ್ತಚುನಾವಣೆಯಲ್ಲಿಕಾಂಗ್ರೆಸ್ ಶೇ.31.88ರಷ್ಟು, ಜೆಡಿಎಸ್ ಶೇ.9.67, ಬಿಜೆಪಿ ಶೇ.51.38, ಬಿಎಸ್ಪಿ ಶೇ.1.17, ಸಿಪಿಐ, ಸಿಪಿಎಂ ಎರಡೂ ಸೇರಿ ಶೇ.1.10, ನೋಟಾ ಶೇ.0.71, ಇತರೆ ಶೇ.5.04ರಷ್ಟು ಮತ ಗಳಿಕೆಯಾಗಿದೆ.
ಬಿಜೆಪಿ ಸ್ಥಾನ ಗಳಿಕೆಯಲ್ಲಂತೂ ಹಿಂದಿನ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ 25 ಕ್ಷೇತ್ರಗಳಲ್ಲಿ ಗೆದ್ದಿದೆ.ಕಾಂಗ್ರೆಸ್-ಜೆಡಿಎಸ್ತಲಾಒಂದರಲ್ಲಿಗೆದ್ದರೆ, ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರಅಭ್ಯರ್ಥಿ ಸುಮಲತಾಗೆದ್ದಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದಾಗಲೂ ಈ ರೀತಿಯ ಹೀನಾಯ ಸ್ಥಿತಿ ಎಂದೂ ಬಂದಿರಲಿಲ್ಲ. ಎರಡೂ ಪಕ್ಷಗಳು ತಮ್ಮ ಸಾಮಥ್ರ್ಯದನುಸಾರ ಮತ ಗಳಿಕೆ ಮಾಡಿಕೊಳ್ಳುತ್ತಿದ್ದವು. ಕಾಂಗ್ರೆಸ್ ಮತ ಗಳಿಕೆ ಹೆಚ್ಚಿದ್ದರೂ, ಸ್ಥಾನ ಗಳಿಕೆಯಲ್ಲಿ ಹಿನ್ನಡೆಅನುಭವಿಸುತ್ತಿತ್ತು.ಈ ಬಾರಿ ಸ್ಥಾನ ಗಳಿಕೆ ಮತ್ತು ಮತ ಗಳಿಕೆ ಎರಡರಲ್ಲೂಕಾಂಗ್ರೆಸ್ ಪಲ್ಟಿ ಹೊಡೆದಿದೆ.
1999 ಲೋಕಸಭೆಚುನಾವಣೆ
ಪಕ್ಷ ಶೇ.ಮತಗಳಿಕೆ ಗಳಿಸಿದಮತಗಳು ಗೆದ್ದಸ್ಥಾನಗಳು
ಬಿಜೆಪಿ 27.19 60,77,020 7
ಕಾಂಗ್ರೆಸ್ 45.41 1,01,50,765 18
ಜೆಡಿಎಸ್ 10.85 24,25,538 0
ಜೆಡಿಯು 13.28 29,67,576 3
2004 ಲೋಕಸಭೆಚುನಾವಣೆ
ಪಕ್ಷ ಶೇ.ಮತಗಳಿಕೆ ಗಳಿಸಿದಮತಗಳು ಗೆದ್ದಸ್ಥಾನಗಳು
ಬಿಜೆಪಿ 34.77 87,32,783 18
ಕಾಂಗ್ರೆಸ್ 36.82 92,47,605 08
ಜೆಡಿಎಸ್ 20.45 51,35,205 02
2009 ಲೋಕಸಭೆಚುನಾವಣೆ
ಪಕ್ಷ ಶೇ.ಮತಗಳಿಕೆ ಗಳಿಸಿದಮತಗಳು ಗೆದ್ದಸ್ಥಾನಗಳು
ಬಿಜೆಪಿ 41.63 1,02,28,790 19
ಕಾಂಗ್ರೆಸ್ 37.65 92,50,984 06
ಜೆಡಿಎಸ್ 13.57 33,35,530 03
2014 ಲೋಕಸಭೆಚುನಾವಣೆ
ಪಕ್ಷ ಶೇ.ಮತಗಳಿಕೆ ಗಳಿಸಿದ ಮತಗಳು ಗೆದ್ದಸ್ಥಾನಗಳು
ಬಿಜೆಪಿ 43.37 1,33,50,285 17
ಕಾಂಗ್ರೆಸ್ 41.15 1,26,66,5300 9
ಜೆಡಿಎಸ್ 11.07 34,06,4650 2
2019 ಲೋಕಸಭೆಚುನಾವಣೆ
ಪಕ್ಷ ಶೇ.ಮತಗಳಿಕೆ ಗಳಿಸಿದ ಮತಗಳು ಗೆದ್ದಸ್ಥಾನಗಳು
ಬಿಜೆಪಿ 51.38 1,80,53,454 25
ಕಾಂಗ್ರೆಸ್ 31.88 1,12,03,016 01
ಜೆಡಿಎಸ್ 9.67 33,97,229 01
ಇತರೆ 5.04 17,71,566 01