ಭಾರೀಕುತೂಹಲ ಕೆರಳಿಸಿದ ನೋಟಾ ಮತಗಳು

ಬೆಂಗಳೂರು, ಮೇ 24-ನಿನ್ನೆ ಪ್ರಕಟಗೊಂಡ ಲೋಕಸಭಾಚುನಾವಣೆಯ ಫಲಿತಾಂಶದಲ್ಲಿರಾಜ್ಯದ 28 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತದಲ್ಲಿ ನೋಟಾಕೂಡ ಭಾರೀಕುತೂಹಲ ಕೆರಳಿಸಿದೆ.

ಕೆಲವು ಕಡೆ ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗಳಿಗಿಂತ ನೋಟಾ ಮತಗಳೇ ಹೆಚ್ಚಾಗಿದ್ದು, ಪ್ರಜ್ಞಾವಂತ ಮತದಾರರುತೀರ್ಪು ನೀಡುವಾಗಯೋಚನಾ ಮನೋಭಾವಏನೆಂಬುದುಕಂಡು ಬಂದಿದೆ.

ಕ್ಷೇತ್ರವಾರು ನೋಟಾ ಹಾಗೂ ವಿವರ ಕೆಳಕಂಡಂತಿದೆ:
ಕ್ಷೇತ್ರ ಅಭ್ಯರ್ಥಿಗಳ ಸಂಖ್ಯೆ ನೋಟಾ
ಬಾಗಲಕೋಟೆ 14 11,138
ಬೆಂಗಳೂರು ಕೇಂದ್ರ 22 10,736
ಬೆಂಗಳೂರು ಉತ್ತರ 31 11617
ಬೆಂಗಳೂರು ಗ್ರಾಮಾಂತರ 15 12,442
ಬೆಂಗಳೂರು ದಕ್ಷಿಣ 25 9917
ಬೆಳಗಾವಿ 57 1623
ಬಳ್ಳಾರಿ 11 9016
ಬೀದರ್ 22 1946
ವಿಜಯಪುರ 12 12280
ಚಾಮರಾಜನಗರ 10 12583
ಚಿಕ್ಕಬಳ್ಳಾಪುರ 15 8015
ಚಿಕ್ಕೋಡಿ 11 10341
ಚಿತ್ರದುರ್ಗ 19 4348
ದಕ್ಷಿಣಕನ್ನಡ 13 7375
ದಾವಣಗೆರೆ 25 3091
ಧಾರವಾಡ 19 3503
ಕಲಬುರಗಿ 12 10437
ಹಾಸನ 06 11641
ಹಾವೇರಿ 10 7402
ಕೋಲಾರ 14 13873
ಕೊಪ್ಪಳ 14 10800
ಮಂಡ್ಯ 22 3500
ಮೈಸೂರು 22 5077
ರಾಯಚೂರು 05 13422
ಶಿವಮೊಗ್ಗ 12 6862
ತುಮಕೂರು 15 10285
ಚಿಕ್ಕಮಗಳೂರು 12 7493
ಉತ್ತರಕನ್ನಡ 13 15997

ಒಟ್ಟು 276760 ನೋಟಾಮತಗಳು ಚಲಾವಣೆಯಾಗಿದ್ದು, ಅಭ್ಯರ್ಥಿಗಳು ಪಡೆದ ಮತಗಳಲ್ಲಿ ಶೇ.0.71ರಷ್ಟಿದೆ.

ಚಾಮರಾಜನಗರದಲ್ಲಿಕಾಂಗ್ರೆಸ್‍ಅಭ್ಯರ್ಥಿಧೃವನಾರಾಯಣ್‍ಅವರು 1806 ಮತಗಳಿಂದ ಸೋಲು ಕಂಡಿದ್ದಾರೆ. ಇಲ್ಲಿ ನೋಟಾಚಲಾವಣೆಯಾಗಿರುವುದು 12583.

ಇನ್ನು ಹಲವು ವಿಶೇಷತೆಯೆಂದರೆಚುನಾವಣಾಕರ್ತವ್ಯದಲ್ಲಿದ್ದತೊಡಗುವ ಸಿಬ್ಬಂದಿಗೆ ನೀಡುವ ಅಂಚೆ ಮತದಾನ ಹಕ್ಕಿನಲ್ಲಿ ಕೆಲವು ಕ್ಷೇತ್ರಗಳಲ್ಲಿ ನೋಟಾ ಮತಗಳು ಚಲಾವಣೆಯಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ