ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಎರಡೂ ಚುನಾವಣೆಗಳ ಫಲಿತಾಂಶದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಭಾರೀ ಮುಖಭಂಗ ಉಂಟಾಗಿದೆ.
ಜಗಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಾರ್ಟಿ ಲೋಕಸಭೆಯ ಎಲ್ಲ ಹತ್ತು ಕ್ಷೇತ್ರಗಳಲ್ಲೂ ಭರ್ಜರಿ ಮುನ್ನಡೆ ಸಾಧಿಸಿದ್ದು ಗೆಲುವು ಖಚಿತವಾಗಿದೆ. ಹಾಗೇ ವಿಧಾನಸಭೆ ಚುನಾವಣೆಯ ಒಟ್ಟು 175 ಸೀಟುಗಳಲ್ಲಿ 147 ಕ್ಷೇತ್ರವನ್ನು ವೈಎಸ್ಆರ್ಪಿ ಬಾಚಿಕೊಂಡಿದೆ. ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾದಾಗಿನಿಂದಲೂ ಆಂಧ್ರಪ್ರದೇಶ ಚಂದ್ರಬಾಬು ನಾಯ್ಡು ಅವರ ಆಡಳಿತದಲ್ಲಿಯೇ ಇತ್ತು. ಈಗಿನ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರವೂ ಟಿಡಿಪಿ ಪಾಲಿಗೆ ಸಿಗಲಿಲ್ಲ. ಹಾಗೇ ಕಳೆದ ಬಾರಿಗಿಂತ 26 ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಂಡು ತೀವ್ರ ಮುಖಭಂಗಕ್ಕೆ ಒಳಗಾಗಿದ್ದು, ಇಂದು ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ಚಂದ್ರಬಾಬು ನಾಯ್ಡು ರಾಜೀನಾಮೆ ನೀಡುವ ಸಾಧ್ಯತೆ ಇದೆ.
N Chandrababu Naidu’s TDP loses big in Andhra Pradesh elections; YSR congress win