ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಪಕ್ಷದ ಹಿರಿಯ ಮುತ್ಸದ್ದಿ ಲಾಲ್ ಕೃಷ್ಣ ಅಡ್ವಾಣಿ ಶುಭ ಹಾರೈಸಿದ್ದಾರೆ.
ಬಿಜೆಪಿಯನ್ನು ಈ ಮಹಾನ್ ದಿಗ್ವಿಜಯದತ್ತ ಕೊಂಡೊಯ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳೆಂದು ಶುಭ ಕೋರಿದ್ದಾರೆ.
ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನತ್ತ ಬಿಜೆಪಿಯನ್ನು ಮುನ್ನಡೆಸಿದ ನರೇಂದ್ರಭಾಯಿ ಮೋದಿಯವರಿಗೆ ಹೃದಯಪೂರ್ವಕ ಅಭಿನಂದನೆಗಳು. ಬಿಜೆಪಿ ಅಧ್ಯಕ್ಷರಾಗಿ ಅಮಿತ್ ಶಾ ಹಾಗೂ ಪಕ್ಷದ ಪ್ರತಿ ಕಾರ್ಯಕರ್ತರೂ ಮತದಾರರನ್ನು ಸೆಳೆಯಲು ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದಾರೆ.
“ಭಾರತದಂತಹಾ ದೊಡ್ಡ ಹಾಗೂ ವೈವಿಧ್ಯಮಯವಾದ ದೇಶದಲ್ಲಿ, ಚುನಾವಣಾ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದಕ್ಕಾಗಿ ಮತದಾರರಿಗೆ ಹಾಗೂ ನಮ್ಮ ಎಲ್ಲಾ ಚುನಾವಣಾ ಆಯೋಜಕರಿಗೆ ನನ್ನ ಅಭಿನಂದನೆಗಳು. ಭವಿಷ್ಯದಲ್ಲಿ ಈ ಮಹಾನ್ ರಾಷ್ಟ್ರವು ಅತ್ಯಂತ ಉಜ್ವಲ ಭವಿಷ್ಯವನ್ನು ಕಾಣುವಂತಾಗಲೆಂದು ನಾನು ಹಾರೈಸುತ್ತೇನೆ” ಅಡ್ವಾಣಿ ಎ.ಎನ್.ಐ. ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.