ಬೀದರ್: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ವಿಜಯಕುಮಾರ ಕೌಡ್ಯಾಳ್ ವಿರುದ್ಧ ವಿಜಯಸಿಂಗ್ ಬೆಂಬಲಿಗರು ಮಂಗಳವಾರ ಔರಾದ್ ತಾಲ್ಲೂಕಿನ ಸಂತಪೂರ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಜಯಸಿಂಗ್ ಬೆಂಬಲಿಗರು ಕೆಲ ಕಾಲ ಪ್ರತಿಭಟನೆ ನಡೆಸಿ ವಿಜಯಕುಮಾರ ಕೌಡ್ಯಾಳ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಸಿಂಗ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತರು. ಪಕ್ಷದ ಸಂಘಟನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಔರಾದ್ ನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯಕುಮಾರ ಕೌಡ್ಯಾಳ್ ಪರ ವಾಗಿ ಶ್ರಮಿಸಿ ಸುಮಾರು 64 ಸಾವಿರ ಮತಗಳನ್ನು ಬರುವಂತೆ ಮಾಡಿದರು. ಕೌಡ್ಯಾಳ್ ಗೆ ಅಧಿಕ ಮತಗಳು ಹಕುವಂತೆ ಮಾಡಿದ್ದ ಶ್ರೇಯಸ್ಸು ವಿಜಯಸಿಂಗ್ ಅವರಿಗೆ ಸಲ್ಲುತ್ತದೆ ಆದರೆ ಇದೀಗ ಕೌಡ್ಯಾಳ್ ಅವರು ವಿಜಯಸಿಂಗ್ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿ ಇಲ್ಲ ಎಂದು ತಿಳಿಸಿದ್ದಾರೆ.
ಕೂಡಲೇ ವಿಜಯಕುಮಾರ ಕೌಡ್ಯಾಳ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಸಿದ್ದಯ್ಯ ಸ್ವಾಮಿ, ಅನಿಲ, ಫೀರೋಜ್ ಖಾನ್, ಅಮ್ಜದ್ ಪಟೇಲ್, ಗುಂಡು ಇತರರಿದ್ದರು.