ಬೀದರ್: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರ ಮೇಲೆ ಮುಖಂಡ ವಿಜಯಕುಮಾರ ಕೌಡ್ಯಳ್ ಅವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಮತ್ತು ತೀರಾ ಖಂಡನೀಯ ಎಂದು ಔರಾದ್ನ ಕಾಂಗ್ರೆಸ್ ಯುವ ಮುಖಂಡ ಸುಧಾಕಾರ ಕೊಳ್ಳುರ್ ತಿಳಿಸಿದ್ದಾರೆ.
ವಿಜಯಸಿಂಗ್ ಅವರು ಯಾವ ಜಾತಿ ವಿಷಯದಲ್ಲಿ ಭೇದ ಭಾವ ಮಾಡಿದವರಲ್ಲ ಎಲ್ಲ ಸಮುದಾಯವನ್ನು ಸಮಾನವಾಗಿ ನೋಡುವ ನಾಯಕರಾಗಿದ್ದಾರೆ. ಔರಾದ್ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದರು ಸಹ ವಿಜಯಸಿಂಗ್ ಅವರು ಇಲ್ಲಿ ಯಾವುದೇ ಆಸೆ ಇಲ್ಲದೆ ನಿಸ್ರ್ವಾಥದಿಂದ ಪಕ್ಷಾ ಸಂಘಟನೆ ಬಲಿಷ್ಠವಾಗಿಸುತ್ತಿದ್ದಾರೆ. ಇಂಥವರ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ತಮ್ಮ ಸ್ವಂತ ಒಡಹುಟ್ಟಿದ ತಮ್ಮ ಡಾ. ಅಜಯಸಿಂಗ್ ಅವರು ಜೇವರ್ಗಿ ಕ್ಷೇತ್ರದಿಂದ ಚುನಾವಣೆ ಸ್ವರ್ಧಿಸಿದರು. ಅವರ ಪ್ರಚಾರಕ್ಕೆ ವಿಜಯಸಿಂಗ್ ಒಂದೇ ಒಂದು ದಿನವನ್ನು ಹೋಗದೇ ಔರಾದ್ ಕ್ಷೇತ್ರದ ಅಭ್ಯರ್ಥಿಯಾದ ವಿಜಯಕುಮಾರ ಕೌಡ್ಯಳ್ ಅವರ ಪರ ಹಗಲು ರಾತ್ರಿ ಪ್ರಚಾರ ಮಾಡಿದ್ದಾರೆ. ಆದರೆ ಇದೀಗ ವಿಜಯಸಿಂಗ್ ವಿರುದ್ಧ ಕೌಡ್ಯಾಳ್ ಆರೋಪ ಮಾಡುತ್ತಿದ್ದಾರೆ. ವಿಜಯಸಿಂಗ್ ದಲಿತ ವಿರೋಧಿ ಎಂಬುವುದು ಸುಳ್ಳು. ಎಂದಿಗೂ ಅವರು ದಲಿತರ ವಿರುದ್ಧ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷಾದಲ್ಲಿ ಸಣ್ಣ ಮಟ್ಟದ ಭಿನ್ನಮತವನ್ನು ವಿಜಯಕುಮಾರ ಕೌಡ್ಯಲ್ ಬೀದಿ ರಂಪಾಟ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನು ಪಕ್ಷಾದ ವರಿಷ್ಠರಿಗೆ ತಿಳಿಸಿ ಮುಂದಿನ ಪಕ್ಷಾ ಸಂಘಟನೆ ಮೇಲೆ ಆಗುವ ಪರಿಣಾಮವನ್ನು ವಿವರಿಸುತ್ತೇವೆ. ವಿಜಯಸಿಂಗ್ ಅವರ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ವಿಜಯಕುಮಾರ ಕೌಡ್ಯಾಳ್ ಪಕ್ಷದ ಸಂಘಟನೆಹತ್ತ ಚಿತ್ತ ಹರಿಸಿ ಎಂದು ಸಲಹೆ ನೀಡಿದ್ದಾರೆ.