ಮಂಡ್ಯ, ಮೇ 19-ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ಬಲಮುರಿ ಕಾವೇರಿ ನದಿ ತಾಣದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತನನ್ನು ಹಾಸನ ಜಿಲ್ಲೆ, ಬೇಲೂರಿನ ಮೌಂಟ್ ಕಾರ್ಮೆಲ್ ಶಾಲೆಯ ಹೇಮಂತ್ (16) ಎಂದು ಗುರುತಿಸಲಾಗಿದೆ.
ನಿನ್ನೆ ಬೆಳಗ್ಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದರು. ಎಲ್ಲರೂ ಸಂಭ್ರಮದಿಂದ ನಲಿದು, ಸಂಜೆ ವಾಪಸ್ಸಾಗುವ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ನೀರಿನಲ್ಲಿ ಆಟವಾಡುತ್ತಿದ್ದಾಗ ಈ ವೇಳೆ ಹೇಮಂತ್ ನೀರಿನಲ್ಲಿ ಮುಳುಗಿದ್ದಾನೆ.
ಆತನ ರಕ್ಷಣೆಗೆ ಎಲ್ಲರೂ ಕೂಗಿಕೊಂಡರಾದರೂ ಕತ್ತಲಾದ ಕಾರಣ ಪ್ರಯೋಜನವಾಗಲಿಲ್ಲ.
ಇಂದು ಬೆಳಗ್ಗೆ ಆತನ ಶವ ಸಿಕ್ಕಿದ್ದು, ವಿದ್ಯಾರ್ಥಿಗಳಲ್ಲಿ ದುಃಖ ಮಡುಗಟ್ಟಿದೆ. ಸ್ಥಳಕ್ಕೆ ಪೆÇಲೀಸರು ಧಾವಿಸಿ ಪರಿಶೀಲನೆ ಕೈಗೊಂಡಿದ್ದಾರೆ.