ಕಾಂಗ್ರೆಸ್‌ಗೆ ಬೆಂಬಲ ಮುಂದುವರಿಕೆ : ತಿರುಪತಿಯಲ್ಲಿ ಎಚ್‌ಡಿ ದೇವೇಗೌಡ

ತಿರುಮಲ : ಕಾಂಗ್ರೆಸ್‌ ಪಕ್ಷಕ್ಕೆ ನೀಡಿದ ಬೆಂಬಲವನ್ನುಲೋಕಸಭಾ ಚುನಾವಣೆಯ ಫ‌ಲಿತಾಂಶ ಪ್ರಕಟವಾದ ನಂತರವೂ ಮುಂದುವರಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪುನರುಚ್ಛರಿಸಿದ್ದಾರೆ.

ತಿರುಪತಿ ದೇವಾಲಯಲ್ಲಿ ಕುಟುಂಬ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಈ ಹೇಳಿಕೆ ನೀಡಿದ್ದಾರೆ.

ನಾವು ಕಾಂಗ್ರೆಸ್‌ನೊಂದಿಗೆಇದ್ದೇವೆ. ಇದಕ್ಕಿಂತ ಹೆಚ್ಚು ನಾನೇನು ಹೇಳುವುದಿಲ್ಲ. ಮೆ 23 ರಂದು ಫ‌ಲಿತಾಂಶ ಬರಲಿದೆ. ಮುಂದೆ ಏನಾಗುತ್ತದೆ ಎನ್ನುವ ಸ್ಪಷ್ಟ ಚಿತ್ರಣ ದೇಶದ ಜನತೆಗೆ ದೊರೆಯುತ್ತದೆ ಎಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾತನಾಡಿ , ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ರಾಜ್ಯದಲ್ಲಿ 18 ರಿಂದ 19 ಸ್ಥಾನಗಳನ್ನುಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ