ಮತ್ತೊಂದು ವಿವಾದ ಸೃಷ್ಟಿಸಿದ ನಟ, ರಾಜಕಾರಣಿ ಕಮಲ್ ಹಾಸನ್

ನವದೆಹಲಿ: ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದು ಎಂದು ಹೇಳುವ ಮೂಲಕ ವಿವಾದ ಸೃಷ್ಟಸಿದ್ದ ನಟ, ಮಕ್ಕಳ್​ ನೀದಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್​ಹಾಸನ್​ ಈಗ ಇನ್ನೊಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ್ದಾರೆ.

ಹಿಂದು ಎನ್ನುವ ಶಬ್ದದ ಮೂಲ ಭಾರತದ್ದಲ್ಲ. ಅದು ವಿದೇಶಿಯರು ಕೊಟ್ಟಿದ್ದು. ಕ್ರಿಸ್ತ ಪೂರ್ವದಲ್ಲಿದ್ದ ದಕ್ಷಿಣ ಭಾರತದ ಶಿವ, ವೈಷ್ಣವ ಆರಾಧಕ ಕವಿ ಸಂತರಾದ ನಯನ್ಮಾರರು, ಆಳ್ವಾರರು ಹಿಂದುಗಳ ಬಗ್ಗೆ ಒಂದೇ ಒಂದು ವಾಕ್ಯ ಹೇಳಿದ ದಾಖಲೆಯಿಲ್ಲ ಎಂದು ತಮಿಳು ಪೋಸ್ಟ್​ ಹಾಕಿ ಟ್ವೀಟ್​ ಮಾಡಿದ್ದಾರೆ.

ನಮಗೆ ಹಿಂದುಗಳೆಂದು ಕರೆದಿದ್ದು ಮೊಘಲರು ಹಾಗೂ ಅವರಂತಹ ವಿದೇಶೀ ಆಡಳಿತಗಾರರಿಂದ. ನಂತರ ಈ ಹೊಸ ಶಬ್ದವನ್ನು ಬ್ರಿಟಿಷರೂ ದೃಢಪಡಿಸಿಕೊಂಡರು. ಹೀಗೇ ಯಾರೋ ನಮ್ಮವರಲ್ಲದವರು, ನಂಬಿಕೆಗೆ ಯೋಗ್ಯರಲ್ಲದವರು, ಹೆಸರೇ ಗೊತ್ತಿಲ್ಲದವರು ಏನನ್ನಾದರೂ ಕೊಟ್ಟರೆ ಅದನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

There was no word as ‘Hindu’ before Mughals, it’s not an Indian word, claims Kamal Haasan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ