ಪ್ರಧಾನಿ ಪ್ರಚಾರ: 1.5 ಲಕ್ಷ ಕಿಲೋಮೀಟರ್ ವಾಯುಯಾನ, 142 ರ‍್ಯಾಲಿ

ನವದೆಹಲಿ: ಲೋಕಸಭಾ ಚುನಾವಣೆ ಪ್ರಚಾರ  ಹಿನ್ನೆಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ 1.5 ಲಕ್ಷ ಕಿಲೋ ಮೀಟರ್ ವಾಯುಯಾನಮಾಡಿದ್ದು, 142 ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ಇಂದು  ಹೇಳಿದ್ದಾರೆ.

46 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶದ ನಡುವೆಯೂ ಎದೆಗುಂದದೆ ಪ್ರಚಾರ ಮಾಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮಿತ್ ಶಾ ಪ್ರಶಂಸಿದ್ದಾರೆ.

“ಸ್ವಾತಂತ್ರ್ಯದ ನಂತರ, ಅತ್ಯಂತ ಶ್ರಮದಾಯಕವಾದ, ವ್ಯಾಪಕವಾದ ಚುನಾವಣಾ ಪ್ರಚಾರ ಇದಾಗಿದ್ದು, ಮೋದಿಯವರ ಪ್ರಭಾವವು ಅಭೂತಪೂರ್ವವಾಗಿತ್ತು. ಫೆಬ್ರವರಿ ಹಾಗೂ  ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಏಲ್ಲಿಯೂ ಭೇಟಿ ನೀಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಾರ್ಚ್ 10 ರಂದು ಏಳು ಹಂತಗಳ ಲೋಕಸಭಾ ಚುನಾವಣೆ ಘೋಷಣೆಯಾಗಿತ್ತು.ಮಾರ್ಚ್ 28 ರಂದು ಮೀರತ್ ನಿಂದ ಚುನಾವಣಾ ಪ್ರಚಾರವನ್ನು ಆರಂಭಿಸಿದ ಮೋದಿ, ನಾಲ್ಕು ರೋಡ್ ಶೋ, 142 ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಸಭೆಗಳಲ್ಲಿ ಅಂದಾಜು ಸುಮಾರು 1.5 ಕೋಟಿ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. 1.5 ಲಕ್ಷ ಕಿಲೋ ಮೀಟರ್ ವಾಯುಯಾನ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

ತಾನೂ 312 ಲೋಕಸಭಾ ಕ್ಷೇತ್ರಗಳನ್ನು ಸುತ್ತಿದ್ದು, 18 ರೋಡ್ ಶೋ,  161 ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದು, 1.58 ಲಕ್ಷ ಕಿಲೋಮೀಟರ್ ಪ್ರಯಾಣಿಸಿರುವುದಾಗಿ ಅಮಿತ್ ಶಾ ತಿಳಿಸಿದರು.

ಬಿಜೆಪಿ ಯಶಸ್ವಿಯಾಗಿ ಸಮಾಜದ ಎಲ್ಲಾ ವರ್ಗಗಳನ್ನು ತಲುಪಿದ್ದು, ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ