ವಿಶ್ವಕಪ್ ಮಹಾಸಂಗ್ರಾಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಐಪಿಎಲ್ನಲ್ಲಿ ಬ್ಯುಸಿಯಾಗಿದ್ದ ಟೀಮ್ ಇಂಡಿಯಾ ಈಗ ವಿಶ್ವವನ್ನ ಆಳೋಕೆ ಹೊರಟಿದೆ. ಆದ್ರೆ, ಟೀಮ್ ಇಂಡಿಯಾ ವಿಶ್ವವನ್ನಾಳೋ ಕನಸು ಮಾತ್ರ ಸುಲಭದ ಮಾತಾಗಿಲ್ಲ. ಅದು ಯಾಕೆಂದ್ರೆ ವಿರಾಟ್ ಕೊಹ್ಲಿ ಪಡೆ ಕೆಲ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ. ಅಸಲಿಗೆ ಆ ಸವಾಲುಗಳೇನು ಅನ್ನೋದನ್ನ ನಾವು ತೋರಿಸ್ತೀವಿ ನೋಡಿ..
ಸಾಲಿಡ್ ಓಪನಿಂಗ್ ಕೊಡಬೇಕು ರೋಹಿತ್ – ಧವನ್
ವಿಶ್ವಕಪ್ನಲ್ಲಿ ತಂಡದ ಓಪನರ್ಸ್ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಎಲ್ಲ ತಂಡಗಳಿಗೂ ಆeಛಿeಟಿಣ ಓಪನಿಂಗ್ ಕೊಡೋದೇ ದೊಡ್ಡ ಸವಾಲಾಗಿರುತ್ತೆ. ಹಾಗೆ ಈ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಓಪನರ್ಸ್ಗಳಾಗಿ ಕಣಕ್ಕಿಳಿಯುತ್ತಿದ್ದಾರೆ.
ವಿಶ್ವದಲ್ಲೆ ಬೆಸ್ಟ್ ಓಪನರ್ಸ್ಗಳೆನಿಸರುವ ಧವನ್ ಮತ್ತು ರೋಹಿತ್ ಶರ್ಮಾ ಈ ಬಾರಿ ಸಾಲಿಡ್ ಓಪನಿಂಗ್ ಕೊಟ್ರೆ ತಂಡ ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ. ಈ ಇಬ್ಬರು ಓಪನರ್ಸ್ಗಳು ಕಳೆದ ಬಾರಿಯ ವಿಶ್ವಕಪ್ನಲ್ಲೂ ಓಪನರ್ಸ್ಗಳಾಗಿ ಒಳ್ಳೆಯ ಪರ್ಫಾಮನ್ಸ್ ಕೊಟ್ಟಿದ್ರು. ಇದೀಗ ಇದೇ ಜೋಡಿ ಈ ಬಾರಿಯು ವಿಶ್ವಯುದ್ದದಲ್ಲಿ ಕಣಕ್ಕಿಳಿಯುತ್ತಿದೆ.
ನಾಲ್ಕರ ಸಮಸ್ಯೆಗೆ ಸಿಗಬೇಕಿದೆ ಉತ್ತರ
ಟೀಂ ಇಂಡಿಯಾವನ್ನ ಕಳೆದ ಮೂರು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ ಅಂದ್ರೆ ನಾಲ್ಕನೆ ಸ್ಲಾಟ್. ಕಳೆದ ಎರಡು ವರ್ಷಗಳಿಂದ ಈ ಸ್ಲಾಟ್ನಲ್ಲಿ ಬರೋಬ್ಬರಿ ಹನ್ನೊಂದು ಆಟಗಾರರು ಆಡಿದ್ರು ಈ ಸ್ಲಾಟ್ನಲ್ಲಿ ಯಾರು ಗಟ್ಟಿಯಾಗಿ ನಿಂತಿಲ್ಲ. ಕಳೆದ ವರ್ಷ ಹೈದ್ರಾಬಾದ್ ಬ್ಯಾಟ್ಸಮನ್ ಅಂಬಟಿ ರಾಯ್ಡು ಭರವಸೆ ಮೂಡಿಸಿದ್ರು. ಆದರೆ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ವಿರುದ್ಧ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ವಿಶ್ವಕಪ್ ಟಿಕೆಟ್ ಪಡೆಯುವಲ್ಲಿ ಪ್ಲಾಪ್ ಆದ್ರು. ಹೀಗಾಗಿ ವಿಶ್ವಕಪ್ನಲ್ಲಿ ನಾಲ್ಕನೆ ಕ್ರಮಾಂಕದಲ್ಲಿ ಯಾರು ಆಡ್ತಾರೆ ಅನ್ನೋದು ಕಗ್ಗಂಟಾಗಿ ಉಳಿದಿದೆ. 4ನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್ಮನ್ನ್ನ ಕಣಕ್ಕಿಳಿಸೋದಾಗಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಆದ್ರೆ, ಯಾರು ಅನ್ನೊದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಐಪಿಎಲ್ ಫಾರ್ಮ್ ಮುಂದುವರೆಸ ಬೇಕು ಧೋನಿ-ಹಾರ್ದಿಕ್..!
ಐಪಿಎಲ್ನಲ್ಲಿ ಸ್ಲಾಗ್ ಓವರ್ಸ್ಗಳಲ್ಲಿ ಆಧಾರ ಸ್ಥಂಭಗಳಾಗಿದ್ದ ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯಾ, ವಿಶ್ವಕಪ್ನಲ್ಲಿ ಇದೇ ಫಾರ್ಮ್ ಮುಂದುವರೆಸಬೇಕಿದೆ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡೋ ಧೋನಿ ಅನುಭವ ತಂಡಕ್ಕೆ ನೆರವಾಗೋದ್ರ ಜೊತೆಗೆ ಹಾರ್ದಿಕ್ ಪಾಂಡ್ಯಾರ ಪವರ್ ವಿಶ್ವಕಪ್ನಲ್ಲಿ ಮುಂದುವರಿಸುವುದು ಆಟಗಾರರಿಗೆ ದೊಡ್ಡ ಸವಾಲಾಗಿದೆ. ಇನ್ನೂ ಆಲ್ರೌಂಡರ್ ವಿಜಯ್ ಶಂಕರ್ ಫ್ಲಾಪ್ ಪರ್ಫಾಮೆನ್ಸ್ ವಿರಾಟ್ ಕೊಹ್ಲಿ ಆತಂಕ್ಕೆ ಕಾರಣವಾಗಿದೆ.
ಮ್ಯಾಚ್ ವಿನ್ನರ್ಸ್ಗಳಾಗಬೇಕು ಬೌಲರ್ಸ್
ಐಪಿಎಲ್ ಟೂರ್ನಿಯಲ್ಲಿ ಬರ್ಬದ್ ಆಗಿ ಕಂಡಿದ್ದೆ ಬೌಲಿಂಗ್ ಡಿಪಾರ್ಟ್ಮೆಂಟ್, ಹೀಗಾಗಿ ವಿಶ್ವಕಪ್ನಲ್ಲಿ ಭಾರತೀಯ ಬೌಲರ್ಗಳು ಪ್ರಮುಖ ಪಾತ್ರ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ತೋರಿದ್ದ ಪ್ರದರ್ಶನ ವಿಶ್ವಕಪ್ನಲ್ಲಿ ಬೂಮ್ರಾ ಕಾಯ್ದುಕೊಳ್ಳಬೇಕು. ಯಾರ್ಕರ್ ಕಿಂಗ್ ಬೂಮ್ರಾ, ಮೊಹ್ಮದ್ ಶಮಿ ಮಿಂಚಿದ್ದಾರೆ. ಆದರೆ ಸ್ವಿಂಗ್ ಕಿಂಗ್ ಭುವಿ ಮತ್ತು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಫ್ಲಾಪ್ ಪರ್ಫಾಮನ್ಸ್ ಕೊಟ್ಟಿದ್ದಾರೆ.
ಒಟ್ನಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಕಿರೀಟಕ್ಕೆ ಮುತ್ತಿಡಬೇಕಾದರೆ. ಟೀಮ್ ಇಂಡಿಯಾ ಈಗಾಲೇ ಸವಾಲುಗಳನ್ನ ಅರಿತು ಮುನ್ನಡೆಯಬೇಕಿದೆ.