ಏಕದಿನ ವಿಶ್ವಕಪ್ ಮೇಲೆ ಟೀಮ್ ಇಂಡಿಯಾ ಕಣ್ಣು : ವಿಶ್ವಯುದ್ದದಲ್ಲಿ ಈ ಮೂವರು ಆಟಗಾರರೇ ತಂಡದ ಟ್ರಂಪ್ ಕಾರ್ಡ್

ಇಡೀ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಮಹಾ ಸಮರಕ್ಕೆ ಕೌಂಟ್ ಡೌನ್ ಶರುವಾಗಿದೆ. ಮಹಾ ವಿಶ್ವ ಯುದ್ದಕ್ಕೆ ಇನ್ನು ಕೇವಲ 13 ದಿನಗಳು ಬಾಕಿ ಉಳಿದಿದ್ದು ವರ್ಲ್ಡ್ಕಪ್ ಕಿರೀಟ ಗೆಲ್ಲುವ ಕನಸಿನೊಂದಿಗೆ ಟೀಮ್ ಇಂಡಿಯಾ ಆಂಗ್ಲರ ನಾಡಿಗೆ ಹೊರಡಲು ಸಜ್ಜಾಗಿದೆ. ಆದ್ರೆ, ಟಿಮ್ ಇಂಡಿಯಾ ವಿಶ್ವಕಪ್ ಗೆಲ್ಲಬೇಕಾದ್ರೆ ಈ ಮೂವರು ಆಟಗಾರರ ಪ್ರದರ್ಶನ ಅತಿ ಮುಖ್ಯವೆನಿಸಿದೆ. ಹೀಗಾಗಿಯೇ ಇಂದು ಕ್ರಿಕೆಟ್ ಜಗತ್ತಿನ ಚಿತ್ತ ಆ ಮೂರು ಆಟಗಾರರ ಮೇಲೆ ನೆಟ್ಟಿದೆ..

ವಿಶ್ವಕಪ್ ವೇಳೆಗೆ ಫಿಟ್ ಆಗ್ತಾರಾ ಕೇದಾರ್ ಜಾಧವ್
ಐಪಿಎಲ್ ಆಡಿ ಸದ್ಯ ರಿಲ್ಯಾಕ್ಸ್ ಆಗುತ್ತಿರುವ ಟೀಮ್ ಇಂಡಿಯಾ ಆಟಗಾರರು ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾದಲ್ಲಿ ಇದೀಗ ವಿಶ್ವಕಪ್ ಮುಡಿಗೇರಿಸಿಕೊಳ್ಳಲೇ ಬೆಂಕೆಂದು ಟೊಂಕ ಕಟ್ಟಿ ನಿಂತಿದೆ.. ಸದ್ಯದ ನಾಲ್ಕನೇ ಸ್ಲಾಟ್ಗೆ ಕೆ.ಎಲ್.ರಾಹುಲ್, ದಿನೇಶ್ ಕಾರ್ತಿಕ್ ನಡುವೆ ನೇರ ಪೈಪೋಟಿ ಎದುರಾಗಿದೆ. ಇನ್ನೂ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಆನ್ ಫೀಲ್ಡ್ನಲ್ಲಿ ಸಿಗಬೇಕಿದೆ. ಐಪಿಎಲ್ನಲ್ಲಿ ವೇಳೆ ಗಾಯಗೊಂಡ ಕೇದಾರ್ ಜಾಧವ್ ವಿಶ್ವಕಪ್ ವೇಳೆಗೆ ಫಿಟ್ ಆಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. ಆಂಗ್ಲರ ನಾಡಲ್ಲಿ ವಿಶ್ವಕಪ್ ಎಂಬ ಕಿರೀಟ ಭಾರತದ ಮುಡಿಗೇರಿಸಿಕೊಳ್ಳಬೇಕಾದ್ರೆ ಅಷ್ಟು ಸುಲಭದ ಮಾತಲ್ಲ. ಈ ಮೂವರು ಆಟಗಾರರು ಕ್ಲಿಕ್ ಆದರೆ ವಿಶ್ವಕಪ್ ಭಾರತದ ಮುಡಿಗೇರುವುದು ಗ್ಯಾರಂಟಿ. ಅಸಲಿಗೆ ಆ ಮೂವರು ಆಟಗಾರರು ಯಾರು ಅನ್ನೋದನ್ನ ನಾವ್ ತೋರಿಸ್ತೀವಿ ನೋಡಿ..

 ಕಿಂಗ್ ಜಸ್ಪ್ರೀತ್ ಬೂಮ್ರಾ
ಯೆಸ್. ಸದ್ಯ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ ವರ್ಲ್ಡ್ ದಿ ಬೆಸ್ಟ್ ಬೌಲರ್. ಡೆತ್ ಓವರ್ಸ್ ಸ್ಪೆಷಲಿಸ್ಟ್ ಆಗಿರುವ ಬೂಮ್ರಾ, ತಮ್ಮ ಡೆಡ್ಲಿ ಯಾರ್ಕರ್ಗಳ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳ ವಿಲನ್ ಆಗ್ತಾರೆ. ಇವರು ತಂಡದ ಟಾಪ್ ಕ್ಲಾಸ್ ಬೌಲರ್ ಆಗಿದ್ದಾರೆ. ಇನ್ನೂ ಓತ್ತಡದ ನಡುವೆಯೂ ಉತ್ತಮ ದಾಳಿ ಸಂಘಟಿಸುವುದನ್ನ ಬೂಮ್ರಾ ಕರಗತ ಮಾಡಿಕೊಂಡಿದ್ದಾರೆ. ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಆಗಿದ್ದಾರೆ. ಮೊನ್ನೆ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಮುಂಬೈ ರೋಚಕ ಗೆಲುವು ದಾಖಲಿಸುವುದರ ಹಿಂದೆ ಬೂಮ್ರಾ ಪಾಲು ಕೂಡ ಇದೆ ಅನ್ನೋದನ್ನ ಯಾರು ಮರೆಯುವಂತಿಲ್ಲ.

ಯಾರ್ಕರ್ ಕಿಂಗ್ ಬೂಮ್ರಾ ಈ ಬಾರಿ ಐಪಿಎಲ್ನಲ್ಲಿ 16 ಪಂದ್ಯಗಳನ್ನಾಡಿದ್ದು 19 ವಿಕೆಟ್ ಪಡೆದಿದ್ದಾರೆ. 6.63 ಎಕನಾಮಿ ರೇಟ್ ಹೊಂದಿದ್ದಾರೆ.

ಮಿಸ್ಟರ್ ಕೂಲ್ ಧೋನಿ
ಧೋನಿ ಇಲ್ಲದೆ ವಿಶ್ವಕಪ್ ಗೆಲ್ಲಕ್ಕೆ ಆಗಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ಬಾರಿ ಏನಾದ್ರೂ ವಿಶ್ವಕಪ್ ಗೆಲ್ಲಬೇಕಿದ್ರೆ ಅದು ಧೋನಿಯ ಚಾಣಾಕ್ಷ ರಣತಂತ್ರದಿಂದ ಮಾತ್ರ ಅನ್ನೋದು ಕ್ಯಾಪ್ಟನ್ ಕೊಹ್ಲಿಗೂ ಗೊತ್ತಿರೋ ವಿಚಾರ. ಸದ್ಯ ಐಪಿಎಲ್ನಲ್ಲಿ ಚೆನ್ನೈ ತಂಡಕ್ಕೆ ಐಪಿಎಲ್ ಕಪ್ ಗೆಲ್ಲಿಸಿಕೊಡುವಲ್ಲಿ ಎಡವಿರುವ ಚೆನ್ನೈ ತಲೈವಾ ಧೋನಿ ತಮಗಾದ ನೋವನ್ನೆಲ್ಲ ಮರೆತು ವಿಶ್ವಕಪ್ಗೆ ಸಜ್ಜಾಗುತ್ತಿದ್ದಾರೆ. ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಮತ್ತು ಫೀಲ್ಡ್ ಸೆಟ್ಟಿಂಗ್ನಲ್ಲಿ ಚಾಣಾಕ್ಷ ರಣ ತಂತ್ರ ರೂಪಿಸಿ ಎದುರಾಳಗಳಿಗೆ ಸೋಲಿನ ರುಚಿ ತೋರಿಸ್ತಾರೆ.

ಈ ಬಾರಿಯ ಐಪಿಎಲ್ನಲ್ಲಿ ಧೋನಿ
ಈ ಬಾರಿಯ ಐಪಿಎಲ್ನಲ್ಲಿ 15 ಪಂದ್ಯಗಳನ್ನಾಡಿರುವ ಧೋನಿ 416 ರನ್ ಕಲೆ ಹಾಕಿದ್ದಾರೆ. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿರುವ ಚೆನ್ನೈ ತಲೈವಾ 83.20 ಬ್ಯಾಟಿಂಗ್ ಎವರೇಜ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ಐಪಿಎಲ್ನಲ್ಲಿ ಡೆಡ್ಲಿ ಬ್ಯಾಟಿಂಗ್ ಮಾಡಿ ಮಿಂಚಿದ್ದಾರೆ. ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ವೇಗದ ಅರ್ಧ ಶತಕ ಬಾರಿಸಿರುವ ಈ ಬರೋಡಾ ಸ್ಟಾರ್ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಸಿಕ್ಸರ್ಗಳ ಸುರುಮಳೆಗೈದಿರುವ ಈ ಹಾರ್ಡ್ ಹಿಟ್ಟರ್ 16 ಪಂದ್ಯಗಳಿಂದ 29 ಸಿಕ್ಸರ್ಗಳನ್ನ ಹೊಡೆದ ಟೂರ್ನಿಯ ಮೂರನೇ ಬ್ಯಾಟ್ಸ್ಮನ್ ಎನಿಸಿದ್ದಾರೆ. ಈ ಬಾರಿ ಮುಂಬೈ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿರುವ ಹಾರ್ದಿಕ್ ಇದೀಗ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ.

ಒಟ್ನಲ್ಲಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಟೀಂ ಇಂಡಿಯಾ ಕೂಡ ರೇಸ್ನಲ್ಲಿದ್ದು ಈ ಮೂರು ಆಟಗಾರರು ತಂಡಕ್ಕೆ ಟ್ರಂಪ್ ಕಾರ್ಡ್ ಆಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ