ಆಂಗ್ಲರ ನಾಡಲ್ಲಿ ನಡೆಯುವ ವಿಶ್ವಕಪ್ನ್ನ ಇಡೀ ಕ್ರಿಕೆಟ್ ದುನಿಯಾವೇ ಎದುರು ನೋಡ್ತಿದೆ. ಇತ್ತ ಕೊಹ್ಲಿ ಸೈನ್ಯ ಕೂಡ ಇನ್ನಿಲ್ಲದ ತಯಾರಿ ನಡೆಸ್ತಿದೆ.
ಹೀಗಿರುವಾಗ ಟೀಂಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವಕಪ್ ಆಯ್ಕೆಯಾಗಿರುವ ಟೀಂ ಇಂಡಿಯಾ ಆಯ್ಕೆಗಾರ ಬಗ್ಗೆ ಮಾತನಾಡಿದ್ದಾರೆ.
ಈ ಬಾರಿಯ ವಿಶ್ವಕಪ್ಗೆ ಟೀಂ ಇಂಡಿಯಾ ಆಯ್ಕೆ ಬಗ್ಗೆ ಪರ ವಿರೋದ ಎರಡೂ ಇವೆ. ಎಂಎಸ್. ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ವಿಶ್ವಕಪ್ ಆಯ್ಕೆ ಮಾಡಿಕೊಂಡಿರುವ ಟೀಂ ಇಂಡಿಯಾವನ್ನ ಸಮರ್ಥಿಸಿಕೊಂಡ್ರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮರಿ ರಿಷಭ್ ಪಂತ್ ಐಪಿಎಲ್ನಲ್ಲೂ ಅವಬ್ಬರಿಸಿದ್ರು ಪಂತ್ಗೆ ವಿಶ್ವಕಪ್ನಲ್ಲಿ ಯಾಕೆ ಚಾನ್ಸ್ ಕೊಡಲಿಲ್ಲ ಅಂಥ ಪಂತ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ರು.
ಸನ್ರೈಸರ್ಸ್ ವಿರುದ್ಧ ಅಬ್ಬರಿಸಿದ್ದ ರಿಷಭ್ ಪಂತ್
ರಿಷಬ್ ಮೊನ್ನೆ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಡೆಡ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ಆ ಪಂದ್ಯದಲ್ಲಿ ಪಂತ್ ಆಟ ನೋಡಿದವರೆಲ್ಲ ಪಂತ್ಗೆ ಯಾಕೆ ಅವಕಾಶ ಕೊಟ್ಟಿಲ್ಲ. ಪಂತ್ ಮುಂದೆ ದಿನೇಶ್ ಕಾರ್ತಿಕ್ ಪರ್ಫಾಮನ್ಸ್ ಏನೇನು ಅಲ್ಲ ಅಂತ ಅಭಿಪ್ರಾಯಪಟ್ಟಿದ್ರು.
ದಿನೇಶ್ ಕಾರ್ತಿಕ್ ಆಯ್ಕೆ ಸಮರ್ಥಿಸಿಕೊಂಡ ವಿರಾಟ್
ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ವಿಶ್ವಕಪ್ಗೆ ಟೀಂ ಇಂಡಿಯಾ ಆಯ್ಕೆ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಮರಿ ಧೋನಿ ರಿಷಭ್ ಪಂತ್ ಆಯ್ಕೆ ಬಗ್ಗೆಯೂ ವಿರಾಟ್ ಮಾತನಾಡಿದ್ದಾರೆ.
ಒತ್ತಡದ ಸಂದರ್ಭದಲ್ಲಿ ಕಾರ್ತಿಕ್ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇದನ್ನ ಎಲ್ಲರೂ ಒಪ್ಪಲ್ಲೇಬೇಕು. ಕಾರ್ತಿಕ್ಗೆ ಅನುಭವ ಇದೆ. ಧೋನಿಗೆ ಏನಾದ್ರು ಆದ್ರೆ ವಿಕೆಟ್ ಹಿಂದೆ ಕಾರ್ತಿಕ್ ಸಮರ್ಥವಾಗಿ ನಿಭಾಯಿಸುತ್ತಾರೆ ಬಗ್ಗೆ ವಿರಾಟ್ ಸಮರ್ಥಿಸಿಕೊಂಡಿದ್ದಾರೆ.
ವಿಶ್ವಕಪ್ಗೆ ಫಾರ್ಮ್ನಲ್ಲಿರುವ ರಿಷಭ್ ಪಂತ್ ಬದಲು ದಿನೇಶ್ ಕಾರ್ತಿಕ್ ಅವರನ್ನೆ ಆಯ್ಕೆ ಮಾಡಿಕೊಂಡ ಬಗ್ಗೆ ವಿರಾಟ್ ಕೊಹ್ಲಿಗೆ ತಮ್ಮೊಳಗೆ ಸಮರ್ಥನೆ ಇದೆ.
ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟು ಕೆಲವೇ ತಿಂಗಳಲ್ಲಿ ಮಿಂಚಿರಬಹುದು ಆದರೆ ಪ್ರಬುದ್ದತೆ ಇನ್ನು ಬಂದಿಲ್ಲ ಅನ್ನೋದು ಕೊಹ್ಲಿಯ ವಾದವಾಗಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಇತ್ತಿಚೆಗೆ ಐಪಿಎಲ್ ಟೂರ್ನಿ . ಆ ಘಟನೆ ಏನು ಅನ್ನೋದನ್ನ ನೋಡೋಣ ಬನ್ನಿ.
ಪಂತ್ಗೆ ಕ್ಲಾಸ್ ತೆಗೆದುಕೊಂಡಿದ್ದ ಕೊಹ್ಲಿ
ಫಿರೋಜ್ ಷಾ ಕೋಟ್ಲಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಮುಗ್ಗರಿಸಿತ್ತು. ಆದ್ರೆ ಈ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ, ಡೆಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ಗೆ ಸರಿಯಾಗೇ ಕ್ಲಾಸ್ ತಗೆದುಕೊಂಡಿದ್ರು.
ಒಟ್ನಲ್ಲಿ ರಿಷಭ್ ಐಪಿಎಲ್ನಲ್ಲಿ ಅಬ್ಬರಿಸಿಬಹುದು ಆದ್ರೆ ಪಂತ್ಗೆ ಅನುಭವದ ಕೊರತೆ ಇರೋದು ನಿಜ ಹೀಗಾಗಿ ಕ್ಯಾಪ್ಟನ್ ಕೊಹ್ಲಿ ಪಂತ್ ಬದಲು ಕಾರ್ತಿಕ್ರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಪಂತ್ ಇನ್ನು ಹೆಚ್ಚು ಹೆಚ್ಚು ಅನುಭವ ಪಡೆದು ಮುಂದಿನ ವಿಶ್ವಕಪ್ನಲ್ಲಿ ಚಾನ್ಸ್ ಸಿಗಲಿ ಅನ್ನೊದೇ ಅಭಿಮಾನಿಗಳ ಆಶಯವಾಗಿದೆ.