ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡ್ಯಾಶಿಂಗ್ ಓಪನರ್ ಶೇನ್ ವ್ಯಾಟ್ಸನ್ ಮೊನ್ನೆ ಮುಂಬೈ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯವರೆಗೂ ಅಬ್ಬರದ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ರು. ಅಂದು ಡೆಡ್ಲಿ ಬ್ಯಾಟಿಂಗ್ ಮಾಡಿದ ವ್ಯಾಟ್ಸನ್ ಅನುಭವಿಸಿದ ನೋವು ಇದೀಗ ರಿವೀಲ್ ಆಗಿದೆ.
ಮೊನ್ನೆ ಉಪ್ಪಾಳ್ ಅಂಗಳದಲ್ಲಿ ನಡೆದ ರಣ ರೋಚಕ ಕದನದಲ್ಲಿ 150 ರನ್ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ತಂಡ ಆಘಾತಗಳ ಮೇಲೆ ಆಘಾತ ಅನುಭವಿಸಿ ಸೋಲಿನ ಸುಳಿಯಲ್ಲಿ ಸಿಲುಕುತ್ತಾ ಹೋಯ್ತು.ಆದರೆ ಇದಕ್ಕೆಲ್ಲ ವಿರುದ್ಧವಾಗಿ ನಿಂತ ಶೇನ್ ವ್ಯಾಟ್ಸನ್ ಡೆಡ್ಲಿ ಬ್ಯಾಟಿಂಗ್ ಮಾಡಿದ್ರು.
ತಂಡದ ಬ್ಯಾಟ್ಸ್ಮನ್ಗಳು ಬ್ಯಾಕ್ ಟು ಬ್ಯಾಕ್ ಪೆವಲಿಯನ್ ನಡೆಸುತ್ತಿದ್ರು ದೃತಿಗೆಡದ ವ್ಯಾಟ್ಸನ್ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದು ತಂಡವನ್ನ ಗೆಲುವಿನತ್ತ ಕೊಂಡೊಯ್ದಿದ್ರು. 59 ಎಸೆತ ಎದುರಿಸಿ ಈ ವ್ಯಾಟ್ಸನ್ 8 ಬೌಂಡರಿ 4 ಸಿಕ್ಸರ್ ಬಾರಿಸಿ ಒಟ್ಟು 80 ರನ್ ಗಳಿಸಿದ್ರು.
ವ್ಯಾಟ್ಸನ್ ರನೌಟ್ ಚೆನ್ನೈಗೆ ಕೈತಪ್ಪಿದ ಕಪ್
80 ರನ್ ಗಳಿಸಿ ತಂಡವನ್ನ ಗೆಲುವಿನತ್ತ ಕೊಂಡೊಯ್ಯುತ್ತಿದ್ದ ವ್ಯಾಟ್ಸನ್ ಮಲಿಂಗಾ ಅವರ 20 ನೇ ಓವರ್ನ ನಾಲ್ಕನೆ ನಾಲ್ಕನೆ ಎಸೆತದಲ್ಲಿ ಸಹ ರನ್ನರ್ ರವೀಂದ್ರ ಜಡೇಜಾ ಅವರ ಯಡವಟ್ಟಿನಿಂದಾಗಿ ಶೇನ್ ವ್ಯಾಟ್ಸನ್ ರನೌಟ್ ಬಲಗೆ ಬಿದ್ರು. ಇದರೊಂದಿಗೆ ಚೆನ್ನೈ ಕಪ್ ಗೆಲ್ಲುವ ಕನಸು ಭಗ್ನವಾಯಿತು.
ಒಂದು ವೇಳೆ ವ್ಯಾಟ್ಸನ್ ರನೌಟ್ ಆಗದೇ ಇದ್ದಿದ್ದರೇ ಚೆನ್ನೈ ತಂಡ ರೋಚಕ ಗೆಲುವು ಸಾಧಿಸಿ ಕಪ್ಗೆ ಮುತ್ತಿಕ್ಕುತ್ತಿತ್ತು . ಆದರೆ ವ್ಯಾಟ್ಸನ್ಗೆ ಅದೃಷ್ಟ ಕೊನೆಯಲ್ಲಿ ಕೈಕೊಟ್ಟಿತ್ತು.
ವ್ಯಾಟ್ಸನ್ ಪರಾಕ್ರಮದ ಹಿಂದೆ ಇತ್ತು ನೋವಿನ ಕತೆ
ಮುಂಬೈ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಾರಾದ ಶೇನ್ ವ್ಯಾಟ್ಸನ್ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.
ವ್ಯಾಟ್ಸನ್ ಪರಾಕ್ರಮದ ಹಿಂದೆ ಇತ್ತು ನೋವಿನ ಕತೆ. ಹಾಗಾದ್ರೆ ಬನ್ನಿ ಈ ಆಸಿಸ್ ಮಾಜಿ ಬ್ಯಾಟ್ಸಮನ್ ಅನುಭವಿಸಿದ ನೋವಿನ ಕತೆ ಏನು ಅನ್ನೋದನ್ನ ನೋಡೋಣ ಬನ್ನಿ.
ವ್ಯಾಟ್ಸನ್ ನೋವಿನ ಕತೆಯನ್ನ ರಿವೀಲ್ ಮಾಡಿದ ಭಜ್ಜಿ
ಪರಾಕ್ರಮ ಮೆರೆದು ನೋವಿನ ಯಾತನೆ ಅನುಭವಿಸಿದ ವ್ಯಾಟ್ಸನ್ ಬಗ್ಗೆ ಹರ್ಭಜನ್ ಸಿಂಗ್ ರಿವೀಲ್ ಮಾಡಿದ್ದಾರೆ. ಶೇನ್ ವ್ಯಾಟ್ಸನ್ ಬ್ಯಾಟಿಂಗ್ ಮಾಡುವ ಮುನ್ನ ಫೀಲ್ಡಿಂಗ್ ಮಾಡುವ ವೇಳೆ ಡೈವ್ ಹೊಡೆದು ಕಾಲಿಗೆ ಗಾಯ ಮಾಡಿಕೊಂಡಿದ್ರು. ವ್ಯಾಟ್ಸನ್ ಬ್ಯಾಟಿಂಗ್ ಮಾಡುವಾಗ ಕಾಲಿನಿಂದ ರಕ್ತ ಸುರಿಯುತ್ತಿತ್ತು. ಇದನ್ನ ಯಾರಿಗೂ ಹೇಳದ ವ್ಯಾಟ್ಸನ್ ನೋವನ್ನ ನುಂಗಿಕೊಂಡು ತಮ್ಮ ಪಾಡಿಗೆ ತಾವು ಬ್ಯಾಟಿಂಗ್ ಮಾಡಿದ್ದಾರೆ ಅಂಥ ಭಜ್ಜಿ ಎಂದು instagramನಲ್ಲಿ ರಿವೀಲ್ ಮಾಡಿದ್ದಾರೆ.
ವ್ಯಾಟ್ಸನ್ ಅವರ ಈ ತ್ಯಾಗದ ಆಟಕ್ಕೆ ಇಡೀ ಕ್ರಿಕೆಟ್ ದುನಿಯಾವೇ ಫಿದಾ ಆಗಿದೆ. ವ್ಯಾಟ್ಸನ್ ಅಬ್ಬರದ ಬ್ಯಾಟಿಂಗ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಅಭಿಮಾನಿಗಳು ಇದೀಗ ಅವರ ನೋವಿನ ಕತೆಯನ್ನ ಕೇಳಿ ಅಭಿಮಾನಿಗಳು ರಿಯಲ್ ಜಂಟಲ್ಮನ್ ಅಂತ ಹಾಡಿ ಹೊಗಳಿದ್ದಾರೆ.
ತಂಡದ ಗೆಲುವಿಗಾಗಿ ನೋವಿನಲ್ಲೂ ಆಡಿದ ವ್ಯಾಟ್ಸನ್ ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ.