ಎಲ್​ಐಸಿ ಪಾಲಿಸಿ ಇಷ್ಟವಾಗಲಿಲ್ಲವೇ? ಹಾಗಾದರೆ ಈಗಲೇ ಹಿಂಪಡೆಯಬಹುದು; ಹೇಗಂತೀರಾ?

ನವದೆಹಲಿಸಾಮಾನ್ಯವಾಗಿ ಯಾರದೋ ಮಾತು ಕೇಳಿ ಅಥವಾ ಆನ್​​ಲೈನ್​​ನಲ್ಲಿ ನೋಡಿ ಲೈಫ್​​ ಇನ್ಸುರೆನ್ಸ್​ ಪಾಲಿಸಿ ಮಾಡಿಸಿಕೊಳ್ಳುತ್ತೇವೆ. ಪಾಲಿಸಿ ಮಾಡಿಸಿದ ನಂತರ ಒಲ್ಲದ ಮನಸ್ಸಿನಿಂದ ಪ್ರೀಮಿಯಮ್​​ ಹಣ ಪಾವತಿಸಲು ಹಿಂದೇಟು ಹಾಕುತ್ತೇವೆ. ಹೀಗೆ ಸಮಸ್ಯೆಯನ್ನು ಎದುರಿಸುತ್ತಿರುವ ಹಲವಾರು ಗ್ರಾಹಕರು ನಮ್ಮಲ್ಲಿಯೇ ಇದ್ದಾರೆ. ನೀವೂ ಕೂಡ ಈ ಸಮಸ್ಯೆಗೆ ಒಳಗಾಗಿದ್ದೀರಾ? ಸದ್ಯ ಮಾಡಿಸಿರುವ ಎಲ್​ಐಸಿ ಪಾಲಿಸಿ ಬೇಡವೇ? ಹಾಗಾದರೇ ಚಿಂತೆ ಮಾಡಬೇಡಿ, ಮತ್ತೆ ಪಾಲಿಸಿಯನ್ನು ರದ್ದು ಮಾಡುವ ಆಪ್ಷನ್​​ ನಮ್ಮಲಿದೆ.

ಭಾರತೀಯ ಇನ್ಸೂರೆನ್ಸ್​ ಕಾರ್ಪೊರೇಷನ್​ ಸಂಸ್ಥೆ  ಎಲ್​ಐಸಿ ಪಾಲಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಒಲ್ಲದ ಮನಸ್ಸಿನಿಂದ ಮಾಡಿಸಿದ ಪಾಲಿಸಿ ಬೇಡದೆ ಹೋದಲ್ಲಿ ನೀವು ರದ್ದು ಮಾಡಬಹುದಾಗಿದೆ. ಇದಕ್ಕೆಂದಲೇ ಗ್ರಾಹಕರಿಗೆ ಎಲ್​​ಐಸಿ ಸಂಸ್ಥೆ 15 ದಿನಗಳಲ್ಲಿ ಪಾಲಿಸಿ ಬದಲಾಯಿಸುವ ಅಥವಾ ರದ್ದು ಮಾಡುವ ಅವಕಾಶ ಮಾಡಿಕೊಟ್ಟಿದೆ.

ಎಲ್​ಐಸಿ ಪಾಲಿಸಿದಾರರಿಗೆ ‘ಫ್ರೀ ಲುಕ್​ ಪಿರಿಯಡ್​​​‘ ಎಂಬ ಆಪ್ಷನ್​​​ ಅನ್ನು ಇತ್ತೀಚೆಗೆ ಭಾರತೀಯ ಇನ್ಸೂರೆನ್ಸ್​ ಕಾರ್ಪೊರೇಷನ್​ ಜಾರಿಗೊಳಿಸಿದೆ. ಇದರ ಅಡಿಯಲ್ಲಿ ನೀವು ಪಾಲಿಸಿಯನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಅಂತೆಯೇ ಇದಕ್ಕಾಗಿ ಕೊನೆಯ ನಿರ್ಣಯ ತೆಗೆದುಕೊಳ್ಳಲು ಫ್ರೀ ಲುಕ್​ ಪಿರಿಯಡ್ ಹೆಸರಿನಲ್ಲಿ​​ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

ಪಾಲಿಸಿಗಾಗಿ ನೀವು ಕಟ್ಟಿರುವ ಸಂಪೂರ್ಣ ಪ್ರೀಮಿಯಮ್​​ ಹಣ ವಾಪಸ್ಸು ಪಡೆಯಬಹುದಾಗಿದೆ. ಹಾಗಾಗಿ ಈಗಲೇ ಹತ್ತಿರದ ಭಾರತೀಯ ಇನ್ಸೂರೆನ್ಸ್​ ಕಾರ್ಪೊರೇಷನ್​ ಸಂಸ್ಥೆ ಕಚೇರಿಗೆ ಭೇಟಿ ನೀಡಿ, ಎಲ್​​ಐಸಿ ಬೇಕಾದರೆ ಬದಲಾಯಿಸಿಕೊಳ್ಳಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ