ಬೆಂಗಳೂರು,ಮೇ 14- ಶ್ರೀ ನಾದಬ್ರಹ್ಮ ಸಂಗೀತ ಸಭಾವು ಆ.23ರಿಂದ 25ರವರೆಗೆ 14ನೇ ರಾಜ್ಯಮಟ್ಟದ ನಾದ ಕಿಶೋರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ತಾಳವಾದ್ಯ ನುಡಿಸುವಿಕೆ ಹೊರತುಪಡಿಸಿ ಹಿಂದೂಸ್ತಾನಿ ಮತ್ತು ಶಾಸ್ತ್ರೀಯ ಸಂಗೀತ ಗಾಯನ ಮತ್ತು ವಾದ್ಯ ಎರಡೂಕ್ಕೂ ಅವಕಾಶವಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು 30 ವರ್ಷದೊಳಗಿನವರಾಗಿದ್ದು, ತಮ್ಮ ಗಾಯನ ಕಲೆಯ ಒಂದು ಅಡಿಯೋ ಸಿಡಿ ಮತ್ತು ಸ್ವವಿವರಗಳೊಂದಿಗೆ ಜು.1ರೊಳಗೆ ಸಂಸ್ಥೆಗೆ ಕಳುಹಿಸಬೇಕು.
ಕಾರ್ಯದರ್ಶಿ, ಶ್ರೀ ನಾದಬ್ರಹ್ಮ ಸಂಗೀತ ಸಭಾ, ಸಂಗೀತ ಕಲಾನಿಧಿ ವಸುದೇವಾಚಾರ್ಯ ಭವನ, ಜೆಎಲ್ಬಿ ರಸ್ತೆ,ಲಕ್ಷ್ಮಿಪುರಂ, ಮೈಸೂರು ಅಥವಾ ಶ್ರೀ ಕೆ.ಎಸ್.ಎನ್.ಪ್ರಸಾದ್, ಪ್ರಗತಿ ಮೆಕೆಮ್, 162(ಪಿ), 2ನೇ ಅಡ್ಡರಸ್ತೆ ಬೆಳಗೊಳ ಕೈಗಾರಿಕಾ ಪ್ರದೇಶ, ಮೇಟಗಳ್ಳಿ ಅಂಚೆ, ಮೈಸೂರು-16 ಇಲ್ಲಿಗೆ ಕಳುಹಿಸಬಹುದು.
ಆಯ್ಕೆಯಾದ 10 ಕಲಾವಿದರು ಆಗಸ್ಟ್ನಲ್ಲಿ ನಡೆಯುವ ಕಿಶೋರೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಕಲಾಸ್ಪರ್ಧೆಗೆ ಅವಕಾಶ ನೀಡಲಾಗುವುದು. ಆಯ್ಕೆಗೊಂಡವರಿಗೆ ಜು.25ರಂದು ಈ ಬಗ್ಗೆ ಸೂಚನೆ ನೀಡಲಾಗುವುದು ಎಂದು ಸಭಾದ ಕಾರ್ಯದರ್ಶಿ ಕೆ.ಎಸ್.ಎನ್.ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.