ಬೆಂಗಳೂರು, ಮೇ 11-ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ. ಆದರೂ ಅಂತಹ ಯೋಗ ಬಂದರೆ ಅದನ್ನು ಯಾರಿಂದಲೂ ತಡೆಯಲು ಆಗಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೀಗ ಲೋಕೋಪಯೋಗಿ ಸಚಿವನಾಗಿದ್ದೇನೆ. ಸದ್ಯದ ಮಟ್ಟಿಗೆ ಈ ಸ್ಥಾನದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ.
ನನ್ನದು ಸ್ವಾತಿ ನಕ್ಷತ್ರವಾಗಿರುವುದರಿಂದ ಯಾರಿಂದಲೂ ನನ್ನ ಯೋಗ, ಅದೃಷ್ಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.