ಬೆಂಗಳೂರು, ಮೇ 11-ಬೆಟ್ಟಗುಡ್ಡಗಳ ನಡುವೆ ಸಲೀಸಾಗಿ ಸಂಚರಿಸುವಂತಹ ಮತ್ತು ಅತ್ಯಾಧುನಿಕ ಸೌಲಭ್ಯವಿರುವ ಬೋಯಿಂಗ್ ಕಂಪೆನಿ ನಿರ್ಮಿತ ಅಪಾಚಿ ಗಾರ್ಡಿಯನ್ ಹೆಲಿಕಾಪ್ಟರ್‍ನ್ನು ಇಂದು ವಾಯುಸೇನೆಗೆ ಸಮರ್ಪಿಸಲಾಗಿದೆ.
2015ರ ಸೆಪ್ಟೆಂಬರ್‍ನಲ್ಲಿ ಕೇಂದ್ರ ಸರ್ಕಾರ ಅಮೆರಿಕಾದ ಕಂಪೆನಿ ಜೊತೆ ಭಾರತ ಸರ್ಕಾರ ಸುಮಾರು 14,000 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದು, 22 ಅಪಾಚಿ ಹೆಲಿಕಾಪ್ಟರ್‍ಗಳನ್ನು ಪೂರೈಸಲು ಒಪ್ಪಿರುವ ಅಮೆರಿಕಾದ ಕಂಪೆನಿ ಇಂದು ಮೊದಲ ಹೆಲಿಕಾಪ್ಟರನ್ನು ಭಾರತೀಯ ಸೇನೆಗೆ ಸಮರ್ಪಿಸಿದೆ.
ಅಪಾಚಿ ಭವಿಷ್ಯದ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.ಬೆಟ್ಟಗುಡ್ಡಗಳ ನಡುವೆ ಸುಲಭವಾಗಿ ಸಂಚರಿಸುತ್ತದೆ.ಮಿಸೈಲ್ಸ್, ಅಗ್ನಿ ನಿಯಂತ್ರಕ ರಾಡರ್‍ಗಳು, ಯುದ್ಧ ಭೂಮಿಯ ಚಿತ್ರೀಕರಣ, ಹೆಚ್ಚು ಭಾರ ಸಾಗಿಸುವ ಸಾಮಥ್ರ್ಯ, ಇಂಟರ್‍ನೆಟ್ ಮೂಲಕ ಶಸ್ತ್ರಾಸ್ತ್ರಗಳ ನಿಯಂತ್ರಣ ಸೌಲಭ್ಯಗಳನ್ನು ಹೊಂದಿದೆ.ಭೂಸೇನೆಯ ಜೊತೆ ನಿರಂತರ ಸಂಪರ್ಕ ಸಾಧಿಸಿ ಜಂಟಿ ಕಾರ್ಯಾಚರಣೆ ನಡೆಸಲು ಅಗತ್ಯವಾದ ಆಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಭೂಸೇನೆಗೆ ಅಂತರಿಕ್ಷದಲ್ಲಿರುವ ವಾಯುಪಡೆ ಯುದ್ಧ ಕಾಲದಲ್ಲಿ ನೆರವು ನೀಡುವ ಸೌಲಭ್ಯಗಳು ಲಭ್ಯವಿರಲಿಲ್ಲ. ಹೀಗಾಗಿ ಅಪಾಚಿ ಹೆಲಿಕಾಪ್ಟರ್ ಖರೀದಿಗೆ ಆಗಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅಮೆರಿಕಾ ಜೊತೆ ಒಪ್ಪಂದ ಮಾಡಿಕೊಂಡಿದ್ದರು.
2017ರ ಆಗಸ್ಟ್‍ನಲ್ಲಿ ಭಾರತದ ರಕ್ಷಣಾ ಸಚಿವಾಲಯ 4200 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ 6 ಹೆಲಿಕಾಪ್ಟರ್‍ಗಳನ್ನು ಖರೀದಿಸಲು ಸಮ್ಮತಿಸಿದೆ. ಅಪಾಚಿಯ ನಿರ್ವಹಣೆ ಮತ್ತು ಚಾಲನೆಯ ತರಬೇತಿಯನ್ನು ಅಮೆರಿಕಾ ಸೇನೆ, ಭಾರತೀಯ ಸೈನಿಕರಿಗೆ ನೀಡಲಿದೆ. ಕೇಂದ್ರ ಸರ್ಕಾರ ಬೋಯಿಂಗ್ ಕಂಪನಿ ಜೊತೆ ಸುಮಾರು 8 ಸಾವಿರ ಕೋಟಿ ರೂ.ಗಳ 15 ಚಿನೋಕ್ ಹೆಲಿಕಾಪ್ಟರ್ ಖರೀದಿಗೂ ಒಪ್ಪಂದ ಮಾಡಿಕೊಂಡಿದ್ದು, ಇದು 2020ರ ವೇಳೆಗೆ ಪೂರ್ಣಗೊಳ್ಳಲಿದೆ.