ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟ ಬಾಲಕ

ಹೊಸಕೋಟೆ, ಮೇ 11-ಪೆತ್ತನಹಳ್ಳಿಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ತಿರುಮಲ ಶೆಟ್ಟಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿನಾಯಕ ನಗರದ ನಿವಾಸಿ ಲಕ್ಷ್ಮೀಶ್(15) ಮೃತಪಟ್ಟ ಯುವಕ.
ಸ್ನೇಹಿತರ ಜೊತೆಗೂಡಿ ಪೆತ್ತನಹಳ್ಳಿ ಕೆರೆಯಲ್ಲಿ ಈಜಲು ಹೋಗಿದ್ದು, ಕೆರೆಯಲ್ಲಿ ಮರಳು ಫಿಲ್ಟರ್ ಮಾಡಿದ್ದ ಹೊಂಡದಲ್ಲಿ ಬಿದ್ದು ಮೃತ ಪಟ್ಟಿದ್ದಾನೆ. ಈತನ ಸ್ನೇಹಿತರು ಪಾರಾಗಿದ್ದಾರೆ.

ಘಟನೆ ಬಳಿಕ ಗಣಗಲು ಗ್ರಾಮಸ್ಥರು ತಿರುಮಲಶೆಟ್ಟಹಳ್ಳಿ ಪೆÇಲೀಸರು ಮತ್ತು ಹೊಸಕೋಟೆ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ನಾವು ಹಲವಾರು ಬಾರಿ ಮರಳು ಫಿಲ್ಟರ್ ದಂಧೆ ಬಗ್ಗೆ ಪೆÇಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ಬಾಲಕನ ಬಲಿಯಾಗಿದೆ ಎಂದು ಕಿಡಿಕಾರಿದರು.
ಇನ್ನಾದರೂ ಸರ್ಕಾರ ಮತ್ತು ಪೆÇಲೀಸರು ಈ ಫಿಲ್ಟರ್ ಮರಳು ದಂಧೆÉಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಣಗಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೃತನ ತಂದೆ ತಿರುಮಲಶೆಟ್ಟಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ